ಮೀರತ್: ಮೇ 20ರಂದು ಉತ್ತರ ಪ್ರದೇಶದ ಮೀರತ್‌ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಅಹ್ಮದ್ ನಗರದಲ್ಲಿ ಬುರ್ಖಾ ಧರಿಸಿದ್ದ ಮಹಿಳೆಗೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬ ಮುತ್ತಿಟ್ಟಿದ್ದ, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದೀಗ ಉತ್ತರಪ್ರದೇಶ ಪೊಲೀಸರು ಆರೋಪಿಯನ್ನು ಹಿಡಿದು ಲಾಠಿ ರುಚಿ ತೋರಿಸಿದ್ದಾರೆ.
ಮಹಿಳೆಯೊಬ್ಬರು ಕಿರಿದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಮುಂಭಾಗದಿಂದ ಬಂದ ಯುವಕನೊಬ್ಬ ಇದ್ದಕ್ಕಿದ್ದಂತೆ ಮಹಿಳೆಗೆ ಬಲವಂತವಾಗಿ ಮುತ್ತಿಕ್ಕಿ ಪರಾರಿಯಾಗಿದ್ದನು ವೀಡಿಯೊದಲ್ಲಿ ಕಾಣಬಹುದು. ಈ ಕೃತ್ಯದಿಂದ ಮಹಿಳೆ ಆಘಾತಕ್ಕೊಳಗಾಗಿ ಯುವಕನನ್ನು ಹಿಡಿಯಲು ಪ್ರಯತ್ನಿಸುತ್ತಾಳೆ. ಆದರೆ ಸಾಧ್ಯವಾಗಲಿಲ್ಲ. ಇಡೀ ಘಟನೆಯು ಹತ್ತಿರದ ಮನೆಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಘಟನೆಗೆ ನೆಟ್ಟಿಗರು ಖಂಡನೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ :ಸರ್ಧಾರ ಪಟೇಲರ ಸಲಹೆ ಸ್ವೀಕರಿಸಿದ್ದರೆ, ಕಾಶ್ಮೀರದಲ್ಲಿ ಉಗ್ರ ದಾಳಿಗಳು ನಡೆಯುತ್ತಿರಲಿಲ್ಲ : ಮೋದಿ
In Meerut, Uttar Pradesh, A mischievous Guy kissed a woman passing by and ran away.
In response to this, the woman has started abusing him continuously (Use-Headphones 🎧
pic.twitter.com/sAogLPxCRp— Ghar Ke Kalesh (@gharkekalesh) May 26, 2025
ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರಿಂದ ಕ್ರಮ..!
ವಿಡಿಯೋ ವೈರಲ್ ಆದ ನಂತರ, ಮೀರತ್ ಪೊಲೀಸರು ತಕ್ಷಣ ಕ್ರಮ ಕೈಗೊಂಡರು. ಅಹ್ಮದ್ ನಗರ ಪ್ರದೇಶದಲ್ಲಿ ಅಳವಡಿಸಲಾಗಿರುವ ಹಲವಾರು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ ನಂತರ, ಪೊಲೀಸರು ಆರೋಪಿಯ ಮನೆ ಪತ್ತೆ ಮಾಡಿ ಆರೋಪಿ ಸೊಹೈಲ್ ನನ್ನು ವಶಕ್ಕೆ ಪಡೆದರು. ವೈರಲ್ ವೀಡಿಯೊದ ಆಧಾರದ ಮೇಲೆ ಆರೋಪಿಯನ್ನು ಗುರುತಿಸಲಾಯಿತು.