ವಿಜಯೇಂದ್ರ : KSDLಗೆ ಬಾಲಿವುಡ್ ನಟಿ ತಮನ್ನಾ ಭಾಟಿಯಾರನ್ನು ರಾಯಭಾರಿಯಾಗಿ ನೇಮಕ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ” ತಮನ್ನಾ ಭಾಟಿಯಾರನ್ನು ರಾಯಭಾರಿಯಾಗಿ ಮಾಡಿದ್ದರ ಹಿಂದೆ ರಾಜ್ಯದ ಹಿತದೃಷ್ಟಿ ಇದೆಯಾ? ಅಥವಾ ರಾಜಕಾರಣಿಗಳ ಹಿತದೃಷ್ಟಿ ಇದೆಯಾ” ಎಂದು ಪ್ರಶ್ನಿಸಿದ್ದಾರೆ.
ಮೈಸೂರು ಸ್ಯಾಂಡಲ್ ಸೋಪ್ ಜಾಹಿರಾತಿಗಾಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾರನ್ನು KSDLಗೆ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ. ಇದಕ್ಕೆ ಕನ್ನಡ ಸಂಘಟನೆಗಳು ಸೇರಿದಂತೆ ವಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಸಚಿವ ಎಂ.ಬಿ ಪಾಟೀಲ್ ಸಂಸ್ಥೆಯ ಹಿತದೃಷ್ಟಿಯಿಂದ ತಮನ್ನಾರನ್ನು ನೇಮಕ ಮಾಡಿಕೊಂಡಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ :ಅವೈಜ್ಞಾನಿಕವಾಗಿ ವಾಹನ ತಡೆದಿದ್ದಾರೆ; ಮಂಡ್ಯ ಘಟನೆ ತಲೆ ತಗ್ಗಿಸುವಂತದ್ದು; ಪರಮೇಶ್ವರ್
ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ವಿಜಯೇಂದ್ರ ‘ತಮನ್ನಾ ಭಾಟಿಯಾರನ್ನು ರಾಯಭಾರಿಯಾಗಿ ಮಾಡಿದ್ದರ ಹಿಂದೆ ರಾಜ್ಯದ ಹಿತದೃಷ್ಟಿ ಇದೆಯಾ ಅಥವಾ ರಾಜಕಾರಣಿಗಳ ಹಿತದೃಷ್ಟಿ ಇದೆಯಾ..? ತಮನ್ನಾ ಭಾಟಿಯಾಗೆ 6.5 ಕೋಟಿ ಹಣ ನೀಡಿದ್ದಾರೆ, ಇದು ಸರಿಯಿಲ್ಲ, ರಾಜ್ಯ ಸರ್ಕಾರ ತನ್ನ ಎಲ್ಲಾ ಡಿರ್ಪಾಟ್ಮೆಂಟ್ಗಳಿಗು ಟ್ಯಾಕ್ಸ್ ಕಲೆಕ್ಷನ್ ಮಾಡಲು ಹೇಳಿದ್ದಾರೆ. ಅದೇ ರೀತಿ ಪೊಲೀಸ್ ಇಲಾಖೆಗೂ ಟ್ಯಾಕ್ಸ್ ಕಲೆಕ್ಷನ್ ಕೆಲಸ ನೀಡಿದ್ದು. ಇದರ ಪರಿಣಾಮವಾಗಿ ನಿನ್ನೆ ಮಂಡ್ಯದಲ್ಲಿ ಮಗು ಸಾವಾಗಿದೆ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ :ಕೋವಿಡ್ ಹೆಚ್ಚಳ; 50 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ, ಆರೋಗ್ಯ ಸಿಬ್ಬಂದಿ ರಜೆ ಕಟ್
ಮುಂದುವರಿದು ಮಾತನಾಡಿದ ವಿಜಯೇಂದ್ರ ‘ತಮನ್ನಾ ಭಾಟಿಯಾ ಆಯ್ಕೆ ಬಗ್ಗೆ ನಮ್ಮ ಪ್ರಶ್ನೆ ಅಲ್ಲ, ಮಾರ್ಕೆಟಿಂಗ್ ದೃಷ್ಟಿಯಲ್ಲಿ ಯಾರನ್ನ ಹಾಕಿದ್ರೆ ಸೂಕ್ತ ಅಂತ ಯೋಚಿಸಲಿ. ಹಿಂದೆಯೂ ಬೇರೆ ರಾಜ್ಯದವರನ್ನ ನೇಮಕ ಮಾಡಿದ್ದರು. ಈಗ ಅದೇ ತಪ್ಪನ್ನ ಮುಂದುವರಿಸಬೇಕಾ..? ತಮನ್ನಾಗೆ ಇಷ್ಟೊಂದು ಹಣ ಕೊಟ್ಟಿದ್ದಾರೆ, ಇದರಿಂದ ಎಷ್ಟು ಲಾಭ ಮಾಡಿದ್ದಾರೆ ಎಂಬುದನ್ನ ಮುಂದೆ ಕೇಳ್ತೇವೆ. ಅರ್ಹರನ್ನು ರಾಯಭಾರಿ ಸ್ಥಾನಕ್ಕೆ ಆಯ್ಕೆ ಮಾಡಲಿ ಎಂದು ವಿಜಯೇಂದ್ರ ಹೇಳಿದರು.