ಬೆಂಗಳೂರು : ಬೈಕ್ ಸವಾರನ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಗಾಯಗೊಂಡ ಬೈಕ್ ಸವಾರ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ದ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡಿರುವ ಜಯನಗರ ಪೊಲೀಸರು ಆರೋಪಿಗಳ ವಿರುದ್ದ FIR ದಾಖಲಿಸಿದ್ದಾರೆ.
ಇದನ್ನೂ ಓದಿ :ಭೀಕರ ಅಪಘಾತ; ಕಾರ್ ಪಲ್ಟಿಯಾಗಿ ಸುರಕ್ಷಿತವಾಗಿ ಹೊರ ಬಂದವರ ಮೇಲೆ ಹರಿದ ಲಾರಿ, 6 ಮಂದಿ ಸಾ*ವು
ಜಯನಗರದ ನಾಲ್ಕನೇ ಬ್ಲಾಕ್ನ ಸ್ವರ್ಣ ಬಿಲ್ಡಿಂಗ್ ಬಳಿ ಘಟನೆ ನಡೆದಿದ್ದು. ಬೈಕ್ ಸವಾರ ಮೊಹಮ್ಮದ್ ಜುಹೇಬ್ ಎಂಬಾತನ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಗಾಯಗೊಂಡಿದ್ದು. ಮರ ಬಿದ್ದ ಪರಿಣಾಮ ಮೊಹಮ್ಮದ್ನ ಕೈ-ಕಾಲು ಮತ್ತು ತಲೆಗೆ ತೀವ್ರವಾಗಿ ಗಾಯವಾಗಿದೆ. ಆದರೆ ಈ ಮೊದಲೇ ಆ ಮರದ ಬುಡ ಹುಳು ತಿಂದು ಕೊಳೆತು ಹೋಗಿದ್ದು, ಅದನ್ನು ತೆರವು ಮಾಡಬೇಕು ಎಂದು ಬಿಬಿಎಂಪಿಗೆ ದೂರು ನೀಡಲಾಗಿತ್ತು. ಆದರೆ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ಮರವನ್ನು ತೆರವುಗೊಳಿಸದೆ ನಿರ್ಲಕ್ಷ ತೋರಿತ್ತು ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ :AMCA Project ; ಐದನೇ ತಲೆಮಾರಿನ ಯುದ್ದ ವಿಮಾನ ನಿರ್ಮಾಣಕ್ಕೆ ರಾಜನಾಥ್ ಸಿಂಗ್ ಅನುಮೋದನೆ
ಮರಬಿದ್ದು ಗಾಯಗೊಂಡಿರುವ ಮೊಹಮ್ಮದ್ ಜುಹೇಬ್ ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ದ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ದೂರು ದಾಖಲಿಸಿಕೊಂಡಿರುವ ಪೊಲೀಸರು ಬಿಬಿಎಂಪಿ ಮತ್ತು ಅರಣ್ಯ ಇಲಾಖೆ ವಿರುದ್ದ ಎಫ್ಐಆರ್ ದಾಖಲಿಸಿದ್ದಾರೆ. ಎಫ್ಐಆರ್ ಪ್ರಕಾರ ಬಿಬಿಎಂಪಿಯನ್ನು ಎ1 ಆರೋಪಿ ಮಾಡಲಾಗಿದ್ದು. ಅರಣ್ಯ ಇಲಾಖೆ ಎ2 ಆರೋಪಿಯಾಗಿದೆ.
ಇನ್ನು ಗಾಯಾಳು ಮಹಮ್ಮದ್ಗೆ ಜಯನಗರದ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು. ಪೊಲೀಸರು ಆಸ್ಪತ್ರೆಗೆ ಹೋಗಿ ಯುವಕನ ಬಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.