Thursday, August 21, 2025
Google search engine
HomeUncategorizedAMCA Project ; ಐದನೇ ತಲೆಮಾರಿನ ಯುದ್ದ ವಿಮಾನ ನಿರ್ಮಾಣಕ್ಕೆ ರಾಜನಾಥ್​ ಸಿಂಗ್ ಅನುಮೋದನೆ

AMCA Project ; ಐದನೇ ತಲೆಮಾರಿನ ಯುದ್ದ ವಿಮಾನ ನಿರ್ಮಾಣಕ್ಕೆ ರಾಜನಾಥ್​ ಸಿಂಗ್ ಅನುಮೋದನೆ

ದೆಹಲಿ: ತೇಜಸ್​ ಲಘು ಯುದ್ದ ವಿಮಾನ ನಿರ್ಮಾಣದ ನಂತರ ಭಾರತ ಮತ್ತೊಂದು ಸ್ವದೇಶಿ ನಿರ್ಮಿತ ಫೈಟರ್​ ಜೆಟ್​ ನಿರ್ಮಾಣಕ್ಕೆ ಕೈ ಹಾಕಿದ್ದು. ಮುಂದಿನ ವರ್ಷಗಳಲ್ಲಿ ಭಾರತವು ಐದನೇ ತಲೆಮಾರಿನ ಫೈಟರ್ ಜೆಟ್ ಅಭಿವೃದ್ಧಿಪಡಿಸಲಿದೆ. AMCA (ಅಡ್ವಾನ್ಸ್ಡ್​ ಮೀಡಿಯಂ ಕಾಂಬ್ಯಾಕ್ಟ್​ ಏರ್​ಕ್ರಾಫ್ಟ್​) ಯೋಜನೆ ಅಡಿಯಲ್ಲಿ ಭಾರತ ಈ ಯುದ್ದವಿಮಾನ ನಿರ್ಮಾಣಕ್ಕೆ ಕೈ ಹಾಕಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎಎಂಸಿಎ ಪ್ರೋಗ್ರಾಮ್ ಎಕ್ಸಿಕ್ಯೂಶನ್ ಮಾಡಲ್​​ಗೆ ಇಂದು ಮಂಗಳವಾರ ಅನುಮೋದನೆ ನೀಡಿದ್ದಾರೆ. ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ಎಡಿಎ) ಈ ಎಎಂಸಿಎ ಯೋಜನೆಯನ್ನು ನಡೆಸಲಿದ್ದು, ವಿವಿಧ ಕಂಪನಿಗಳ ನೆರವನ್ನು ಬಳಸಿಕೊಳ್ಳಲಿದೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯದ ಕಂಪನಿಗಳಿಗೆ ಸಮಾನ ಅವಕಾಶ ನೀಡಲಾಗುತ್ತಿದೆ. ಇದನ್ನೂ ಓದಿ :ಶಿವಣ್ಣ, ದರ್ಶನ್‌ ಬಗ್ಗೆ ಅವಹೇಳನ: ಕನ್ನಡ ಚಿತ್ರರಂಗದಿಂದ ಮಡೆನೂರು ಮನು ಬ್ಯಾನ್

ಇದರಲ್ಲಿ ಯಾವುದೇ ಕಂಪನಿಗಳು ಏಕಾಂಗಿಯಾಗಿ, ಅಥವಾ ಜಂಟಿಯಾಗಿ, ಅಥವಾ ಸಮೂಹವಾಗಿ ಈ ಯೋಜನೆಗೆ ಬಿಡ್ ಸಲ್ಲಿಸಬಹುದು. ಆದರೆ, ಎಲ್ಲಾ ಕಂಪನಿಗಳೂ ಕೂಡ ಭಾರತದವೇ ಆಗಿರಬೇಕು. ದೇಶದ ಕಾನೂನು ಮತ್ತು ನಿಯಮಗಳಿಗೆ ಬದ್ಧವಾಗಿರಬೇಕು ಎಂಬುದು ಪ್ರಮುಖ ಷರತ್ತು ವಿಧಿಸಲಾಗಿದೆ.

ಇದನ್ನೂ ಓದಿ :ಪಕ್ಷ ವಿರೋಧಿ ಚಟುವಟಿಕೆ: ಶಾಸಕ ಎಸ್​ಟಿ ಸೋಮಶೇಖರ್​, ಶಿವರಾಂ ಹೆಬ್ಬಾರ್​ BJPಯಿಂದ ಉಚ್ಚಾಟನೆ

5ನೇ ತಲೆಮಾರಿನ ಯುದ್ದ ವಿಮಾನದ ವಿಶೇಷತೆ..!

5 ನೇ ತಲೆಮಾರಿನ ಯುದ್ದ ವಿಮಾನವು ಸ್ಟೆಲ್ತ್​ ವಿಮಾನಗಳಾಗಿದ್ದು. ರಾಡಾರ್​ ಕಣ್ಣಿಗೆ ಗೋಚರವಾಗದಂತೆ ವೇಗವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿದೆ, ಜೊತೆಗೆ ಶತ್ರು ದಾಳಿಯಿಂದ ತಪ್ಪಿಸಿಕೊಳ್ಳಬಹುದಾದ ಸಾಮರ್ಥ್ಯ ಈ ವಿಮಾನಗಳಿಗಿದ್ದು. ಮಲ್ಟಿರೋಲ್​ ವಿಮಾನಗಳಾಗಿ ಕಾರ್ಯನಿರ್ವಹಿಸಲಿವೆ. ಇನ್ನು ಈ ವಿಮಾನ ನಿರ್ಮಾಣಕ್ಕೆ 10 ವರ್ಷ ಸಮಯವಿಡಿಯುತ್ತದೆ ಎಂದು ತಿಳಿದುಬಂದಿದ್ದು. ಅಂದರೆ 2035ರೊಳಗೆ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್​ಕ್ರಾಫ್ಟ್ ಯೋಜನೆ ಕಾರ್ಯಗತವಾಗುವ ನಿರೀಕ್ಷೆ ಇದೆ.

ಪ್ರಸ್ತುತ ಭಾರತದ ಬಳಿ ರಫೇಲ್​ ಯುದ್ದ ವಿಮಾನವಿದ್ದು. ಈ ಯುದ್ದ ವಿಮಾನ 4.5ನೇ ತಲೆಮಾರಿನ ಯುದ್ದ ವಿಮಾನವಾಗಿದೆ. ಜೊತೆಗೆ ಸುಖೋಯ್​-37, ಮಿಗ್​-21, ತೇಜಸ್​, ಜಾಗ್ವಾರ್​, ಮಿರಾಜ್​2000 ಯುದ್ದ ವಿಮಾನಗಳಿದ್ದು, ಫ್ರಾನ್ಸ್​​ನಿಂದ ನೌಕಪಡೆಗೆ ಎಂದು ರಫೇಲ್​ ಮೆರೈನ್​ ಯುದ್ದ ವಿಮಾನಗಳನ್ನು ಆರ್ಡರ್​ ಮಾಡಲಾಗಿದೆ. ಇದನ್ನೂ ಓದಿ :ಶ್ರೀಧರ್​ ನಾಯಕ್​ಗೆ ಏಡ್ಸ್​ ಬಂದಿತ್ತು, ಆತನ ಅಹಂಕಾರದಿಂದ ಎಲ್ಲ ಕಳೆದುಕೊಂಡ; ಪತ್ನಿ ಜ್ಯೋತಿ ಆಡಿಯೋ

ಜಾಗತಿಕವಾಗಿ ರಷ್ಯಾ, ಅಮೇರಿಕಾ ಮತ್ತು ಚೀನಾ ದೇಶಗಳು 5ನೇ ತಲೆಮಾರಿನ ಯುದ್ದ ವಿಮಾನಗಳನ್ನು ಹೊಂದಿದ್ದು, ರಷ್ಯಾದ ಸುಖೋಯ್ ಎಸ್​​ಯು-57, ಅಮೆರಿಕದ ಎಫ್-22 ರಾಪ್ಟರ್, ಎಫ್-35 ಲೈಟನಿಂಗ್, ಚೀನಾದ ಜೆ-20 ವಿಮಾನಗಳನ್ನು 5ನೇ ತಲೆಮಾರಿನ ಯುದ್ದ ವಿಮಾನಗಳೆಂದು ಪರಿಗಣಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments