Thursday, May 29, 2025

ಕಾರ್ಗೋಶಿಪ್ ಮುಳುಗಡೆ; ದಡಕ್ಕೆ ತೇಲಿಬಂದ ಕಂಟೇನರ್​ಗಳು, ಮುಟ್ಟದಂತೆ ಜನರಿಗೆ ಸೂಚನೆ

ತಿರುನಂತಪುರಂ: ಕೇರಳದ  ಕೊಚ್ಚಿಯ ಕರಾವಳಿಯಲ್ಲಿ ಮುಳುಗಿದ್ದ ಲೈಬೀರಿಯಾದ ಕಾರ್ಗೋ ಶಿಪ್‌ನಲ್ಲಿದ್ದ  ಕೆಲವು ಕಂಟೇನರ್‌ಗಳು ಇಂದು( ಮೇ,26) ಬೆಳಗಿನ‌ ಜಾವ ರಕ್ಕಸ ಅಲೆಗಳ ಅಬ್ಬರಕ್ಕೆ ದಡ ಸೇರಿವೆ. ದಡ ಸೇರಿರುವ ಕಂಟೈನರ್​ಗಳನ್ನು ಮುಟ್ಟದಂತೆ ಕೇರಳ ರಾಜ್ಯ ಸರ್ಕಾರ ಜನರಿಗೆ ಸೂಚನೆ ಹೊರಡಿಸಿದೆ.

ಲೈಬೀರಿಯಾದ ಕಾರ್ಗೋ ಶಿಪ್​ವೊಂದು ವಿಝಿಂಜಂನಿಂದ ಕೊಚ್ಚಿಗೆ ಬರುತ್ತಿತ್ತು. ಶನಿವಾರ ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು ದೂರದ ಅರಬ್ಬಿ ಸಮುದ್ರದಲ್ಲಿ ಹಡಗು ತಾಂತ್ರಿಕ ಸಮಸ್ಯೆಯಿಂದ ಮುಳುಗಿದ್ದು. ಹಡಗಿನಲ್ಲಿದ್ದ ಕಂಟೈನರ್​ಗಳು ನೀರು ಪಾಲಾಗಿವೆ. ಹಡಗಿನಲ್ಲಿದ್ದ 24 ಮಂದಿ ಸಿಬ್ಬಂದಿಗಳನ್ನು ಭಾರತದ ಕರಾವಳಿ ಪಡೆ ಸುರಕ್ಷಿತವಾಗಿ ಕಾರ್ಯಚರಣೆ ನಡೆಸಿ ರಕ್ಷಿಸಿದ್ದಾರೆ. ಇದನ್ನೂ ಓದಿ :‘ಪೊಲೀಸರಿಗೆ ಮೊದಲೇ ವಾರ್ನ್​ ಮಾಡಿದ್ದೇ’; ಮಂಡ್ಯ ದುರ್ಘಟನೆಗೆ ಶಾಸಕ ರವಿ ಗಣಿಗ ತೀವ್ರ ಬೇಸರ

ಇನ್ನು ಮುಳುಗಿರುವ ಹಡಗಿನಲ್ಲಿದ್ದ 623 ಕಂಟೇನರ್​ಗಳ ಪೈಕಿ 5 ಕಂಟೇನರ್​ಗಳು ಪತ್ತೆಯಾಗಿವೆ. ಹಡಗಿನಲ್ಲಿದ್ದ 73 ಖಾಲಿ ಕಂಟೇನರ್​ಗಳಾಗಿದ್ದು. 25 ಕಂಟೇನರ್​ಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡ್​ ಸೇರಿದಂತೆ ಹಾನಿಕಾರಕ ಕೆಮಿಕಲ್​ಗಳು ಇದ್ದವು. ಈ ಕೆಮಿಕಲ್ಸ್​ಗಳು ಜಲಚರ ಪ್ರಾಣಿಗಳಿಗೆ ಹಾನಿಕಾರಕವಾಗಿದ್ದು. ಒಂದು ವೇಳೆ ಈ ಕಂಟೇನರ್​ಗಳು ದಡದಲ್ಲಿ ಕಾಣಿಸಿಕೊಂಡರೆ ಅವುಗಳ ಬಳಿಗೆ ಹೋಗಬೇಡಿ, ಮುಟ್ಟಬೇಡು ಎಂದು ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಇದನ್ನೂ ಓದಿ :ದೇಶದಲ್ಲಿ 1000ದ ಗಡಿ ದಾಟಿದ ಕೋವಿಡ್​ ಪ್ರಕರಣಗಳ ಸಂಖ್ಯೆ: ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ

ಇನ್ನು ಕಂಟೇನರ್​ಗಳು ಪತ್ತೆಯಾದ ಸ್ಥಳಕ್ಕೆ ಕೊಲ್ಲಂ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮುಳುಗಿದ ಹಡಗನ್ನು ಕೊಚ್ಚಿ ಬಂದರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿತ್ತು. ಆದರೆ ಭಾರೀ ಅಲೆಗಳು ಮತ್ತು ಗಾಳಿಯ ಪರಿಣಾಮ ಬೀಸುತ್ತಿತ್ತು. ಹಾಗಾಗಿ, ಹಡಗಿನಲ್ಲಿದ್ದ ಸರಕುಗಳನ್ನು ಬೇರೆಡೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ.

RELATED ARTICLES

Related Articles

TRENDING ARTICLES