ಶಿವಮೊಗ್ಗ: ಸದನದ ಕಾರ್ಯಕಲಾಪಗಳಿಗೆ ಅಡ್ಡಿಮಾಡಿದ ಬಿಜೆಪಿ ಸದಸ್ಯರ ಅಮಾನತ್ತನ್ನು ವಾಪಸ್ಸು ತೆಗೆದುಕೊಂಡಿರುವ ನಿರ್ಧಾರ ಸದನದ ಪಾವಿತ್ರ್ಯತೆಯನ್ನು ನಾಶಗೊಳಿಸಿದ್ದು, ಇದು ಸಂವಿಧಾನ ವಿರೋಧಿಯಾಗಿರುವುದಲ್ಲದೆ ಕೆಟ್ಟ ಸಂಪ್ರದಾಯಕ್ಕೆ ನಾಂದಿಹಾಡಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದಾರೆ. ಇದನ್ನೂ ಓದಿ:ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ; ಪತ್ನಿ ಶೀಲ ಶಂಕಿಸಿ ಗಂಡನೇ ಹತ್ಯೆ ಮಾಡಿರುವ ಆರೋಪ
ಬಿಜೆಪಿ ಶಾಸಕರ ಅಮಾನತ್ತು ವಾಪಾಸ್ಸು ನಿರ್ಧಾರ ಸರಿಯಲ್ಲ. ಇದು ಸಾಂವಿಧಾನಿಕವಾಗಿ ವಿರೋಧವಾಗಿದೆ. ವಿರೋಧಪಕ್ಷದ ವಿಪಕ್ಷನಾಯಕ ಸೇರಿದಂತೆ ಸಭಾಧ್ಯಕ್ಷರ ನಡುವೆಯೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು, ಕಾನೂನು ಸಚಿವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಆದರೆ ಈ ನಿರ್ಧಾರವನ್ನು ತೆಗೆದುಕೊಳ್ಳುವ ಹಕ್ಕು ಸ್ವತಃ ವಿಧಾನಸಭಾ ಅಧ್ಯಕ್ಷರಿಗೇ ಇಲ್ಲ, ಸದನವೇ ಸರ್ವೋಚ್ಛವಾಗಿದೆ. ಇವರುಗಳೆಲ್ಲಾ ಇದರ ಒಂದು ಭಾಗ ಮಾತ್ರ. ಈ ಅಮಾನತು ವಾಪಾಸು ಪಡೆಯುವ ನಿರ್ಧಾರ ಸದನಕ್ಕೆ ಮಾಡಿದ ಅವಮಾನವಿದು ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಅಯನೂರು ಮಂಜುನಾಥ್ ‘ಬಿಜೆಪಿ ಸದಸ್ಯರ ಅಮಾನತ್ತನ್ನು ನಿಯಮ 348ರ ಪ್ರಕಾರ ತೆಗೆದುಕೊಳ್ಳಲಾಗಿದೆ. ಆದರೆ ಅಮಾನತ್ತು ವಾಪಾಸ್ಸು ಪಡೆದಿರುವುದನ್ನು ಯಾವ ನಿಯಮದಡಿ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಸದನದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಸದನದ ಹೊರಗೆ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಇದನ್ನೂ ಓದಿ :‘ಪರಿಹಾರ ಕೊಡ್ತಾರಂತೆ.., ನಾನೇ 10 ಲಕ್ಷ ಕೊಡ್ತೀನಿ ನನ್ನ ಮಗಳನ್ನ ತಂದುಕೊಡಿ’: ಬಾಲಕಿ ತಂದೆ ಆಕ್ರೋಶ
ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಮುಂದೆ ಇಂತಹ ತೀರ್ಮಾನಗಳನ್ನು ತೆಗೆದುಕೊಂಡಾಗ, ಈ ತಪ್ಪು ನಿರ್ಧಾರವನ್ನೇ ಉಲ್ಲೇಖಿಸಬೇಕಾಗುತ್ತದೆ. ಹಾಗಾಗಿ ಇದು ಸಂವಿಧಾನ ವಿರೋಧಿಯಾಗಿದೆ. ವಿರೋಧಪಕ್ಷದ ನಾಯಕರ ಒತ್ತಾಯಕ್ಕೆ ಮಣಿದು ಈ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತದೆ.
ಹಾಗಾಗಿ ಇದು ಸದನದ ಇತಿಹಾಸದಲ್ಲಿಯೇ ಒಂದು ಕಪ್ಪುಚುಕ್ಕಿಯಾಗಿ ಕಾಣಿಸಿಕೊಳ್ಳಲಿದೆ. ದೇಶದ ಯಾವುದೇ ವಿಧಾನ ಸಭೆಗಳಲ್ಲಿ ಅಥವಾ ಸಂಸತ್ತಿನಲ್ಲಿಯೂ ಕೂಡ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿರುವುದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ವಾಪಸ್ಸು ತೆಗೆದುಕೊಂಡಿರುವ ನಿರ್ಧಾರವನ್ನು ಜಾರಿಗೊಳಿಸಬಾರದು ಎಂದು ಆಯನೂರು ಮಂಜುನಾಥ್ ಒತ್ತಾಯಿಸಿದ್ದಾರೆ.