ಬೆಂಗಳೂರು: ಒಂಟಿ ಮಹಿಳೆಯನ್ನು ಹತ್ಯೆಗೈದು ಕೋಟ್ಯಾಂತರ ಮೌಲ್ಯದ ಚಿನ್ನಾಭರಣದೊಂದಿಗೆ ಹಂತಕ ಎಸ್ಕೇಪ್ ಆದ ಘಟನೆ ಬೆಂಗಳೂರಿನ ಕಾಟನ್ ಪೇಟೆ ದರ್ಗಾ ರಸ್ತೆಯಲ್ಲಿ ನಡೆದಿದೆ. ಕೊಲೆಯಾದ ದುರ್ದೈವಿಯನ್ನು 40 ವರ್ಷದ ಲತಾ ಎಂದು ಗುರುತಿಸಲಾಗಿದೆ.
ಇನ್ನು ಕೊಲೆಯಾದ ಲತಾ(40) ಅವರ ಪತಿ ಹೋಲ್ಸೇಲ್ ಬಟ್ಟೆ ವ್ಯಾಪಾರಿಯಾಗಿದ್ದು. ಲತಾ ಅವರ ಮಗಳು ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಹತ್ಯೆ ನಡೆದಿದ್ದು. ಕೊಲೆ ಬಳಿಕ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಭರಣ ದೋಚಿ ಹಂತಕರು ಪರಾರಿಯಾಗಿದ್ದಾರೆ. ಇದನ್ನೂ ಓದಿ :ಮೋದಿ ರೋಡ್ ಶೋನಲ್ಲಿ ಆಫ್ರಿಕನ್ ವಿದ್ಯಾರ್ಥಿಗಳು; ಉಗ್ರರ ನಿರ್ಮೂಲನೆ ಮಾಡುವಂತೆ ಕೋರಿಕೆ
ಪ್ರಾಥಮಿಕ ಮಾಹಿತಿ ಪ್ರಕಾರ ಮಹಿಳೆಯ ಪತಿ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದ್ದು.ತಕ್ಷಣ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಕಾಟನ್ ಪೇಟೆ ಪೊಲೀಸರು, ಪರಿಶೀಲನೆ ವೇಳೆ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸೇರಿ ನಗದು ಹಣ ಕಳುವಾಗಿರೋದು ಗೊತ್ತಾಗಿದೆ.
ಮಧ್ಯಾಹ್ನ 12 ಗಂಟೆ ವೇಳೆಗೆ ಕೊಲೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದು. ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ :ಗನ್ಮ್ಯಾನ್ಗಳ ಜೊತೆ ಪಾಕ್ ಬೀದಿಯಲ್ಲಿ ಜ್ಯೋತಿ ಸುತ್ತಾಟ; ಸ್ಕಾಟ್ಲೆಂಡ್ ಯೂಟ್ಯೂಬರ್ನಿಂದ ಸಿಕ್ತು ವಿಡಿಯೋ