ಕಲಬುರಗಿ: ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿಯವರನ್ನು 5 ಗಂಟೆಗಳ ಕಾಲ ದಿಗ್ಬಂದನ ಮಾಡಿದ್ದಕ್ಕೆ ರಾಜ್ಯ ಬಿಜೆಪಿ ಕಲಬುರಗಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ “ಅಂಬೇಡ್ಕರ್ ಬರೆದ ಸಂವಿದಾನ ಇಡ್ಕೊಂಡು ಓಡಾಡೋ ಕಾಂಗ್ರೆಸಿಗರು, ಗೂಂಡಾಗಿರಿ ನಡೆಸ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅಶೋಕ್ “ಕಾಂಗ್ರೆಸಿಗರು ದಿನಾ ಅಂಬೇಡ್ಕರ್ ಸಂವಿಧಾನ ಪುಸ್ತಕ ಹಿಡಿದುಕೊಂಡು ಓಡಾಡ್ತಿರಲ್ಲ, ಯಾವ ಪೇಜ್ನಲ್ಲಿ ಗೂಂಡಾಗಿರಿ ಮಾಡಿ ಅಂತಾ ಬರೆದಿದ್ದಾರ ತೋರಿಸಿ. ನೀವು ಪೊಲೀಸ್ ಠಾಣೆಗೆ ಹೋಗಬಹುದಿತ್ತು. ಆದರೆ ನೀವು ಗೂಂಡಾಗಿರಿ ನಡೆಸಿದ್ದೀರಾ. ನಿಮಗೆ ಧಮ್ ಇದ್ರೆ ಈಗ ಬನ್ನಿ. ನಾವೆಲ್ಲರೂ ಬಂದಿದ್ದೇವೆ, ನಮ್ಮನ್ನು ಕೂಡಿ ಹಾಕಿ ನೋಡೋಣ. ಇದನ್ನೂ ಓದಿ:ಮರದಡಿ ಮಲಗಿದ್ದ ವ್ಯಕ್ತಿ ಮೇಲೆ ಚರಂಡಿ ತ್ಯಾಜ ಸುರಿದ ಪುರಸಭೆ ನೌಕರರು: ಜೀವಂತ ಸಮಾಧಿಯಾದ ಯುವಕ
ಈ ಕಾಂಗ್ರೆಸ್ ಸರ್ಕಾರ ಇನ್ನೂ ಎಷ್ಟು ದಿನ ಇರುತ್ತೋ ಗೊತ್ತಿಲ್ಲ. ಈ ಸರ್ಕಾರ ಯಾವಾಗ ಬೇಕಾದರು ಬಿದ್ದು ಹೋಗುತ್ತದೆ. ಪುಟಗೋಸಿ 3 ರಾಜ್ಯದಲ್ಲಿದ್ದುಕೊಂಡು ನಮಗೆ ಚಾಲೆಂಜ್ ಹಾಕುತ್ತಿದ್ದೀರಾ. ನಾವು ಅಂಬೇಡ್ಕರ್ ಹುಲಿಗಳು ಅಂತ ಹೇಳ್ಕೋತೀರಾ, ಆದರೆ ಅಂಬೇಡ್ಕರ್ ಅವರು ಸತ್ತಾಗ ಮೂರಡಿ ಜಾಗ ಕೊಡದ ಇಲಿಗಳು ನೀವು. ನಕಲಿ ಗಾಂಧಿಗಳ ಕಾಲು ನೆಕ್ಕೋದಕ್ಕೆ ಹೋಗಿದೀರಾ ಹೇಗೆ ಎಂದು ವಾಗ್ದಾಳಿ ನಡೆಸಿದರು.
ಮುಂದುವರಿದು ಮಾತನಾಡಿದ ಆರ್.ಅಶೋಕ್ ” ಇವತ್ತು ಡಿಕೆಶಿ ಎರಡೂವರೆ ಕೋಟಿ ನ್ಯಾಷನಲ್ ಹೆರಾಲ್ಡ್ ಗೆ ದೇಣಿಗೆ ಕೊಟ್ಟಿದ್ದೇವೆ ಅಂತಾ ಹೇಳ್ತಾರೆ. ಆದರೆ ಅಂಬೇಡ್ಕರ್ ಅವರಿಗೆ ಕೇವಲ ಐದು ಸಾವಿರ ದುಡ್ಡು ಕೊಡೊಕೆ ಯೋಗ್ಯತೆ ಇಲ್ಲದವರು ನೀವು. ನಿಮಗೆ ಅಂಬೇಡ್ಕರ್ ಶವ ಬೇಕಿರಲಿಲ್ಲ, ಅವರ ಪುಸ್ತಕ ಬೇಕಾಗಿತ್ತು. ಕಾಂಗ್ರೆಸ್ ಸರ್ಕಾರ, ರಾಜ್ಯದ ಪೊಲೀಸ್ ಠಾಣೆಗಳನ್ನು, ಕಾಂಗ್ರೆಸ್ ಠಾಣೆಯಾಗಿ ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ:ಮಾನಹಾನಿ ಪ್ರಕರಣ: ರಾಹುಲ್ ಗಾಂಧಿ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ
ಬಿಜೆಪಿ ನಂ 1 ಪಾರ್ಟಿ, ನಮ್ಮ ಪಾರ್ಟಿಯನ್ನ ಎದುರಿಸೋ ತಾಕತ್ತು ನಿಮಗೆ ಇಲ್ಲ. ಖರ್ಗೆ ಅವರು ಆಪರೇಷನ್ ಸಿಂಧೂರ್ನ ಚುಟುಪುಟು ಯುದ್ದ ಅಂತ ಹೇಳ್ತಾರೆ. ಅದೇ ಮುಂಬೈ ದಾಳಿ ಆದಾಗ ನಾಲ್ಕು ಫ್ಲೈಟ್ ಆರಿಸಿ ಚುಟುಪುಟು ಯುದ್ದ ಮಾಡ್ಬೇಕಿತ್ತು. ಕಾಂಗ್ರೆಸ್ ಇತಿಹಾಸ ಬಹಳ ದೊಡ್ಡದಿದೆ. ನಮ್ಮನ್ನು ಕೆಣಕೋಕೆ ಬರಬೇಡಿ. ಕಾಂಗ್ರೆಸ್ ಹಿಂದೂಗಳ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಾ ಬಂದಿದೆ. ನಿಮ್ಮ ಆಟ ಬಹಳ ದಿನ ನಡೆಯಲ್ಲ. ಪ್ರಿಯಾಂಕ್ ಖರ್ಗೆ ರಾಜಿನಾಮೇ ಕೊಡೊವರೆಗೂ ಈ ಹೋರಾಟ ಮುಂದುವರಿಯುತ್ತೆ ಎಂದು ಆರ್. ಅಶೋಕ್ ಹೇಳಿದರು.