ಬೆಳಗಾವಿ: ಕೋವಿಡ್ ಮಹಾಮಾರಿ ಹೆಚ್ಚಾಗುತ್ತಿರುವ ನಡುವೆ ಕೋಡಿಮಠದ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದು. ಇನ್ನು ಐದು ವರ್ಷ ಮಹಾಮಾರಿ ಇರಲಿದೆ, ಉಸಿರಾಟದ ತೊಂದರೆಯಿಂದ ಸಾವುಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿದಿದ್ದಾರೆ.
ಬೆಳಗಾವಿಯಲ್ಲಿ ಮತ್ತೆ ಕೊರೊನಾ ವೈಸರ್ ಪತ್ತೆಯಾಗಿದೆ, ಒಬ್ಬ ಗರ್ಭಿಣಿ ಮಹಿಳೆ ಬಂದಿದೆ ಏನು ಹೇಳ್ತೀರಿ ಎಂದು ಪತ್ರಕರ್ತರು ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ ” ಮತ್ತೆ ವಾಯುರೂಪದಲ್ಲಿ ಭಾದೆ ಅಪ್ಪಳಿಸಲಿದೆ, ಈ ಮಹಾಮಾರಿ ಐದು ವರ್ಷಗಳ ಕಾಲ ಬೇರೆ ಬೇರೆ ರೂಪದಲ್ಲಿ ಇರಲಿದೆ. ಇದರ ಕುರಿತು ಜನರು ಹುಷಾರಾಗಿದ್ದರೆ ಒಳ್ಳೆಯದು ಎಂದು ಸ್ವಾಮೀಜಿ ಹೇಳಿದರು. ಇದನ್ನೂ ಓದಿ :ಲವ್ ಮಾಡಿ, ಮನೆ ಬಿಟ್ಟು ಹೋದ ಮಗಳು: ಮನನೊಂದು ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ
ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಸಾವು ಹೆಚ್ಚಾಗುತ್ತವೆ.
ಉಸಿರಾಟಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಸಾವು ಬರುವ ಸಾಧ್ಯತೆ ಇದೆ ಎಂದ ಸ್ವಾಮೀಜಿ, ಪ್ರಪಂಚಕ್ಕೆ ಇನ್ನು 5 ವರ್ಷಗಳ ಕಾಲ ವಾಯು ಮತ್ತು ಜಲದಿಂದ ಗಂಡಾಂತರ ಬರಲಿದೆ. ಹಿಮಾಲಯ ಕರಗಿ ದೆಹಲಿವರೆಗೆ ತಲುಪಲಿದೆ. ಮೇಘಸ್ಪೋಟ ಆಗುವ ಸಾಧ್ಯತೆಗಳಿವೆ ಭೂಕಂಪ ಸಂಭವಿಸಲಿದೆ. ದೇಶದಲ್ಲಿ ಮತೀಯ ಗಲಭೆಗಳು ಹೆಚ್ಚಾಗಲಿವೆ. ಇದನ್ನೂ ಓದಿ :ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಹೃದಯಘಾತ: ಕುಸಿದು ಬಿದ್ದು ಯುವಕ ಸಾ*ವು
ರಾಜಕೀಯ ಬದಲಾವಣೆ ಬಗ್ಗೆ ಶ್ರೀಗಳ ಮಾತು..!
ರಾಜಕೀಯವಾಗಿ ಅರಸನ ಅರಮನೆಗೆ ಕಾರ್ಮೋಡ ಕವಿದಿತ್ತು ಎಂದು ಮಾರ್ಮಿಕವಾಗಿ ನುಡಿದ ಸ್ವಾಮೀಜಿ. ದೇಶದಲ್ಲಿ ಯುದ್ಧದ ಭೀತಿ ಮತ್ತೆ ಪ್ರಾರಂಭ ಆಗಲಿದೆ, ಜನರಲ್ಲಿ ಅಶಾಂತಿ ಉಂಟಾಗಲಿದೆ. ಕೆಲವು ದೇಶಗಳು ಭೂಖಂಡದಿಂದ ಅಳಿದು ಹೋಗಲಿವೆ. ಜೊತೆಗೆ ಹೊಸ ಹೊಸ ದೇಶಗಳು ಉತ್ಪತ್ತಿಯಾಗುತ್ತವೆ. ಅನೇಕ ರಾಜಕೀಯ ಮುಖಂಡರಿಗೆ ಸಾವಿದೆ, ಹಾಗೂ ಭಯವಿದೆ. ಸಂಕ್ರಾಂತಿಯವರೆಗೂ ರಾಜ್ಯ ಸರ್ಕಾರಕ್ಕೆ ಅಪಾಯವಿಲ್ಲ. ಸಂಕ್ರಾಂತಿಯ ನಂತರ ಎನಾಗುತ್ತೆ ನೋಡಬೇಕು ಎಂದು ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ :ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ..!