ನೈಋತ್ಯ ಮಾನ್ಸೂನ್ ಮಾರುತಗಳು (ಮುಂಗಾರು ಮಾರುತ) 16 ವರ್ಷಗಳಲ್ಲಿ ಮೊದಲ ಬಾರಿಗೆ ಅವಧಿಗೂ ಮುನ್ನ ಕೇರಳ ಪ್ರವೇಶಿಸಿದ್ದು. ಸಾಮಾನ್ಯ ವೇಳಾಪಟ್ಟಿಗಿಂತ ಎಂಟು ದಿನ ಮುಂಚಿತವಾಗಿ ಕೇರಳಕ್ಕೆ ಮುಂಗಾರು ಮಾರುತಗಳು ಅಪ್ಪಳಿಸಿವೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.
ಭಾರತೀಯ ಹವಮಾನ ಇಲಾಖೆ ಈ ಬಾರಿ ಮೇ. 27ರ ವೇಳೆಗೆ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದು ಸೂಚನೆ ಹೊರಡಿಸಿತ್ತು. ಆದರೆ ನಿರೀಕ್ಷೆಗಿಂತ 8 ದಿನ ಮುಂಚಿತವಾಗಿಯೇ ಮಾನ್ಸೂನ್ ಮಾರುತಗಳು ಕೇರಳ ಪ್ರವೇಶಿಸಿದ್ದು. ಹವಮಾನ ಇಲಾಖೆ ಕರಾವಳಿ ತೀರ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ಇದನ್ನೂ ಓದಿ :ಅಭಿವೃದ್ದಿಗೆ ಹಣ ಕೊಡಿ ಅಂದ್ರೆ, ತಮನ್ನಾಗೆ 6 ಕೋಟಿ ಕೊಡ್ತಿದ್ದಾರೆ: ಬಿ.ವೈ ವಿಜಯೇಂದ್ರ
IMD Weather Warning (24.05.2025)
Extremely heavy rainfall likely to occur at isolated places over Konkan & Goa, Madhya Maharashtra, Coastal Karnataka and South Interior Karnataka, Kerala today.#RainySeason #rainfall #WeatherUpdate #karnataka #maharashtra #goa #Kerala… pic.twitter.com/mf9Nc69WIL
— India Meteorological Department (@Indiametdept) May 24, 2025
2009ರ ನಂತರ ನಂತರ ಮೊದಲ ಬಾರಿಗೆ ಮಾನ್ಸೂನ್ ಮಾರುತಗಳು ಇಷ್ಟು ಬೇಗ ಕೇರಳ ಪ್ರವೇಶಿಸಿದ್ದು. 1990ರಲ್ಲಿ ಮೇ. 19ರಂದು ಮಾನ್ಸೂನ್ ಮಾರುತಗಳು ಕರಾವಳಿ ಪ್ರವೇಶಿಸಿದ್ದವು. ನೈರುತ್ಯ ಮಾನ್ಸೂನ್ ಮಾರುತಗಳು ಭಾರತದಲ್ಲಿ ಶೇ.70% ಮಳೆಯನ್ನು ಸುರಿಸಲಿದ್ದು. ಈ ಮಳೆ ಕೃಷಿಯಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.
ಇದನ್ನೂ ಓದಿ :ಕೋವಿಡ್ ಹೆಚ್ಚಳ: ಜನರ ಅಹವಾಲು ಸ್ವೀಕರಿಸಲು ಮಾಸ್ಕ್ ಧರಿಸಿ ಬಂದ CM
ಕೇರಳ ಪ್ರವೇಶಿಸಿರುವ ಮಾನ್ಸೂನ್ ಮಾರುತಗಳು ಬಲಗೊಂಡಿದ್ದು. ಜೂನ್ ತಿಂಗಳ ಆರಂಭದಲ್ಲಿ ದೇಶದ ಉಳಿದ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ, ಜುಲೈ ಮಧ್ಯದ ವೇಳೆಗೆ ಮಾನ್ಸೂನ್ ಮಾರುತ ದೇಶ ಪೂರ್ತಿ ಆವರಿಸಲಿದೆ ಎಂದು ಭಾರತೀಯ ಹವಮಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕೇರಳ, ಕರ್ನಾಟಕದ ಕರಾವಳಿ, ಗೋವಾ ಮತ್ತು ಗುಜರಾತ್‌ನಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.