ರಾಯಚೂರು : KKRTC ಬಸ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು. ಅಪಘಾತದಲ್ಲಿ 18ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದ PWD ಕ್ಯಾಂಪ್ ಬಳಿ ಅಪಘಾತ ಸಂಭವಿಸಿದ್ದು.ರಾಯಚೂರಿನಿಂದ ಸಿಂಧನೂರಿಗೆ ಬರುತ್ತಿದ್ದ KKRTC ಸಾರಿಗೆ ಬಸ್ ಮತ್ತು ಸಿಂಧನೂರಿನಿಂದ ಹೈದರಾಬಾದ್ಗೆ ತೆರಳುತ್ತಿದ್ದ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್ ಮುಂಭಾಗ ಸಂಪೂರ್ಣ ನಜ್ಜು-ಗುಜ್ಜಾಗಿದ್ದು. ಅಪಘಾತದಲ್ಲಿ 18 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇದನ್ನೂ ಓದಿ :ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ..!
ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಇದೆ ಎಂದು ಮಾಹಿತಿ ದೊರೆತಿದ್ದು. ಗಾಯಾಳುಗಳನ್ನು ಸಿಂದನೂರು ಸಾರ್ವಜನಿಕರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದಲ್ಲಿ ಓರ್ವ ಪ್ರಯಾಣಿಕ ಕುತ್ತಿಗೆಗೆ ಕಬ್ಬಿಣ ರಾಡ್ಗಳು ಚುಚ್ಚಿಕೊಂಡಿದ್ದು. ಪ್ರಯಾಣಿಕ ಕುತ್ತಿಗೆಯಲ್ಲಿ ಕಬ್ಬಿಣದ ರಾಡ್ನೊಂದಿಗೆ ಆಸ್ಪತ್ರೆಗೆ ಬಂದಿದ್ದಾನೆ. ವೈದ್ಯರು ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದು. ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ :ಹಿಂದುಗಳು ತಾಯ್ನಾಡಿನಲ್ಲಿ ಬದುಕಲು, ಕಾಂಗ್ರೆಸ್ ಸಾಯಬೇಕು: ಬಿಜೆಪಿ ನಾಯಕ ಅಮಿತ್ ಮಾಳವೀಯ
ಘಟನೆ ಸಂಬಂಧ ಸಿಂಧನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಅಪಘಾತದಿಂದ ಕೆಲಕಾಲ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.