ಕಲಬುರಗಿ : ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಪರಿಷತ್ ನಾಯಕ ಛಲವಾದಿ ನಾರಯಣಸ್ವಾಮಿಗೆ ತಡೆ ಹಾಕಿ, ಧಮ್ಕಿ ಹಾಕಿದ್ದನ್ನು ವಿರೋಧಿಸಿ ರಾಜ್ಯ ಬಿಜೆಪಿ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು. ಈ ಪ್ರತಿಭಟನೆಯಲ್ಲಿ ಮಾತನಾಡಿದ ಪರಿಷತ್ ಸದಸ್ತೆ ಸಿಟಿ ರವಿ ಪ್ರಿಯಾಂಕ್ ಖರ್ಗೆ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಿ,ಟಿ ರವಿ “ಕಲಬುರಗಿಯನ್ನ ರಿಪಬ್ಲಿಕ್ ಆಫ್ ಕಲಬುರಗಿ ಮಾಡ್ತಿದ್ದಾರೆ.
ಹಿಟ್ಲರ್ ನಾನೇ ನಾನೇ ಅಂತಾ ಇದ್ದ ಆದರೆ ಇವಾಗ ಅವನು ಮಣ್ಣಲ್ಲಿ, ಮಣ್ಣಾಗಿ ಹೋಗಿದ್ದಾನೆ. ಈಗಿರುವ ನವ ನಿಜಾಮಶಾಹಿಗಳ ಆಳ್ವಿಕೆ ಕೂಡ ಬಹಳ ದಿನ ನಡೆಯಲ್ಲ. ನಾವು ಸಂವಿಧಾನ ಪಾಲಿಸುವ ನಿಯತ್ತಿನ ನಾಯಿಗಳು ಎಂದು ಯಾರೋ ಹೇಳಿದ್ದರು, ಆದರೆ ಸಂವಿಧಾನಕ್ಕೆ ನಿಯತ್ತಿರುವ ನಾಯಿಗಳು ದೇಶದ ವಿರುದ್ಧ ಸೈನ್ಯದ ವಿರುದ್ಧ ಮಾತಾಡಲ್ಲ. ಇದನ್ನೂ ಓದಿ :16 ವರ್ಷಗಳಲ್ಲಿ ಮೊದಲ ಭಾರಿಗೆ ವೇಗವಾಗಿ ಕೇರಳ ಪ್ರವೇಶಿಸಿ ಮುಂಗಾರು: ರೆಡ್ ಅಲರ್ಟ್ ಘೋಷಣೆ
ನಾವು ಸಂವಿಧಾನ ಪಾಲಿಸುವ ನಿಯತ್ತಿನ ನಾಯಿಗಳು. ಆದರೆ ನಿಯತ್ತು ಇಲ್ಲದ ನಾಯಿಗಳು ಪಾಕಿಸ್ತಾನದ ಪರವಾಗಿ ಬೊಗಳುತ್ತಿವೆ. ಪ್ರಿಯಾಂಕ್ ಖರ್ಗೆ ಅವರೇ ನಿಮ್ಮನ್ನು ಕಂಡರೆ ಸಿದ್ದರಾಮಯ್ಯ, ಡಿಕೆಶಿ ಹೆದರಬಹುದು. ಆದರೆ ಕಲಬುರಗಿಯ ಜನ ಹೆದರಲ್ಲ ಎಂದು ಸಿ.ಟಿ ರವಿ ಹೇಳಿದರು.