Saturday, May 24, 2025

ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ..!

ಬೆಳಗಾವಿ : ಮಹಾರಾಷ್ಟ್ರದಲ್ಲಿ ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿ ಮೇಲೆ ಸ್ನೇಹಿತರಿಂದಲೇ ಗ್ಯಾಂಗ್ ರೇಪ್ ನಡೆದಿದ್ದು. ಘಟನೆ ಸಂಬಂಧ ಸಾಂಗ್ಲಿಯ ವಿಶ್ರಾಂಬಾಗ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಘಟನೆ ನಡೆದಿದ್ದು. ಸಂತ್ರಸ್ಥ ಯುವತಿ ಮೇ.20ರಂದು ಮೂವರು ಯುವಕರ ಜೊತೆ ರಾತ್ರಿ ಸಿನಿಮಾ ನೋಡಲು ಹೋಗಿದ್ದಳು. ಸಿನಿಮಾ ಮುಗಿಸಿ ವಾಪಾಸ್​ ಸ್ನೇಹಿತರ ರೂಮಿಗೆ ಬಂದಿದ್ದ ಯುವತಿಗೆ ಯುವಕರು ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದರು. ಇದರಿಂದ ಗಾಢ ನಿದ್ರೆಗೆ ಜಾರಿದ್ದ ಯುವತಿ ಮೇಲೆ ಮೂವರು ಸ್ನೇಹಿತರು ಅತ್ಯಾಚಾರ ಎಸೆಗಿದ್ದಾರೆ. ಇದನ್ನೂ ಓದಿ :ಹಿಂದುಗಳು ತಾಯ್ನಾಡಿನಲ್ಲಿ ಬದುಕಲು, ಕಾಂಗ್ರೆಸ್​ ಸಾಯಬೇಕು: ಬಿಜೆಪಿ ನಾಯಕ ಅಮಿತ್ ಮಾಳವೀಯ

ಬೆಳಿಗ್ಗೆ ಎದ್ದ ನಂತರ ಯುವತಿಗೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು. ಕೂಡಲೇ ಯುವತಿ ವಿಷಯವನ್ನು ತನ್ನ ತಂದೆ-ತಾಯಿಗೆ ತಿಳಿಸಿದ್ದಾಳೆ. ಇದನ್ನು ಕೇಳಿದ ಪೋಷಕರು ಯುವತಿ ಜೊತೆ ಸಾಂಗ್ಲಿಯ ವಿಶ್ರಾಂಬಾಗ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು. ದೂರು ದಾಖಲಿಸಿಕೊಂಡ ಪೋಷಕರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ :ಆನೆಗಳು ಕಣ್ಣೀರಿಟ್ಟುಕೊಂಡು ಹೋಗಿವೆ, ಅವುಗಳನ್ನ ವಾಪಾಸ್​ ಕರೆಸಿಕೊಳ್ಳಬೇಕು: ವಾಟಾಳ್​ ನಾಗರಾಜ್​

ಇನ್ನು ಬಂಧಿತರನ್ನು ಸೊಲ್ಲಾಪುರದ ವಿನಯ್ ಪಾಟೀಲ್(22), ಪುಣೆಯ ಸರ್ವಜ್ಞ ಗಾಯಕವಾಡ(22), ಸಾಂಗ್ಲಿಯ ತನ್ಮಯ್ ಪೇಡ್ನೆಕರ್(21) ಎಂದು ಗುರುತಿಸಿದ್ದು. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಪೊಲೀಸರು ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ದೊರಕಬೇಕಿದೆ.

RELATED ARTICLES

Related Articles

TRENDING ARTICLES