ರಾಮನಗರ ಜಿಲ್ಲೆಯನ್ನ ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಿದಕ್ಕೆ ಸಾಮಾಜಿಕ ಹೋರಾಟಗಾರ ವಾಟಾಳ್ ನಾಗರಾಜ್ ರಾಮನಗರದಲ್ಲಿ ಪ್ರತಿಭಟನೆ ನಡೆಸಿದ್ದು. ಈ ವೇಳೆ ರಾಜ್ಯದ ಆನೆಗಳನ್ನು ಆಂಧ್ರಕ್ಕೆ ನೀಡಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಆನೆಗಳನ್ನು ವಾಪಾಸ್ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ವಾಟಾಳ್ ನಾಗರಾಜ್ “ಅವನ್ಯಾರೋ ಪವನ್ ಅನ್ನೋನು ಇಲ್ಲಿ ಬಂದು ಕನ್ನಡದಲ್ಲಿ ಮಾತನಾಡಿದ್ದಾನೆ. ಅದಕ್ಕೆ ಇವರಿಗೆ ಸ್ವರ್ಗ ಸಿಕ್ಕ ಹಾಗೆ ಆಗಿದೆ. ಅದೇ ಕನ್ನಡಿಗರು ತಿರುಪತಿಗೆ ಹೋದರೆ ಸರಿಯಾಗಿ ಅಲ್ಲಿ ನಮ್ಮನ್ನು ಸರಿಯಾಗಿ ನೋಡಿಕೊಳ್ಳಲ್ಲ. ನಾವು ಮಗುವಿನ ರೀತಿ ಸಾಕಿದ ಆನೆಗಳನ್ನ, ಪಳಗಿಸಿದ ಆನೆಗಳನ್ನ ದಿಕ್ಕಿಲ್ಲದ ಬೇವರ್ಸಿಗಳ ರೀತಿ ಕೊಡಬಾರದು. ಇದು ಪ್ರಾಣಿಗಳಿಗೆ ಮಾಡಿದ ಮಹಾದ್ರೋಹ ಎಂದು ಹೇಳಿದರು. ಇದನ್ನೂ ಓದಿ :ಹಾವು ಕಚ್ಚಿದರು, ವಿಚಲಿತನಾಗದೆ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ: ವೈದ್ಯರು ಶಾಕ್
ಮುಂದುವರಿದು ಮಾತನಾಡಿದ ವಾಟಾಳ್ ನಾಗರಾಜ್ “ಎರಡು ರಾಜ್ಯದ ಸಂಬಂಧಗಳ ಬಾಂದವ್ಯಕ್ಕೆ ಆನೆ ಕೊಟ್ಟಿದ್ದಾರೆ ಎಂದು ಹೇಳುತ್ತಾರೆ. ಆನೆನೆ ಯಾಕೆ ಕೊಡಬೇಕು, ಹುಲಿ ಕೊಡಲಿ. ಕರ್ನಾಟಕದ ಆನೆಗಳು ಅದ್ಬುತವಾಗಿವೆ. ನಮ್ಮ ಆನೆಗಳು ರಾಜ್ಯ ಬಿಟ್ಟು ಹೋಗುವಾಗ ಕಣ್ಣೀರು ಹಾಕಿದ್ದಾವೆ. ಆನೆಗಳ ಕಣ್ಣಲ್ಲಿ ನೀರು ಬರಬಾರದು. ಈ ಕೂಡಲೇ ಪವನ್ ಕಲ್ಯಾಣ್ಗೆ ಹೇಳಿ ಆನೆಗಳನ್ನ ವಾಪಾಸ್ ಕರೆಸಿಕೊಳ್ಳಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು. ಇದನ್ನೂ ಓದಿ :ಗ್ಯಾಂಗ್ರೇಪ್ ಪ್ರಕರಣ: ಜೈಲಿನಿಂದ ಹೊರಬಂದು ರೋಡ್ ಶೋ ನಡೆಸಿದ್ದ ಆರೋಪಿಗಳು ಮರಳಿ ಜೈಲಿಗೆ