ಮೈಸೂರು : KSDLಗೆ ಬಹುಭಾಷ ನಟಿ ತಮ್ಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿದ್ದು. ಇದಕ್ಕೆ ಕೆಲ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಇದರ ನಡುವೆ ಕೈಗಾರಿಕ ಸಚಿವ ಎಂಬಿ ಪಾಟೀಲ್ ಇದನ್ನು ಸಮರ್ಥಿಸಿಕೊಂಡಿದ್ದು. ತಮ್ಮನ್ನಾಗೆ 2.5 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅದಕ್ಕೆ ಅವರನ್ನು ರಾಯಭಾರಿಯಾಗಿ ನೇಮಿಸಿದ್ದೇವೆ. ಈ ಮೂಲಕ ಮೈಸೂರು ಸ್ಯಾಂಡಲ್ನ್ನು ಅಂತರ್ರಾಷ್ಟ್ರೀಯ ಬ್ರ್ಯಾಂಡ್ ಆಗಿ ಬೆಳೆಸುತ್ತೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ” ಮೈಸೂರು ಸ್ಯಾಂಡಲ್ ಸೋಪ್ ಕನ್ನಡಿಗರ ಹೆಮ್ಮೆ. ವಿಶ್ವೇಶ್ವರಯ್ಯ, ಮೈಸೂರು ಮಹರಾಜರು ಸ್ಥಾಪನೆ ಮಾಡಿದ್ರು
ಬಿಜೆಪಿ ಸರ್ಕಾರ ಇದ್ದಾಗ ಇಲ್ಲಿ ಸಾಕಷ್ಟು ಅವ್ಯವಹಾರ ಆಗಿತ್ತು. ಈ ಸಂಸ್ಥೆ ಅಧ್ಯಕ್ಷರು ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ನಾನು ಬಂದ ಮೇಲೆ ಸಾಕಷ್ಟು ಬದಲಾವಣೆ ಮಾಡಿದ್ದೇವೆ. ಮೂರು ಶಿಫ್ಟ್ ನಲ್ಲಿ ಈಗ ಕೆಲಸ ನಡೆಯುತ್ತಿದೆ. ಸಾಕಷ್ಟು ಸುಧಾರಣೆ ತಂದಿದ್ದೇವೆ. ಇದನ್ನೂ ಓದಿ :ಹೆಂಡತಿ ಜೊತೆ ಜಗಳ: ಮದುವೆ ಮಾಡಿಸಿದ ಬ್ರೋಕರರನ್ನೇ ಕೊಲೆ ಮಾಡಿದ ಗಂಡ
ಈ ಮೂಲಕ 40% ಪ್ರೊಡಕ್ಷನ್ ಹೆಚ್ಚಾಗಿದೆ. ಈ ವರ್ಷ ಸುಮಾರು 1788 ಕೋಟಿ ವ್ಯವಹಾರ ಮಾಡಲಾಗಿದೆ.
415 ಕೋಟಿ ರೂಪಾಯಿ ನಿವ್ವಳ ಲಾಭ ಮಾಡಿದ್ದೇವೆ, ಯಾವುದೇ ಹೊಸ ಮಿಷನ್ ಹಾಕಿಲ್ಲ, ಲೇಬರ್ ಕೂಡ ಹೆಚ್ಚು ಮಾಡಿಲ್ಲ. ಆದರೆ ಸುಧಾರಣೆ ಮಾಡಿ ಲಾಭ ಮಾಡಿದ್ದೇವೆ. ಕನ್ನಡ ಬಗ್ಗೆ ನಾನು ಸಾಕಷ್ಟು ಅಭಿಮಾನ ಇಟ್ಟವನು. ವಚನ ಸಾಹಿತ್ಯದ ನಾಡಿನಿಂದ ಬಂದವರು. ಆದರೆ ನಮ್ಮ ಬ್ರ್ಯಾಂಡನ್ನು ಪ್ಯಾನ್ ಇಂಡಿಯಾ ಜೊತೆಗೆ ವಿದೇಶಕ್ಕೆ ಹೊಯ್ಯಬೇಕಿದೆ. ಈ ನಿಟ್ಟಿನಲ್ಲಿ ಈ ರೀತಿ ಸ್ರ್ಯಾಟಜಿ ಮಾಡಿದ್ದೇವೆ ಎಂದು ಹೇಳಿದರು.
ಬೇರೆ ನಟಿಯರು ಇತರೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ..!
KSDLನಲ್ಲಿ ಹೊಸ ಹೊಸ ಉತ್ಪಾದನೆ ಮಾಡಬೇಕು ಎಂದು ಹೇಳಿದ ಎಂಬಿ ಪಾಟೀಲ್ “ಸಂಸ್ಥೆಯಲ್ಲಿ ಸುಮಾರು 5 ಸಾವಿರ ಕೋಟಿ ವ್ಯವಹಾರ ಮಾಡಬೇಕಿದೆ. ಆಗಾಗಿ ಈ ನಿಟ್ಟಿನಲ್ಲಿ ಈ ಯೋಜನೆ ರೂಪಿಸಿದ್ದೇವೆ. ರಶ್ಮಿಕಾ ಮಂದಣ್ಣ ,ಶ್ರೀಲೀಲಾ, ಕಿಯಾರ ಅಡ್ವಾಣಿ, ಪೂಜಾ ಹೆಗ್ಡೆ ಈಗಾಗಲೇ ಬೇರೆ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಇದನ್ನೂ ಓದಿ :ಕೋವಿಡ್ ಹೆಚ್ಚಳ, ಮಾಸ್ಕ್ ಕಡ್ಡಾಯಗೊಳಿಸಿದ ಆಂದ್ರ ಸರ್ಕಾರ: ರಾಜ್ಯದಲ್ಲೂ ಹೆಚ್ಚುತ್ತಿದೆ ಮಹಾಮಾರಿ
KSDLನಲ್ಲಿ ಉತ್ಪಾದನೆ ಮಾಡುವ ಉತ್ಪನ್ನಗಳಲ್ಲಿ 18ರಷ್ಟು ಮಾತ್ರ ನಮ್ಮ ರಾಜ್ಯದಲ್ಲಿ ಮಾರಾಟವಾಗುತ್ತೆ. ಉಳಿದ 82ರಷ್ಟು ಉತ್ಪನ್ನಗಳು ಬೇರೆ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ತಮ್ಮನ್ನ ಭಾಟಿಯಾಗೆ ಸುಮಾರು 2.5 ಮಿಲಿಯನ್ ಜನ ಫಾಲೋವರ್ಸ್ ಇದ್ದಾರೆ. ಹೀಗಾಗಿ ಅವರನ್ನು ರಾಯಭಾರಿಯಾಗಿ ಮಾಡಿದ್ದೇವೆ. ಈ ಮೂಲಕ ನಮ್ಮ ಬ್ರ್ಯಾಂಡ್ ಅಂತರ್ರಾಷ್ಟ್ರೀಯ ಮಟ್ಟಕ್ಕೆ ಬೆಳೆಸಬಹುದಾಗಿದೆ ಎಂದು ಹೇಳಿದರು.