Friday, May 23, 2025

ತಾಳಿ ಕಟ್ಟುವ ವೇಳೆ ಮುರಿದು ಬಿತ್ತು ಮದುವೆ: ‘ಕಡೇ ಕ್ಷಣದಲ್ಲಿ ಕರಿಮಣಿ ಮಾಲೀಕ ನೀನಲ್ಲ’ ಎಂದ ವಧು

ಹಾಸನ, ಮೇ.23: ಯುವತಿಯೊಬ್ಬಳು ತಾಳಿ ಕಟ್ಟುವ ವೇಳೆ ಮದುವೆ ಬೇಡ ಎಂದಿರುವ ಘಟನೆ ಹಾಸನದಲ್ಲಿ ನಡೆದಿದ್ದು. ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ. ಮದುವೆ ಬೇಡ ಎಂದು ಹಠ ಹಿಡಿದು ಮದುವೆಯನ್ನೇ ನಿಲ್ಲಿಸಿದ್ದಾಳೆ.

ಇದನ್ನೂ ಓದಿ :ತಮ್ಮನ್ನಾಗೆ 2.5 ಮಿಲಿಯನ್​ ಫಾಲೋವರ್ಸ್​ ಇದಾರೆ, ಅದಕ್ಕೆ ರಾಯಭಾರಿ ಮಾಡಿದ್ದೇವೆ: ಎಂ.ಬಿ ಪಾಟೀಲ್​

ಹಾಸನ ನಗರದ ಶ್ರೀ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು. ಹಾಸನ ತಾಲ್ಲೂಕಿನ, ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲ್ಲೂಕಿನ ವೇಣುಗೋಪಾಲ.ಜಿ ಜೊತೆ ಇಂದು ಮದುವೆ ನಿಶ್ಚಯವಾಗಿತ್ತು. ಮಹೂರ್ತದ ವೇಳೆಗೆ ಯುವತಿ ಪಲ್ಲವಿಗೆ ಪೋನ್​ ಕರೆಯೊಂದು ಬಂದಿದ್ದು. ಇದಾದ ನಂತರ ಯುವತಿ ಮದುವೆ ಬೇಡ ಎಂದು ವರಸೆ ತೆಗೆದಿದ್ದಾಳೆ.

ತಾಳಿ ಕಟ್ಟುವ ಕೊನೆ ಕ್ಷಣದಲ್ಲಿ ಪಲ್ಲವಿ ಮದುವೆ ಬೇಡ ಎಂದು ಮನಸು ಬದಲಿಸಿದ್ದು. ರೂಂಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ ಯುವತಿ ಮನವೊಲಿಸಲು ಶತಾಯಗತಾಯ ಪೋಷಕರು ಪ್ರಯತ್ನ ಪಟ್ಟಿದ್ದು. ನಗರ ಠಾಣಾ ಪೊಲೀಸರು ಸ್ಥಳಕ್ಕೆ ಬಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಯುವತಿ ಮದುವೆ ಬೇಡವೇ-ಬೇಡ ಎಂದು ಹಠ ಹಿಡಿದಿದ್ದು. ಮದುವೆ ಮನೆಯನ್ನು ತ್ಯಜಿಸಿ ಹೊರ ಹೋಗಿದ್ದಾಳೆ. ಇದನ್ನೂ ಓದಿ :ಹೆಂಡತಿ ಜೊತೆ ಜಗಳ: ಮದುವೆ ಮಾಡಿಸಿದ ಬ್ರೋಕರರನ್ನೇ ಕೊಲೆ ಮಾಡಿದ ಗಂಡ

ಯುವತಿ ಮದುವೆ ಬೇಡವೆಂದಿದ್ದಕ್ಕೆ, ಯುವಕ ಕೂಡ ಮದುವೆ ಬೇಡವೆಂದು ಹೇಳಿದ್ದು. ಮಗಳ ಮದುವೆ ಮುರಿದಿದ್ದನ್ನು ಕಂಡ ಪೋಷಕರು ಕಣ್ಣೀರಿಟ್ಟಿದ್ದಾರೆ.

 

RELATED ARTICLES

Related Articles

TRENDING ARTICLES