ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಮಾಲಿಕತ್ವದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ನಡೆಸಿದ್ದು. ಈ ದಾಳಿಗೆ ಕಾಂಗ್ರೆಸ್ ಮಹಾನಾಯಕರೆ ಕಾರಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪಿಸಿದ್ದಾರೆ. ಇದರ ಕುರಿತು ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದು. ‘ರಾಜಕೀಯದಲ್ಲಿ ಇದೆಲ್ಲಾ ಇರುತ್ತೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ ” ರಾಜಕೀಯದಲ್ಲಿ ಇವೆಲ್ಲ ಇರುತ್ತೆ.
ದಲಿತ ನಾಯಕ ಅಂತ ED ದಾಳಿ ಮಾಡಿದೆ ಅಂತ ಹೇಳೋಕೆ ಆಗಲ್ಲ. ಆದರೆ ಕಾಂಗ್ರೆಸ್ ಪಾರ್ಟಿ ಅಂತ ಹೇಳಬೇಕು. ನಾನು ಕೂಡ ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ಧೇನೆ. ಇಡಿ ಎಲ್ಲಾ ದಾಖಲೆ ಕೊಡೊದಕ್ಕೆ ಪರಮೇಶ್ವರ್ ಅವರ ಸಿಬ್ಬಂದಿಗೆ ಹೇಳಿದ್ದಾರಂತೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಇದನ್ನೂ ಓದಿ :ಗ್ಯಾಂಗ್ರೇಪ್ ಆರೋಪಿಗಳಿಗೆ ಜಾಮೀನು: ಜೈಲಿನಿಂದಲೇ ರೋಡ್ ಶೋ ನಡೆಸಿದ ಆರೋಪಿಗಳು
2028ಕ್ಕೆ ಸಿಎಂ ಕ್ಯಾಂಡಿಡೆಟ್..!
ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ ” ನಾನು ಮಹಾನಾಯಕ ಅಲ್ಲ
ನಾನು ಈಗ ಸಿಎಂ ಕ್ಯಾಂಡಿಡೆಟ್ ಅಲ್ಲ, ಆದರೆ ಈಗ ಸಿಎಂ ಸ್ಥಾನಕ್ಕೆ ಗಲಾಟೆ ಆಗುತ್ತಿದೆ. ಆದರೆ ನಾನು 2028ಕ್ಕೆ ಸಿಎಂ ಆಗಬೇಕು ಎಂದು ಕೊಂಡಿದ್ದೇನೆ. ಈಗ ನಾನು ಯಾರಿಗೂ ಒತ್ತಡ ಮಾಡಲ್ಲ, ನಮ್ಮದೇನಿದ್ರೂ 28ಕ್ಕೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ರಾಮನಗರ ಹೆಸರು ಬದಲಾವಣೆ ಬಗ್ಗೆ ಸತೀಶ್ ಮಾತು..!
ಇದನ್ನೂ ಓದಿ :ತಾಳಿ ಕಟ್ಟುವ ವೇಳೆ ಮುರಿದು ಬಿತ್ತು ಮದುವೆ: ‘ಕಡೇ ಕ್ಷಣದಲ್ಲಿ ಕರಿಮಣಿ ಮಾಲೀಕ ನೀನಲ್ಲ’ ಎಂದ ವಧು
ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿರುವ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ “ಅಧಿಕಾರಕ್ಕೆ ಯಾರು ಶಾಶ್ವತ ಅಲ್ಲ, ಚಕ್ರ ತಿರುಗುತ್ತಲೇ ಇರುತ್ತದೆ, ಡಿಸಿಎಂ ಏನೋ ಉದ್ದೇಶ ಇಟ್ಟು ಮಾಡಿರಬಹುದು. ನಮ್ಮರಾಜ್ಯದಲ್ಲೂ ಹೊಸಪೇಟೆ ವಿಜಯನಗರ ಮಾಡಿದ್ರು. ಯುಪಿಯಲ್ಲೂ ಹಲವು ಬದಲಾವಣೆ ಮಾಡಿದ್ದಾರೆ ಎಂದು ಹೇಳಿದರು.