Friday, May 23, 2025

ಬೆದರಿಕೆ ಹಾಕಿ ವಿಡಿಯೋ ಮಾಡಿಸಿಕೊಂಡಿದ್ದಾನೆ: ವಿಚಾರಣೆ ಮುಗಿಸಿ ಶಾಕಿಂಗ್​ ಹೇಳಿಕೆ ಕೊಟ್ಟ ಸಂತ್ರಸ್ಥೆ

ಬೆಂಗಳೂರು : ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ದ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು. ವಿಚಾರಣೆಗೆ ಹಾಜರಾಗಿದ್ದ ಸಂತ್ರಸ್ಥ ಮಹಿಳೆ, ವಿಚಾರಣೆ ಮುಗಿಸಿ ಹೊರಬಂದು ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

ವಿಡಿಯೋ ತೋರಿಸಿ ಬ್ಲಾಕ್​ಮೇಲ್ ಮಾಡಿ ವಿಡಿಯೋ ಮಾಡಿಕೊಂಡಿದ್ದ..!

ಇಂದು ಬೆಳಿಗ್ಗೆ (ಮೇ.23) ಸಂತ್ರಸ್ಥ ಮಹಿಳೆಯ ವಿಡಿಯೋವೊಂದು ವೈರಲ್​ ಆಗಿತ್ತು. ಈ ವಿಡಿಯೋದಲ್ಲಿ ಮಹಿಳೆ “ನಾನು ಒತ್ತಾಯಪೂರ್ವಕವಾಗಿ ದೂರು ನೀಡಿಲ್ಲ. ನಾನು ಸತ್ತರೂ ಯಾರು ಕಾರಣರಲ್ಲ. ಇದು ನನ್ನ ಸ್ವಂತ ಕಾರಣ. ನನ್ನ ಮನು ಮಧ್ಯೆ ಒಂದಷ್ಟು ಜಗಳ ಗೊಂದಲಗಳಿತ್ತು ನಿಜ. ಆದರೆ ಅವರ ಸಿನಿಮಾ ನಿರ್ಮಾಪಕರಿಗೆ ಮೆಸೇಜ್ ಮಾಡಿದ್ದು ತಪ್ಪು. ನಮ್ಮಿಬ್ಬರ ನಡುವಿನ ಜಗಳ ನಮ್ಮಲ್ಲೇ ಇರಬೇಕಿತ್ತು. ಸಿನಿಮಾಗೆ ತೊಂದರೆ ನೀಡುವ ಉದ್ದೇಶ ನನ್ನದಾಗಿರಲಿಲ್ಲ ಎಂದಿದ್ದರು. ಇದೀಗ ಈ ವಿಡಿಯೋವನ್ನು ಆರೋಪಿ ಮನು ಬೆದರಿಕೆ ಹಾಕಿ ಮಾಡಿಸಿಕೊಂಡಿದ್ದ ಎಂದು ತಿಳಿದು ಬಂದಿದ್ದು. ಇದನ್ನೂ ಓದಿ :ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಮಾಡೋಕೆ ಹೆಸರು ಚೇಂಜ್​ ಮಾಡಿದಿವಿ: ಡಿ.ಕೆ ಶಿವಕುಮಾರ್

ವಿಚಾರಣೆ ಮುಗಿಸಿ ಸ್ಪಷ್ಟನೆ ಕೊಟ್ಟ ಮಹಿಳೆ..!

ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಸಂತ್ರಸ್ಥ ಮಹಿಳೆ, ವಿಚಾರಣೆ ಮುಗಿಸಿ ಸ್ಪಷ್ಟನೆ ನೀಡಿದ್ದು. ‘ಅಪ್ಪಣ್ಣ ಅವರ ವಿಚಾರದಲ್ಲಿ ಮನು ಒತ್ತಾಯ ಮಾಡಿ ವಿಡಿಯೋ ರೆಕಾರ್ಡ್ ಮಾಡಿಸಿದ್ದ. ಏಪ್ರಿಲ್ ನಲ್ಲಿ ಬ್ಲಾಕ್​ಮೇಲ್ ಮಾಡಿ ಆತ ವಿಡಿಯೋ ಮಾಡಿಸಿದ್ದ. ಅಪ್ಪಣ್ಣ ಜೊತೆ ಕಾರ್ಯಕ್ರಮಗಳಿಗೆ ಹೋಗ್ಬಾರ್ದು ಅಂತಾ ಬೆದರಿಸಿ ಹಾಕಿದ್ದ. ಈ ಬೆದರಿಕೆಗೆ ಹೆದರಿ ನಾನು ವಿಡಿಯೋ ಮಾಡಿದ್ದೆ. ಆದರೆ ಅವತ್ತೆ ನಾನು ಅಪ್ಪಣ್ಣನ ಬಳಿ ಕ್ಷಮೆ ಕೇಳಿದ್ದೆ ಎಂದು ಹೇಳಿದರು.

ಇದನ್ನೂ ಓದಿ :ರಾಮಲಲ್ಲಾ ಶಿಲೆ ಸಿಕ್ಕ ಸ್ಥಳದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ದಲಿತ ಸಂಘಟನೆ ವಿರೋಧ: ಫ್ಲೆಕ್ಸ್​ ಹರಿದು ದಾಂಧಲೆ

ಅಲೋಕ್ ಎಂಬ ವ್ಯಕ್ತಿಯ ಬಗ್ಗೆ ಪ್ರಸ್ತಾಪದ ಬಗ್ಗೆ ಮಾತನಾಡಿದ ಸಂತ್ರಸ್ಥೆ “ಅಲೋಕ್ ಎಂಬಾತ ಒಬ್ಬ ಸಮಾಜ ಸೇವಕ,  ನನ್ನ ಆತನ ಮಧ್ಯೆ ಯಾವುದೇ ಲವ್ ಇರಲಿಲ್ಲ. ಆತನೇ ನನ್ನ ಮತ್ತು ಮನು ವಿಚಾರದಲ್ಲಿ ಸಂಧಾನ ಮಾಡ್ತಿದ್ದ. ಆತನ ಹೆಸರು ನನ್ನ ಕವಚಕ್ಕೋಸ್ಗರ ಬಳಸಿದ್ದೀನಿ. ಮನು ನನಗೆ ಸಾಕಷ್ಟು ಬ್ಲಾಕ್ ಮೇಲ್ ಮಾಡಿದ್ದಾನೆ ಎಂದು ಹೇಳಿದರು.

ಕುಡಿಸಿ ಸಾಕಷ್ಟು ವಿಡಿಯೋ ಮಾಡಿಸಿಕೊಂಡಿದ್ದ..!

ವೈರಲ್​ ಆಗು್ತ್ತಿರುವ ವಿಡಿಯೋಗಳ ಬಗ್ಗೆ ಮಾತನಾಡಿದ ಸಂತ್ರಸ್ಥ ಮಹಿಳೆ ” ಕುಡಿಸಿ ಸಾಕಷ್ಟು ಆಡಿಯೋ ವಿಡಿಯೋ ಮಾಡಿದ್ದಾನೆ. ಮೊನ್ನೆ ಶನಿವಾರ ನನಗೆ ಕುಡಿಸಿ, ಖಾಸಗಿ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾನೆ.
ವಿಡಿಯೋ, ಆಡಿಯೋ ಮಾಡ್ಕೊಂಡು ಬೆದರಿಸಿದ್ದಾನೆ. ವೈರಲ್ ಆಗಿರುವ ಆಡಿಯೋ, ವಿಡಿಯೋಗಳನ್ನ ಬಲವಂತವಾಗಿ ಮನುನೇ ಮಾಡಿಸಿದ್ದು.  ಶನಿವಾರ ಕ್ರೂರವಾಗಿ ನಡ್ಕೊಂಡಿದ್ದಕ್ಕೆ ನಾನು ಕಂಪ್ಲೆಂಟ್ ಕೊಟ್ಟಿದೀನಿ ಎಂದು ಹೇಳಿದರು. ಇದನ್ನೂ ಓದಿ :ಪರಂ ವಿರುದ್ದದ ತನಿಖೆಗೆ ಮಹಾ ನಾಯಕನಿಂದ ಪತ್ರ: ರಾಜಕೀಯದಲ್ಲಿ ಇವೆಲ್ಲ ಇರುತ್ತೆ ಎಂದ ಜಾರಕಿಹೊಳಿ

ಮುಂದುವರಿದು ಮಾತನಾಡಿದ ಮಹಿಳೆ ಸಿನಿಮಾಗೂ ನನ್ನ ದೂರಿಗೂ ಸಂಬಂಧವಿಲ್ಲ, ಸಿನಿಮಾ ಟೀಂನವರು ನನಗೆ ದೂರು ಕೊಡಬಾರದು ಎಂದು ಮನವಿ ಮಾಡಿದ್ದರು. ಆದರೆ ಆತ ನನಗೆ ಕೊಟ್ಟಿರುವ ಹಿಂಸೆಯಿಂದ ನೊಂದು ದೂರು ಕೊಟ್ಟಿದ್ದೇನೆ, ಆತ ಹೇಳಿರುವುದು ಯಾವುದು ನಿಜವಲ್ಲ ಎಂದು ಹೇಳಿದರು.

RELATED ARTICLES

Related Articles

TRENDING ARTICLES