ಪ್ರಸ್ತುತ ಭಾರತದಲ್ಲಿ ಕೋವಿಡ್ ಪ್ರಕರಣಗಳು 257ಕ್ಕೆ ಏರಿದ್ದರೂ ಆತಂಕ ಪಡುವ ಅಗತ್ಯವಿಲ್ಲವೆಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದರ ನಡುವೆ ದಕ್ಷಿಣದ ರಾಜ್ಯಗಳಾದ ಮಹರಾಷ್ಟ್ರ, ಕೇರಳ ಮತ್ತು ತಮಿಳು ನಾಡಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಶೇಕಡವಾರು ಹೆಚ್ಚಾಗುತ್ತಿವೆ. ಇದರಿಂದ ಎಚ್ಚೆತ್ತಿರುವ ಆಂದ್ರ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿದೆ. ಇದನ್ನೂ ಓದಿ :ಗುದದ್ವಾರದ ನೋವಿಗೆ ಚಿಕಿತ್ಸೆ ಪಡೆಯಲು ಪಶು ಆಸ್ಪತ್ರೆಗೆ ಬಂದ ಕಪಿರಾಯ: ವಿಡಿಯೋ ವೈರಲ್
ಆಂಧ್ರ ಪ್ರದೇಶದಲ್ಲಿ ನಿನ್ನೆ ಒಂದೇ ದಿನ ಕೋವಿಡ್ 19 ಪಾಸಿಟಿವ್ ಕೇಸ್ ದಾಖಲಾಗಿದೆ. ಗುಜರಾತ್‌ನಲ್ಲೂ 15 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನೆರೆ ರಾಜ್ಯ ಕೇರಳ ಒಂದರಲ್ಲೇ 186 ಕೇಸ್ ಇದ್ದು 95 ಸಕ್ರಿಯ ಪ್ರಕರಣಗಳು ಇವೆ. ಕಳೆದ ಕೆಲ ವರ್ಷಗಳಿಂದ ಮರೆಯಾಗಿದ್ದ ಮಹಾಮಾರಿ ಮತ್ತೆ ವಕ್ಕರಿಸಿತ ಎಂಬ ಬಗ್ಗೆ ಅನುಮಾನಗಳು ಆರಂಭವಾಗಿದ್ದು. ಕೇಂದ್ರ ಆರೋಗ್ಯ ಇಲಾಖೆ ಹೆಚ್ಚು ಆತಂಕಪಡುವ ಅಗತ್ಯವಿಲ್ಲ ಎಂದು ವರದಿ ನೀಡಿದೆ. ಇದನ್ನೂ ಓದಿ :Z+ ಭದ್ರತೆಯೊಂದಿಗೆ ರಸ್ತೆ ದಾಟಿದ ಬಾಲಕಿ: ಶ್ವಾನಗಳ ಹೃದಯಸ್ಪರ್ಷಿ ವಿಡಿಯೋ ವೈರಲ್
ರಾಜ್ಯದಲ್ಲೂ ಶುರುವಾಯಿತಾ ಕೊರೋನಾತಂಕ..!
ರಾಜ್ಯದಲ್ಲೂ ಸಕ್ರಿಯ ಕೊರೋನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಈವರೆಗೂ ರಾಜ್ಯದಲ್ಲಿ 22 ಸಕ್ರಿಯ ಪ್ರಕರಣಗಳು ವರದಿಯಾಗಿದೆ. ಕಳೆದ ವಾರ ಸುಮಾರು 165 ಮಂದಿಗೆ ಕೊರೋನ ಪರೀಕ್ಷೆ ನಡೆಸಿದ್ದು. ಇವರ ಪೈಕಿ 9 ಜನರಲ್ಲಿ ಪಾಸಿಟಿವ್ ರಿರ್ಪೋಟ್ ಬಂದಿದೆ. ಪಾಸಿಟಿವ ಬಂದಿರುವವವರ ಪೈಕಿ ಯಾರು ಕೂಡ ಆಸ್ಪತ್ರೆಗೆ ದಾಖಲಾಗದ ಹಿನ್ನಲೆ ಈ ರೂಪಾಂತರಿ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.