Friday, May 23, 2025

ಹಾವು ಕಚ್ಚಿದರು, ವಿಚಲಿತನಾಗದೆ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದ ಭೂಪ: ವೈದ್ಯರು ಶಾಕ್​

ಬಾಗಲಕೋಟೆ: ಕೆಲಸ ವೇಳೆ ಕಾರ್ಮಿಕನೊಬ್ಬನ ಕಾಲಿಗೆ ಹಾವು ಕಚ್ಚಿದ್ದು. ಹಾವಿನಿಂದ ಕಡಿತಕೊಳಗಾದ ಯುವಕ ಸ್ವಲ್ಪವೂ ವಿಚಲಿತನಾಗದೆ, ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಬಂದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಈ ರೀತಿ ಆಸ್ಪತ್ರೆಗೆ ಬಂದ ಯುವಕನನ್ನು ಧೀರಜ್​​ ಎಂದು ಗುರುತಿಸಲಾಗಿದೆ.

ಬಾಗಲಕೋಟೆಯ, ನವನಗರದ ಸೆಕ್ಟರ್ ನಂಬರ್ 13ರಲ್ಲಿ ಸೆಂಟ್ರಿಂಗ್ ಕಾರ್ಮಿಕ ಧೀರಜ್ ಗೆ ಕೆಲಸದ ವೇಳೆಯಲ್ಲಿ ಕಾಲಿಗೆ ನಾಗರ ಹಾವು ಕಚ್ಚಿದೆ. ಕಚ್ಚಿದ ಹಾವನ್ನ ಹಿಡಿದು ಡಬ್ಬಿಯಲ್ಲಿ ಹಾಕಿಕೊಂಡು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬಂದ ಧೀರಜ್​, ತನ್ನ ಜೊತೆಗೆ ಹಾವನ್ನು ಹಿಡಿದು ತಂದಿದ್ದಾನೆ. ಇದನ್ನ ಕಂಡ ವೈದ್ಯರು ಧೀರಜ್​ಗೆ ತುರ್ತು ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಇದನ್ನೂ ಓದಿ :ಗ್ಯಾಂಗ್​ರೇಪ್​ ಪ್ರಕರಣ: ಜೈಲಿನಿಂದ ಹೊರಬಂದು ರೋಡ್ ಶೋ ನಡೆಸಿದ್ದ ಆರೋಪಿಗಳು ಮರಳಿ ಜೈಲಿಗೆ

ಇನ್ನು ಮೂಲತಃ ಬಿಹಾರ ರಾಜ್ಯದವನಾದ ಧೀರಜ್ ನವನಗರದಲ್ಲಿ ಸೆಂಟ್ರಿಂಗ್ ಕೆಲಸ ಮಾಡ್ತಿದ್ದಾನೆ. ಕಚ್ಚಿದ ಹಾವನ್ನು ಹುಡುಕಿ, ಡಬ್ಬಿಗೆ ಹಾಕಿಕೊಂಡು ಜಿಲ್ಲಾಸ್ಪತ್ರೆಗೆ ಬಂದು ವೈದ್ಯರಿಗೆ ಕಚ್ಚಿದ ಹಾವನ್ನು ತೋರಿಸಿದ ಧೀರಜ್​ ಕಾರ್ಯ ವೈದ್ಯರಿಗೆ ಅಚ್ಚರಿ ಮೂಡಿಸಿದ್ದು. ಇದರಿಂದಾಗಿ ಧೀರಜ್​ಗೆ ಚಿಕಿತ್ಸೆ ನೀಡಲು ಸಹಕಾರಿಯಾಯಿತು ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಯುವಕ ಧೀರಜ್​ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇದನ್ನೂ ಓದಿ :ವೃದ್ದನ ಹೊಟ್ಟೆಯಲ್ಲಿತ್ತು 8000 ಕಲ್ಲುಗಳು: 1 ಗಂಟೆ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯರು

RELATED ARTICLES

Related Articles

TRENDING ARTICLES