Friday, August 22, 2025
Google search engine
HomeUncategorizedಕೊಲೆ ಮಾಡಿ, ಶವವನ್ನು ಮೊಸಳೆಗೆ ಎಸೆಯುತ್ತಿದ್ದ ಸೀರಿಯಲ್​ ಕಿಲ್ಲರ್​ ಬಂಧನ..!

ಕೊಲೆ ಮಾಡಿ, ಶವವನ್ನು ಮೊಸಳೆಗೆ ಎಸೆಯುತ್ತಿದ್ದ ಸೀರಿಯಲ್​ ಕಿಲ್ಲರ್​ ಬಂಧನ..!

ನವದೆಹಲಿ: ಸಾಲು ಸಾಲು ಕೊಲೆಗಳನ್ನು ಮಾಡಿ, ಅವರ ದೇಹಗಳನ್ನ ತುಂಡು ತುಂಡಾಗಿ ಕತ್ತರಿಸಿ ಮೊಸಳೆಗೆ ಆಹಾರವಾಗಿ ಎಸೆಯುತ್ತಿದ್ದ ಖರ್ತನಾಕ್​ ವೈದ್ಯನನ್ನು ದೆಹಲಿ ಪೊಲೀಸರು ಬಂಧಿಸಿದ್ದು. ಬಂಧಿತ ಆರೋಪಿಯನ್ನು ದೇವೇಂದ್ರ ಶರ್ಮಾ ಎಂದು ಗುರುತಿಸಲಾಗಿದೆ.

ಬಿಎಎಂಎಸ್ ಪದವಿಧರನಾಗಿದ್ದ ದೇವೇಂದ್ರ ಶರ್ಮಾ ಆರ್ಯುವೇದ ವೈದ್ಯನಾಗಿದ್ದ. 2002 ಮತ್ತು 2004ರ ನಡುವೆ ಟ್ಯಾಕ್ಸಿ ಮತ್ತು ಟ್ರಕ್ ಚಾಲಕರ ಕ್ರೂರ ಹತ್ಯೆಗಳಿಗಾಗಿ ತಿಹಾರ್ ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ. ಹೈವೇಗಳಲ್ಲಿ ಡ್ರಾಪ್ ಕೇಳುವ ನೆಪದಲ್ಲಿ ಲಾರಿ ಮತ್ತು ಟ್ರಕ್ ಗಳನ್ನು ಹತ್ತಿಕೊಂಡು ಬಳಿಕ ಚಾಲಕರನ್ನೇ ಕೊಂದು ಹಾಕುತ್ತಿದ್ದ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಇದನ್ನೂ ಓದಿ :ಪರಂ ವಿರುದ್ದ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸಿಗರೆ ಪತ್ರ ಬರೆದಿದ್ದಾರೆ: ಹೊಸ ಬಾಂಬ್​ ಸಿಡಿಸಿದ ಜೋಶಿ

ಸರಣಿ ಹಂತಕನಾಗುವ ಮೊದಲು, ಅವನು 1998ರಿಂದ 2004ರವರೆಗೆ ಅಕ್ರಮ ಮೂತ್ರಪಿಂಡ ಕಸಿ ಜಾಲವನ್ನು ನಡೆಸುತ್ತಿದ್ದ. 125ಕ್ಕೂ ಹೆಚ್ಚು ಅಕ್ರಮ ಮೂತ್ರಪಿಂಡ ಕಸಿಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೇ ಈತನ ವಿರುದ್ದ 27 ಕೊಲೆ ಪ್ರಕರಣಗಳಿದ್ದು. ಅಪಹರಣ ಮತ್ತು ದರೋಡೆ ಸೇರಿದಂತೆ ಅನೇಕ ಪ್ರಕರಣಗಳು ದಾಖಲಾಗಿದ್ದವು.

ದೆಹಲಿ, ರಾಜಸ್ಥಾನ ಮತ್ತು ಹರಿಯಾಣದಾದ್ಯಂತ 7 ಪ್ರತ್ಯೇಕ ಕೊಲೆ ಪ್ರಕರಣಗಳಿಗೆ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದಈತ ಗುರುಗ್ರಾಮ್ ನ್ಯಾಯಾಲಯದಿಂದ ಮರಣದಂಡನೆಯನ್ನು ಸಹ ಪಡೆದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ :ರಾಮನಗರ ಹೆಸರು ಬದಲಾವಣೆಗೆ ಕ್ಯಾಬಿನೆಟ್ ಒಪ್ಪಿಗೆ: ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ

ಪೆರೋಲ್​ ಮೇಲೆ ಬಿಡುಗಡೆಯಾಗಿ ಕಾಣೆಯಾಗಿದ್ದ ಕಿರಾತಕ..!

ಕಳೆದ ಅನೇಕ ವರ್ಷಗಳಿಂದ ಜೈಲಿನಲ್ಲಿದ್ದ ದೇವೇಂದ್ರ ಶರ್ಮಾ ಪೆರೋಲ್​ ಮೇಲೆ ಹೊರಬಂದು ಕಾಣೆಯಾಗಿದ್ದನು. ಮೊದಲಿಗೆ 2020ರಲ್ಲಿ 20 ದಿನಗಳ ಪೆರೋಲ್ ನಂತರ ಅವನು ಹಿಂತಿರುಗಿರಲಿಲ್ಲ. ದೆಹಲಿಯಲ್ಲಿ ಬಂಧಿಸಲ್ಪಡುವ ಮೊದಲು 7 ತಿಂಗಳುಗಳ ಕಾಲ ತಲೆಮರೆಸಿಕೊಂಡಿದ್ದ. ಜೂನ್ 2023ರಲ್ಲಿ ಅವನಿಗೆ ಎರಡು ತಿಂಗಳು ಪೆರೋಲ್ ನೀಡಲಾಯಿತು. ಆದರೆ ಆಗಸ್ಟ್ 3, 2023ರ ನಂತರ ನಾಪತ್ತೆಯಾಗಿದ್ದನು.

ಇದನ್ನೂ ಓದಿ :‘ಮೊದಲು ಇಲ್ಲಿಂದ ಎದ್ದು ಹೊರಹೋಗು’: ವರದಿಗಾರನ ಮೇಲೆ ಟ್ರಂಪ್​ ಗರಂ

ನಾಪತ್ತೆಯಾಗಿ ದೇವೇಂದ್ರ ಶರ್ಮಾನನ್ನು ರಾಜಸ್ಥಾನದ ದೌಸಾದಲ್ಲಿರುವ ಆಶ್ರಮದಿಂದ ಬಂದಿಸಲಾಗಿದ್ದು. ಅಲ್ಲಿ ಆತ ಸುಳ್ಳು ಗುರುತಿನಡಿಯಲ್ಲಿ ಅರ್ಚಕರೆಂದು ಹೇಳಿಕೊಂಡು ಬದುಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments