Thursday, May 22, 2025

ಮದುವೆ ಮಧ್ಯೆ ಶಿಕ್ಷಣಕ್ಕೆ ಮಹತ್ವ: ತಾಳಿ ಕಟ್ಟಿಸಿಕೊಂಡು ಪರೀಕ್ಷೆಗೆ ಹಾಜರಾದ ಯುವತಿಯರು

ಹಾಸನ/ಚಾಮರಾಜನಗರ : ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿಯರಿಬ್ಬರು ಮದುವೆ ಮುಗಿಸಿಕೊಂಡು ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು. ಹಾಸನ ಮತ್ತು ಚಾಮರಾಜನಗರದ ಯುವತಿಯರು ತಾಳಿ ಕಟ್ಟಿಸಿಕೊಂಡು ತಮ್ಮ ಅಂತಿಮ ವರ್ಷದ ಬಿ,ಕಾಂ ಪರೀಕ್ಷೆಗೆ ಹಾಜರಾಗಿದ್ದಾರೆ.

ಹಾಸನದ ಯುವತಿ ಕವನ..!

ಹಾಸನದ ಗುಡ್ಡೆನಹಳ್ಳಿಯ ದಿನೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿ ಕವನ, ಮಾಂಗಲ್ಯ ಧಾರಣೆ ಆಗುತ್ತಲೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿ ಬಂದು ಪರೀಕ್ಷೆ ಬರೆದಿದ್ದಾರೆ. ಅಂತಿಮ ವರ್ಷದ ಬಿಕಾಂ ಆದಾಯ ತೆರಿಗೆ 2 ವಿಷಯದ ಪರೀಕ್ಷೆಗೆ ಕವನ ಹಾಜರಾಗಿದ್ದಾರೆ. ಇದನ್ನೂ ಓದಿ :ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ದ ರೇಪ್​ ಕೇಸ್

ಹಾಸನದ ಪ್ರೈಡ್ ಪದವಿ ಕಾಲೇಜಿನಲ್ಲಿ ಅಂತಿಮ ಬಿಕಾಂ ಓದುತ್ತಿರೊ ಕವನಾ. ಪರೀಕ್ಷೆ ಬರೆಯಬೇಕು ಎಂಬ ಆಸೆ ಹೊಂದಿದ್ದಳು. ಈಕೆಯ ಆಸೆಗೆ ಸಾಥ್ ನೀಡಿರುವ ಪೋಷಕರು ಮದುವೆ ನಡುವೆಯು ಮಗಳು ಪರೀಕ್ಷೆ ಬರೆಯಲು ಅವಕಾಶ ನೀಡಿದ್ದಾರೆ. ಮುಹೂರ್ತ ಮುಗಿಯುತ್ತಿದ್ದಂತೆ ಸಹೋದರಿ ಕವನಳಾನ್ನು ಆಕೆಯ ಅಣ್ಣ ಕಾರ್ತಿಕ್​ ಪರೀಕ್ಷೆ ಬರೆಯಲು ಕರೆತಂದಿದ್ದಾರೆ. ಇದನ್ನೂ ಓದಿ :ತೀವ್ರ ಹೃದಯಘಾತ: 19 ವರ್ಷದ ಯುವಕ-ಯುವತಿ ಸಾ*ವು

ಚಾಮರಾಜನಗರದ ಯುವತಿ ಸಂಗೀತ..!

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲೂ ಇಂತಹದೆ ಘಟನೆ ನಡೆದಿದ್ದು. ಕೊಳ್ಳೇಗಾಲದ ಯುವತಿ ಆರ್​. ಸಂಗೀತ ನಂಜನಗೂಡು ನಿವಾಸಿ ಯೋಗೇಶ್ ಜೊತೆ ಇಂದು ನವ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯ ನಡುವೆ ಶಿಕ್ಷಣದ ಮಹತ್ವ ಅರಿತಿರುವ ಯುವತಿ ಮೂಹರ್ತ ಮುಗಿದ ತಕ್ಷ ಹಸಮಣೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.

RELATED ARTICLES

Related Articles

TRENDING ARTICLES