Thursday, May 22, 2025

Z+ ಭದ್ರತೆಯೊಂದಿಗೆ ರಸ್ತೆ ದಾಟಿದ ಬಾಲಕಿ: ಶ್ವಾನಗಳ ಹೃದಯಸ್ಪರ್ಷಿ ವಿಡಿಯೋ ವೈರಲ್

ನೀವು ನಾಯಿ ಪ್ರಿಯರಾಗಿರಲಿ ಅಥವಾ ಇಲ್ಲದಿರಲಿ, ನಾಯಿಗಳಿಗೂ ಮನುಷ್ಯರಂತೆ ಭಾವನೆಗಳಿವೆ ಎಂದು ನೀವು ಖಂಡಿತ ಒಪ್ಪುತ್ತೀರಿ. ಯಾರಾದರೂ ಅವುಗಳನ್ನು ಸ್ವಲ್ಪ ಸಮಯದವರೆಗೆ ಪ್ರೀತಿಯಿಂದ ನಡೆಸಿಕೊಂಡರ ಸಾಕು, ಅವುಗಳು ತಮ್ಮ ಜೀವನದುದ್ದಕ್ಕೂ ಅವರನ್ನು ಮರೆಯುವುದಿಲ್ಲ. ತನ್ನ ಮಾಲೀಕರಿಗೆ ಬೇರೆಯವರಿಂದ ಹಾನಿಯಾಗದಂತೆ ನೋಡಿಕೊಳ್ಳುತ್ತವೆ. ಇದೇ ರೀತಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು. ಬಾಲಕಿಯೊಬ್ಬಳಿಗೆ ಶ್ವಾನಗಳ ಸೈನ್ಯವೊಂದು Z+ ಭದ್ರತೆ ಒದಗಿಸಿವೆ.ಇದನ್ನೂ ಓದಿ :Viral Video: ಸೆಕೆ ತಾಳಲಾರದೆ ಎಟಿಎಂ ಎಸಿಯಲ್ಲಿ ವಾಸ್ತವ್ಯ ಹೂಡಿದ ಕುಟುಂಬ

ಮುದ್ದಾದ ಹುಡುಗಿಯೊಬ್ಬಳು ಶ್ವಾನಗಳ ಗುಂಪಿನ ಮೇಲೆ ಕುಳಿತು ರಸ್ತೆಯಲ್ಲಿ ಹೋಗುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಒಬ್ಬ ಪುಟ್ಟ ಹುಡುಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ, ಆದರೆ ಅವಳು ಒಬ್ಬಂಟಿಯಾಗಿಲ್ಲ, ಜೊತೆಗೆ ಅವಳ ಸ್ನೇಹಿತರಾದ ಆರು ನಾಯಿಗಳು ಸಹ ಇವೆ. ವಿಶೇಷವೆಂದರೆ ಆ ಹುಡುಗಿ ಈ ನಾಯಿಗಳಲ್ಲಿ ಒಂದರ ಮೇಲೆ ಸವಾರಿ ಮಾಡುತ್ತಿದ್ದಾಳೆ, ಅದು ಅವಳ ಕುದುರೆಯಂತಿದೆ.

RELATED ARTICLES

Related Articles

TRENDING ARTICLES