ಕಾಮಿಡಿ ಕಿಲಾಡಿ ಖ್ಯಾತಿಯ ಮಡೆನೂರು ಮನು ಮೇಲೆ ಸಹ ಕಲಾವಿದೆಯೊಬ್ಬರು ಅತ್ಯಾಚಾರ ಪ್ರಕರಣ ದಾಖಲಿಸಿದ್ದು. ಮದುವೆಯಾಗುವುದುಗಾಗಿ ನಂಬಿಸಿ ಮೋಸ ಮಾಡಿದ್ದಾನೆ ಎಂದು ಅನ್ನಪೂರ್ಣಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ಕೊಟ್ಟ ದೂರಿನಲ್ಲಿ “ಮಹಿಳೆಯನ್ನು ಗರ್ಭಿಣಿ ಮಾಡಿ, 2 ಭಾರಿ ಗರ್ಭಪಾತ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ :ಮಿಲ್ಕಿ ಬ್ಯೂಟಿಗೆ ಮೈಸೂರ್ ಸ್ಯಾಂಡಲ್ ಸೋಪ್ ರಾಯಭಾರಿ ಪಟ್ಟ: ಬರೋಬ್ಬರಿ 6.2 ಕೋಟಿ ಸಂಭಾವನೆ
ಅನ್ನಪೂರ್ಣಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸಹ ಕಲಾವಿದೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದು. ಈ ದೂರಿನಲ್ಲಿ ” 2018ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಶೋ ಮೂಲಕ ಮಡೆನೂರು ಮನು ಪರಿಚಯವಾದ ಕುರಿತು ಸಹಕಲಾವಿದೆ ಉಲ್ಲೇಖಿಸಿದ್ದಾರೆ. ಈ ವೇಳೆ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿದ್ದು ಇಬ್ಬರು ಶೋಗಳಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.
ಶಿವಮೊಗ್ಗದಲ್ಲಿ ಅತ್ಯಾಚಾರ ಎಸಗಿದ್ದ ಮನು..!
ಮಹಿಳೆ ವಾಸಿಸಲು ಬೆಂಗಳೂರಿನಲ್ಲಿ ಮನೆ ಮಾಡಿ ಕೊಟ್ಟಿದ್ದ ಮನು. ಆಕೆಯನ್ನು ಕಾರ್ಯಕ್ರಮ ನಿಮಿತ್ತ 2022ರಲ್ಲಿ ಶಿವಮೊಗ್ಗದ ಶಿಕಾರಿಪುರಕ್ಕೆ ಕರೆದೊಯ್ದಿದ್ದನು. ಈ ಕಾರ್ಯಕ್ರಮ ಮುಗಿದ ನಂತರ ಸಂಭಾವನೆ ಕೊಡುವ ನೆಪದಲ್ಲಿ ರೂಮಿಗೆ ಬಂದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಜೊತೆಗೆ ಮಹಿಳೆಯ ವಿರೋಧದ ನಡುವೆ ಆಕೆಗೆ ತಾಳಿ ಕಟ್ಟಿದ್ದು. ಆಕೆಯನ್ನು ಎರಡು ಭಾರಿ ಗರ್ಭಿಣಿ ಮಾಡಿದ್ದ ಈತ ಆಕೆಗೆ ಎರಡು ಬಾರಿ ಗರ್ಭನಿರೋಧಕ ಮಾತ್ರೆ ನೀಡಿ ಗರ್ಭಪಾತ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ:ಸಿಂಧೂರ ಅಳಿಸಲು ಬಂದವರು ಮಣ್ಣಲ್ಲಿ ಮಣ್ಣಾಗಿದ್ದಾರೆ: ನರೇಂದ್ರ ಮೋದಿ
ಜೊತೆಗೆ ಮಹಿಳೆಯ ಜೊತೆಗಿನ ಖಾಸಗಿ ವಿಡಿಯೋವನ್ನು ಚಿತ್ರೀಕರಿಸಿದ್ದ ಈತ ಆಕೆಗೆ ಬ್ಲಾಕ್ಮೇಲ್ ಮಾಡಿದ್ದನು ಎಂದು ತಿಳಿದು ಬಂದಿದ್ದು. ಮಹಿಳೆಯ ಬಳಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾನೆ ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.