Thursday, May 22, 2025

ಪರಂ ವಿರುದ್ದ ಕ್ರಮ ತೆಗೆದುಕೊಳ್ಳಲು ಕಾಂಗ್ರೆಸಿಗರೆ ಪತ್ರ ಬರೆದಿದ್ದಾರೆ: ಹೊಸ ಬಾಂಬ್​ ಸಿಡಿಸಿದ ಜೋಶಿ

ಗದಗ : ಗೃಹ ಸಚಿವ ಪರಮೇಶ್ವರ ಶಿಕ್ಷಣ ಸಂಸ್ಥೆಯ ಮೇಲೆ ED ದಾಳಿ ಪ್ರಕರಣದ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೊಸ ಬಾಂಬ್​ ಸಿಡಿಸಿದ್ದಾರೆ, ‘ಪರಮೇಶ್ವರ್​ ಮೇಲೆ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್​ ಪಕ್ಷದವರೆ ಇಡಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ’ ಎಂದು ಜೋಶಿ ಆರೋಪಿಸಿದ್ದಾರೆ.

ಗದಗದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ “ಕಾಂಗ್ರೆಸ್ ಪಕ್ಷಕ್ಕೆ ನಾವು ಹೇಳುವುದು ಇಷ್ಟೇ
2013 ರಲ್ಲಿ ಪರಮೇಶ್ವರ ಅವರನ್ನು ಸೋಲಿಸಿದ್ದು ಯಾರು? ಸಿದ್ದರಾಮಯ್ಯನವರೆ, ಇತಿಹಾಸವನ್ನು ಜನರು ಅಷ್ಟು ಬೇಗ ಮರೆಯೊದಿಲ್ಲ. ಇದೇ ಸಿದ್ದರಾಮಯ್ಯ ಅವರು ಪರಮೇಶ್ವರ ಅವರನ್ನು ಸೋಲಿಸಿದ್ದು ಎಂಬುದು ಜಗಜ್ಜಾಹಿರವಾಗಿದೆ. ಇದನ್ನೂ ಓದಿ :ರಾಮನಗರ ಹೆಸರು ಬದಲಾವಣೆಗೆ ಕ್ಯಾಬಿನೆಟ್ ಒಪ್ಪಿಗೆ: ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ

ಕಳ್ಳತನದಿಂದ ಬಂಗಾರ ತಂದಿರುವುದನ್ನು ಹಿಡಿದು, ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರಿಗೊಬ್ಬರು ಕ್ರಮ ತೆಗೆದುಕೊಳ್ಳಿ ಅಂತ EDಗೆ ಪತ್ರ ಬರೆಯುತ್ತಿದ್ದವರು ಯಾರು. ಕಾಂಗ್ರೆಸ್​ನ ಒಂದು ಗುಂಪು ಪರಮೇಶ್ವರ ಮೇಲೆ ಕ್ರಮ ಆಗಬೇಕು ಅಂತ ED ಗೆ ಎಲ್ಲಾ ಮಾಹಿತಿ ಕಳಿಸುತ್ತಾರೆ. ಇದೆಲ್ಲಾ ಆದ ಮೇಲೆ ಡ್ರಾಮ ಮಾಡ್ತಾ ಇದ್ದೀರ.

ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಪರಮೇಶ್ವರ ಬಗ್ಗೆ ನಮಗೆ ಗೌರವ ಇದೆ, ಅವರು ಒಬ್ಬ ಸಭ್ಯ ರಾಜಕಾರಣಿ, ಕಾಂಗ್ರೆಸ್​ನ ಒಂದು ಗುಂಪಿನವರು ಮಾಹಿತಿಗಳನ್ನೆಲ್ಲಾ ED ಗೆ ಕಳುಹಿಸಿದ್ದು. ಯಾರು ಕಳುಹಿಸಿದ್ದು ಅಂತ ಸಿದ್ದರಾಮಯ್ಯ ಅವರಿಗೂ ಗೊತ್ತಿದೆ. ಅವರ ಬಳಿಯೇ ಗುಪ್ತಚರ ಇಲಾಖೆ ಇದೆ. ಅವರನ್ನ ಕೇಳಿದ್ರೆ ಅವರೆ ಹೇಳ್ತಾರೆ. ಪರಮೇಶ್ವರ್​ ಅವರನ್ನ ಯಾರು ಸಿಕ್ಕಿಹಾಕಿಸಿದರು ಅಂತ. ಇದನ್ನೂ ಓದಿ :‘ಮೊದಲು ಇಲ್ಲಿಂದ ಎದ್ದು ಹೊರಹೋಗು’: ವರದಿಗಾರನ ಮೇಲೆ ಟ್ರಂಪ್​ ಗರಂ

ಸಿಕ್ಕಿರೋ ಮಾಹಿತಿ ಪ್ರಕಾರ ED ಪರಮೇಶ್ವರ್ ಅವರ ವಿರುದ್ದ ಕ್ರಮ ತೆಗೆದುಕೊಂಡಿದೆ. ಅವರು ಗೃಹಮಂತ್ರಿ ಅಂತಾಗಲಿ, ಕಾಂಗ್ರೆಸ್ ನಾಯಕರು ಅನ್ನೋ ಕಾರಣಕ್ಕೆ ಅವರ ಮೇಲೆ ಕ್ರಮ ಆಗಿಲ್ಲ. ಇವರ ಪಕ್ಷದವರೆ ಬೇಕು ಅಂತ ಮಾಹಿತಿ ಕೊಟ್ಟಿದ್ದಾರೆ. ಪರಮೇಶ್ವರಗೆ ತೊಂದರೆ ಕೊಡಬೇಕು ಎಂಬ ಯಾವ ಉದ್ದೇಶವೂ ಕೇಂದ್ರ ಸರ್ಕಾರಕ್ಕೆ ಇಲ್ಲ. ಕಾನೂನು ಪ್ರಕಾರ ತಪ್ಪಿ ಮಾಡಿದ್ರೆ ಶಿಕ್ಷೆ ಆಗುತ್ತೆ. ನಾನು ತಪ್ಪು ಮಾಡಲಿ. ಸಿದ್ದರಾಮಯ್ಯ ಅಥವಾ ಪರಮೇಶ್ವರ್​ ತಪ್ಪು ಮಾಡಿದರು ಕ್ರಮ ಆಗುತ್ತೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES