ಮೈಸೂರು: ನಗರದ ಹೊರವಲಯದಲ್ಲಿರುವ ವಿದ್ಯಾವಿಕಾಸ್ ಕಾಲೇಜಿನ ಬಳಿ ಯುವತಿಯೊಬ್ಬಳ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು. ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ಯುವತಿಯನ್ನ ಲತಾ ಎಂದು ಗುರುತಿಸಲಾಗಿದೆ.
ಮೈಸೂರಿನ ಎನ್.ಜಿ.ಒ ದತ್ತು ಸಂಸ್ಥೆಯಲ್ಲಿ 3 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಲತಾ ನಿನ್ನೆ ರಾತ್ರಿ ಕೊಲೆಯಾಗಿದ್ದಾರೆ. ಸಂಸ್ಥೆಯ ಮಗುವೊಂದನ್ನು ನೋಡಿಕೊಂಡು ಬರಲು ಕೆ.ಆರ್ ಆಸ್ಪತ್ರೆಗೆ ಹೋಗಿದ್ದ ಲತಾ ಮಳೆ ಬರುತ್ತಿದ್ದ ಕಾರಣ ತಂದೆ ಕರೆ ಮಾಡಿ ಕರೆದುಕೊಂಡು ಹೋಗುವಂತೆ ಕೇಳಿದ್ದಾಳೆ, ಆಟೋದಲ್ಲಿ ಬಾರಮ್ಮ ನಾನು ಬೇಕಾದ್ರೆ ದುಡ್ಡು ಕೊಡ್ತೀನಿ ಅಂತ ತಂದೆ ಲಕ್ಷ್ಮಣ್ ಹೇಳಿದ್ದಾರೆ. ಆದರೆ ಲತಾ ಮನೆಗೆ ಹೋಗಿರಲಿಲ್ಲಾ. ಈಗಿರುವಾಗಲೇ ಮೈಸೂರು ಹೊರವಲಯದ ಆಲನಹಳ್ಳಿ ಬಳಿ ಲತಾ ಶವ ಪತ್ತೆಯಾಗಿದೆ. ಇದನ್ನೂ ಓದಿ :ಸಂಪ್ ಸ್ವಚ್ಚಗೊಳಿಸುತ್ತಿದ್ದ ಕಾರ್ಮಿಕರಿಬ್ಬರು ಸಾ*ವು: ಮತ್ತಿಬ್ಬರು ತೀವ್ರ ಅಸ್ವಸ್ಥ
ಇನ್ನೂ ಘಟನೆ ಬಗ್ಗೆ ಲತಾ ಸೋದರಮಾವ ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದು “ಯುವತಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸ್ಥಳದಲ್ಲಿ ಮೃತದೇಹ ನೋಡಿದಾಗ ನಾವು ಕೇವಲ ಕೊಲೆ ಎಂದುಕೊಂಡಿದ್ದೆವು. ಮೃತದೇಹದ ಮೇಲೆ ಪ್ಯಾಂಟ್ ಉಲ್ಟಾ ಹಾಕಲಾಗಿತ್ತು, ಅಂದರೆ ಅತ್ಯಾಚಾರದ ನಂತರ ಕೊಲೆ ಮಾಡಿ ಬಟ್ಟೆ ತೊಡಿಸಿರಬಹುದು. ಬಡವರ ಹೆಣ್ಣು ಮಕ್ಕಳಿಗೆ ಈ ರೀತಿಯಾಗುತ್ತಿದೆ. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ :ಆಕೆ ಕೊಲೆ ಮಾಡಿದ್ದಾಳಾ?’: ನಕಲಿ IAS ಅಧಿಕಾರಿ ಪೂಜಾ ಖೇಡ್ಕರ್ ಸುಪ್ರೀಂ ಜಾಮೀನು
ಲತಾ ತಂದೆ ಲಕ್ಷ್ಮಣ್ ಮಾತನಾಡಿ, ನನ್ನ ಮಗಳು ದತ್ತು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು, ಅಲ್ಲೇ ಉಳಿದುಕೊಳ್ಳುತ್ತಿದ್ದಳು. ಬೇಕಾದಾಗ ನಾವು ಮನೆಗೆ ಕರೆಸಿಕೊಳ್ಳುತ್ತಿದ್ದೆವು. ನಿನ್ನೆ ಸಂಜೆ 6 ಗಂಟೆಗೆ ಮಗುವನ್ನು ನೋಡಲು ಆಸ್ಪತ್ರೆಗೆ ಹೋಗಿದ್ದಳು. ಈ ವೇಳೆ ಕರೆದುಕೊಂಡು ಹೋಗುವಂತೆ ಕೇಳಿದ್ಲು, ಆಟೋದಲ್ಲಿ ಬಾ ನಾನೇ ದುಡ್ಡು ಕೊಡ್ತೀನಿ ಅಂದೆ, ಆದರೆ ಬೆಳಿಗ್ಗೆ ಪೊಲೀಸರು ಕರೆ ಮಾಡಿ ಅಲನಹಳ್ಳಿಗೆ ಬರೋದಕ್ಕೆ ಹೇಳಿದರು ಹೋಗಿ ನೋಡಿದಾಗ ನನ್ನ ಮಗಳು ಶವವಾಗಿದ್ಲು ಏನಾಯ್ತು ಹೇಗಾಯ್ತು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷಗೆ ರವಾನಿಸಲಾಗಿದೆ. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.