ದೆಹಲಿ: ದೈಹಿಕ ಅಂಗವೈಕಲ್ಯದ ಬಗ್ಗೆ ಸುಳ್ಳು ಹೇಳಿ, ಉಪನಾಮ ಬದಲಾಯಿಸಿಕೊಂಡು, ಹಿಂದುಳಿದ ವರ್ಗಗಳ ನಕಲಿ ಪ್ರಮಾಣಪತ್ರ ನೀಡಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮಾಜಿ ಪ್ರೋಬೆಷನಲ್ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ಗೆ ಸುಪ್ರೀಂ ಕೋರ್ಟ್ ನಿರೀಕ್ಷಣ ಜಾಮೀನು ನೀಡಿದೆ.
ಪೂಜಾ ಖೇಡ್ಕರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ 35,000 ರೂ. ನಗದು ಭದ್ರತೆಯ ಮೇಲೆ ಅವರನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ. ಜೊತೆಗೆ ದೆಹಲಿ ಹೈಕೋರ್ಟ್ ಜಾಮೀನು ನಿರಾಕರಿಸಿದರ ಕುರಿತು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಇದನ್ನೂ ಓದಿ :ಪತಿಯ ಅಕ್ರಮ ಸಂಬಂಧ: ಡಿವೋರ್ಸ್ ಕೊಡುವಂತೆ ಗರ್ಭಿಣಿ ಪತ್ನಿಗೆ ಕಿರುಕುಳ
ಶ್ರೀಮತಿ ಪೂಜಾ ಖೇಡ್ಕರ್ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂಬ ತನಿಖಾಧಿಕಾರಿಗಳ ಹೇಳಿಕೆಯನ್ನ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ “ಸಹಕರಿಸುವುದು ಎಂದರೆ ಆಕೆಯೇನು ಕೊಲೆ ಮಾಡಿಲ್ಲ, ಅಥವಾ NDPS(ಮಾದಕ ವಸ್ತು ವಿರೋಧಿ ಕಾಯ್ದೆ) ಕಾಯ್ದೆಯ ಅಪರಾಧವಲ್ಲ, ಅವರು ತನಿಖೆಗೆ ಸಹಕರಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದಕ್ಕೆ ದೆಹಲಿ ಪೊಲೀಸರ ಪರವಾಗಿ ವಾದ ಮಂಡಿಸಿದ ವಕೀಲ ಎಸ್.ವಿ ರಾಜು ವಿರೋಧ ವ್ಯಕ್ತಪಡಿಸಿದ್ದು. ಶ್ರೀಮತಿ ಪೂಜಾ ಖೇಡ್ಕರ್ “ಪಿತೂರಿಯ ವಿವರಗಳನ್ನ ಬಿಡುಗಡೆ ಮಾಡಿಲ್ಲ, ಇದು ಒಂದು ದೊಡ್ಡ ಹಗರಣವಾಗಿದೆ. ಪೂಜಾಗೆ ನಕಲಿ ಪ್ರಮಾಣ ಪತ್ರ ನೀಡಿದವರ ಬಗ್ಗೆ ತನಿಖೆ ನಡೆಸಬೇಕಿದೆ. ಆದ್ದರಿಂದ ಆಕೆಯನ್ನು ಪೊಲೀಸ್ ಕಸ್ಟಡಿಗೆ ನೀಡುವ ಅಗತ್ಯವಿದೆ ಎಂದು ವಾದಿಸಿದರು. ಇದನ್ನೂ ಓದಿ :SSLC ಪರೀಕ್ಷೆಯಲ್ಲಿ ಫೇಲ್: ಶಾಲೆ ಮುಂಭಾಗದ ಮರಕ್ಕೆ ನೇಣು ಬಿಗಿದುಕೊಂಡು ಬಾಲಕ ಆತ್ಮಹ*ತ್ಯೆ
ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್ “ಶ್ರೀಮತಿ ಖೇಡ್ಕರ್ ಅವರು ನಕಲಿ ಪ್ರಮಾಣಪತ್ರಗಳನ್ನು ಪಡೆದ ಮೂಲವನ್ನು ಬಹಿರಂಗಪಡಿಸುವ ಅಗತ್ಯವಿದ್ದರೂ, ಅವರನ್ನು ಕಸ್ಟಡಿಯಲ್ಲಿ ಇಡಬೇಕಾಗಿಲ್ಲ” ಎಂದು ನ್ಯಾಯಾಲಯ ಉತ್ತರಿಸಿದೆ.