ಬೆಂಗಳೂರು: ವಿಧಾನಸೌದಕ್ಕೆ ಇಂದು ವಿಶೇಷ ಅಥಿತಿಗಳು ಆಗಮಿಸಿದ್ದು. ಶಕ್ತಿ ಸೌದದಲ್ಲಿ ಆನೆಗಳು ಕಾಣಿಸಿಕೊಂಡಿವೆ. ಆಂದ್ರಪ್ರದೇಶ ಸರ್ಕಾರಕ್ಕೆ ಕರ್ನಾಟಕದಿಂದ ಒಟ್ಟು 5 ಕುಮ್ಕಿ ಆನೆಗಳನ್ನ ಹಸ್ತಾಂತರಿಸಿದ್ದು. ಆಂದ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರಿಗೆ ಆನೆಗಳನ್ನ ಹಸ್ತಾಂತರಿಸಲಾಗಿದೆ. ಇದಕ್ಕೂ ಮುನ್ನ ವಿಧಾನಸೌದದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಲಾಗಿದೆ.
ಕಾಡಾನೆಗಳನ್ನು ಹಿಡಿಯಲು ಎಂದು ಪಳಗಿಸಿದ್ದ ಒಟ್ಟು 5 ಆನೆಗಳನ್ನು ಆಂದ್ರಪ್ರದೇಶಕ್ಕೆ ಹಸ್ತಾಂತರಿಸಲಾಗಿದ್ದು. ಸಕ್ರೆಬೈಲು ಆನೆ ಶಿಬಿರದಿಂದ 2 ಹಾಗೂ ದುಬಾರೆ ಆನೆ ಶಿಬಿರದಿಂದ 3 ಆನೆಗಳನ್ನು ಹಸ್ತಾಂತರಿಸಲಾಗಿದೆ. ನೆರೆ ರಾಜ್ಯದೊಂದಿಗಿನ ಸೌಹಾರ್ದ ಸಂಬಂಧ ಹೆಚ್ಚಿಸುವುದರ ಜೊತೆಗೆ, ಕರ್ನಾಟಕ ಗಡಿ ಮತ್ತು ಆಂಧ್ರದ ಆನೆ-ಮಾನವ ಸಂಘರ್ಷಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಐದು ಆನೆಗಳನ್ನು ಹಸ್ತಾಂತರ ಮಾಡಲಾಗಿದೆ. ಇದನ್ನೂ ಓದಿ: ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡುವ ಸಿಎಂ-ಡಿಸಿಎಂಗೆ ರೆಡ್ ಕಾರ್ಪೆಟ್ ಸ್ವಾಗತ: ಸ್ಥಳೀಯರಿಂದ ಆಕ್ರೋಶ
ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಅರಣ್ಯ ಸಚಿವ ಪವನ್ ಕಲ್ಯಾಣ್ ಅವರಿಗೆ ಪಳಗಿಸಿದ ಆನೆಗಳನ್ನು ಹಸ್ತಾಂತರ ಮಾಡಿದರು.
ಇದನ್ನೂ ಓದಿ :ರಾಜಸ್ಥಾನ ತಂಡಕ್ಕೆ ಸೇರಿಸೋದಾಗಿ ವಂಚನೆ: ಮಗನ ಭವಿಷ್ಯಕ್ಕಾಗಿ 24 ಲಕ್ಷ ಕೊಟ್ಟು ಮೋಸ ಹೋದ ತಂದೆ