ಬೆಳಗಾವಿ : ರಾಜಸ್ಥಾನ ರಾಯಲ್ಸ್ ಐಪಿಎಲ್ ತಂಡಕ್ಕೆ ಸೇರಿಸೋದಾಗಿ ಚಿಕ್ಕೋಡಿಯ ರಾಜ್ಯಮಟ್ಟದ ಕ್ರಿಕೆಟಿಗನಿಗೆ ಸೈಬರ್ ವಂಚಕರು 24 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು. ಮೋಸ ಹೋದ ಯುವಕನನ್ನು 19 ವರ್ಷದ ರಾಕೇಶ್ ಯಡೂರು ಎಂದು ಗುರುತಿಸಲಾಗಿದೆ.
ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಡುತ್ತಿದ್ದ ಚಿಕ್ಕೋಡಿ ತಾಲೂಕಿನ ಚಿಂಚಲಿ ಗ್ರಾಮದ ಯುವಕ ರಾಕೇಶ ಯಡೂರ್ನನ್ನು ಸೈಬರ್ ವಂಚಕರು ಇನ್ಸ್ಟಾಗ್ರಾಮ್ನಲ್ಲಿ ಸಂಪರ್ಕಿಸಿ ವಂಚಿಸಿದ್ದಾರೆ. 2024 ಮೇ ತಿಂಗಳಲ್ಲಿ ಹೈದ್ರಾಬಾದ್‌ನಲ್ಲಿ ನಡೆದ ರೈಸಿಂಗ್ ಭಾರತ್ ಕ್ರಿಕೆಟ್ ಲೀಗ್ ಟೂರ್ನಿಯ ಆಯ್ಕೆಯ ಟ್ರೈಯಲ್‌ನಲ್ಲಿ ಭಾಗಿಯಾಗಿದ್ದ ರಾಕೇಶ್ ಉತ್ತಮವಾಗಿ ಪ್ರದರ್ಶನ ನೀಡಿದ್ದ. ಇದನ್ನೂ ಓದಿ :ಕನ್ನಡ ಮಾತನಾಡಲ್ಲ ಎಂದು SBI ಬ್ಯಾಂಕ್ ಸಿಬ್ಬಂದಿ ಧಿಮಾಕು: ಟ್ವಿಟ್ ಮಾಡಿ ಸಿಎಂ ಆಕ್ರೋಶ
ಆಲ್‌ರೌಂಡರ್ ಆಟದ ಮೂಲಕ ಆಯೋಜಕರ ಗಮನ ಸೆಳೆದಿದ್ದ ರಾಕೇಶ್ಗೆ ಅನಾಮಧೇಯ ಇನ್ಸ್ಟಾ ಖಾತೆಯಿಂದ “ನಿಮ್ಮ ಕ್ರಿಕೆಟ್ ಪ್ರದರ್ಶನ ಚನ್ನಾಗಿದೆ, ರಾಜಸ್ಥಾನ ರಾಯಲ್ಸ್‌ಗೆ ಸೆಲೆಕ್ಟ್ ಮಾಡಿಸ್ತಿವಿ ಎಂದು ವಂಚಕರು ನಂಬಿಸಿದ್ದಾರೆ. 2024 ನವೆಂಬರ್‌ನಿಂದ 2025 ಏಪ್ರಿಲ್ 2025ರವರೆಗೆ ಹಂತ ಹಂತವಾಗಿ 24 ಲಕ್ಷ ಹಣ ಪಡೆದಿದ್ದಾರೆ.
ಇದನ್ನೂ ಓದಿ :ಕನ್ನಡದ ಸಾಹಿತಿ ಬಾನು ಮುಷ್ತಾಕ್ ಅವರ ಕೃತಿಗೆ ಪ್ರತಿಷ್ಠಿತ ‘ಬೂಕರ್’ ಪ್ರಶಸ್ತಿ
ಮಗನ ಭವಿಷ್ಯ ಉಜ್ವಲ ಆಗುತ್ತೆಂದು ಸಾಲಸೂಲ ಮಾಡಿ ರಾಕೇಶ್ ಪೋಷಕರು ವಂಚಕರಿಗೆ ಹಣ ನೀಡಿದ್ದಾರೆ. ಬ್ಯಾಂಕ್ ಅಕೌಂಟ್, ಗೂಗಲ್ ಪೇ, ಫೋನ್ ಪೇ ಮೂಲಕ ವಂಚಕರು ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ನಂತರ ಮೋಸ ಹೋಗಿರುವುದನ್ನು ಅರಿತ ರಾಕೇಶ್ ಬೆಳಗಾವಿ ಜಿಲ್ಲಾ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇತ್ತ ಹಣ ಕಳೆದುಕೊಂಡು ರಾಕೇಶ್ ಕುಟುಂಬ ಕಂಗಾಲಾಗಿದೆ. ಇನ್ನು ಈ ಕುರಿತು ಪೊಲೀಸರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದು. ‘ಅನಾಮಧೇಯ ವ್ಯಕ್ತಿಗಳು ಈ ರೀತಿಯ ಆಫರ್ ನೀಡಿದರೆ ಪೊಲೀಸರಿಗೆ ಮಾಹಿತಿ ನೀಡಿ ಎಂದು ಮನವಿ ಮಾಡಿದ್ದಾರೆ.