ವಿಜಯಪುರ: ಲಾರಿ, ಬಸ್ ಮತ್ತು ಬೊಲೆರೋ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು 6 ಜನ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೆ ಗಾಯಗಳಾಗಿವೆ.
ವಿಜಯಪುರ ಜಿಲ್ಲೆಯ, ಮನಗೂಳಿ ಪಟ್ಟಣದ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು. ಸೊಲ್ಲಾಪುರ ಕಡೆಗೆ ಹೊರಟಿದ್ದ ಬೊಲೆರೋ ವಾಹನ, ಬಳ್ಳಾರಿ ಕಡೆ ಬರುತ್ತಿದ್ದ ವಿಆರ್ಎಲ್ ಬಸ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಮತ್ತು ವಿಆರ್ಎಸ್ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ :ರಾಹುಲ್ ಆಧುನಿಕ ಯುಗದ ಮೀರ್ ಜಾಫರ್: ಸೇನೆ ಬಗ್ಗೆ ಪ್ರಶ್ನೆ ಎತ್ತಿದ ರಾಹುಲ್ ವಿರುದ್ದ ಬಿಜೆಪಿ ವಾಗ್ದಾಳಿ
ಸಾವನ್ನಪ್ಪಿದವರನ್ನು ಟಿ.ಭಾಸ್ಕರನ್ ಮಲಕಂಠನ್ (ಕೆನರಾ ಬ್ಯಾಂಕ್ ಮ್ಯಾನೇಜರ್), ಪವಿತ್ರಾ (ಭಾಸ್ಕರನ್ ಹೆಂಡತಿ), ಅಭಿರಾಮ (ಮಗ), ಜೋಸ್ನಾ (ಮಗಳು), ವಿಕಾಸ ಸಿದ್ದಪ್ಪ ಮಕನಿ (ಬಸ್ ಚಾಲಕ) ಗುರುತಿಸಿದ್ದು. ಪವಾಡ ಸದೃಷ್ಯ ರೀತಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 10 ವರ್ಷದ ಮಗು ಪ್ರವೀಣ್ ತೇಜ್ ಪ್ರಾಣಾಪಾಯದಿಂದ ಪಾರಾಗಿದೆ. ಘಟನಾ ಸ್ಥಳಕ್ಕೆ ಮನಗೂಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.