ಸ್ಯಾಂಡಲ್ವುಡ್ ನಟಿ ಸಂಜನ ಗಲ್ರಾನಿ ಎರಡನೇ ಮಗುವಿಗೆ ಜನ್ಮ ನೀಡಿದ್ದು. ತಮ್ಮ ಮನೆಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದು ಸಂಜನಾ ಮತ್ತು ಅಜೀಜ್ ಪಾಶಾ ಅವರ ಮನೆಯಲ್ಲಿ ಸದ್ಯ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ಸಂಜನಾ ಅವರು ಲಾಕ್‌ಡೌನ್ ಸಮಯದಲ್ಲಿ ಡಾ. ಅಜೀಜ್ ಪಾಷಾ ಅವರನ್ನ ಪ್ರೀತಿಸಿ ವಿವಾಹವಾಗಿದ್ದರು. 2022ರ ಮೇ ತಿಂಗಳಲ್ಲಿ ಸಂಜನಾ ಗಲ್ರಾನಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು. ಅಜೀಜ್ ಪಾಷಾ ಮತ್ತು ಸಂಜನಾ ದಂಪತಿಗೆ ‘ಅಲಾರಿಕ್’ ಹೆಸರಿನ ಮಗನಿದ್ದಾನೆ. ಇದೀಗ ಸಂಜನಾ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನೂ ಓದಿ:ಕೋವಿಡ್ ಮಹಾಮಾರಿ: ಟ್ರಾವಿಸ್ ಹೆಡ್ ಬಳಿಕ ಬಾಲಿವುಡ್ ನಟಿ ಶಿಲ್ಪ ಶಿರೋಧ್ಕರ್‌ಗೆ ಕೋವಿಡ್ ಪಾಸಿಟಿವ್
ವಿಶೇಷವೆಂಬಂತೆ ಸಂಜನಾ ಅವರ ಮೊದಲ ಮಗು ಕೂಡ ಮೇ.19ರಂದು ಜನಿಸಿತ್ತು. ಇದೀಗ ತಮ್ಮ ಎರಡನೇ ಮಗು ಕೂಡ ಅದೇ ದಿನಾಂಕದಂದು ಜನಿಸಿದೆ. ಹೀಗಾಗಿ ಮೇ 19 ಸಂಜನಾ ಬದುಕಿನಲ್ಲಿ ಮರೆಯಲಾಗದ ದಿನ ಅಂದರೆ ಅದು ತಪ್ಪಾಗಲಿಕ್ಕಿಲ್ಲ. ಒಂದೇ ದಿನ ಮಗ ಮತ್ತು ಮಗಳ ಬರ್ತ್‌ಡೇಯನ್ನು ಆಚರಿಸಲಿದ್ದಾರೆ ಸಂಜನಾ.
ಇದನ್ನೂ ಓದಿ :ಸಂಪೂರ್ಣ ಗಾಜಾವನ್ನು ವಶಕ್ಕೆ ಪಡೆಯುತ್ತೇವೆ: ನೆತನ್ಯಾಹು ಮಹತ್ವದ ಘೋಷಣೆ
2006ರಲ್ಲಿ ‘ಗಂಡ ಹೆಂಡತಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಸಂಜನಾ ಎಂಟ್ರಿ ಕೊಟ್ಟರು. ಜಾಕ್ ಪಾಟ್, ಆಟೋಗ್ರಾಫ್ ಪ್ಲೀಸ್, ಸತ್ಯಮೇವ ಜಯತೇ, ಮಸ್ತ್ ಮಜಾ ಮಾಡಿ, ಹುಡುಗ ಹುಡುಗಿ, ಮೈಲಾರಿ ಮತ್ತು ನರಸಿಂಹ ಸೇರಿ ಅನೇಕ ಸಿನಿಮಾಗಳಲ್ಲಿ ಸಂಜನಾ ಗಲ್ರಾನಿ ನಟಿಸಿದ್ದಾರೆ.