ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನ ನ್ಯಾಯಾಲಯ ಮುಂದೂಡಿದ್ದು. ಜುಲೈ 10ಕ್ಕೆ ಮುಂದಿನ ವಿಚಾರಣೆಯ ದಿನಾಂಕವನ್ನ ನಿಗಧಿಪಡಿಸಿ 57ನೇ ಸಿಸಿಹೆಚ್ ನ್ಯಾಯಲಯ ಆದೇಶ ಹೊರಡಿಸಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಅಪರಾಧಿಯಾಗಿರುವ ನಟ ದರ್ಶನ್ ಸೇರಿದಂತೆ 17 ಜನ ಆರೋಪಿಗಳ ವಿಚಾರಣೆಯನ್ನ ನ್ಯಾಯಾಲಯ ಮುಂದೂಡಿದೆ. ಈಗಾಗಲೇ ಕಾಮಾಕ್ಷಿ ಪಾಳ್ಯ ಪೊಲೀಸರು ಪ್ರಕರಣ ಸಂಬಂಧ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದು. ಎಫ್ಎಸ್ಎಲ್ ವರದಿ ಸೇರಿದಂತೆ ಕೆಲವು ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದನ್ನೂ ಓದಿ :ವಯಸ್ಸಾಯ್ತು, ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ: ರಾಜಕೀಯಕ್ಕೆ ಕೆ,ಎನ್ ರಾಜಣ್ಣ ನಿವೃತ್ತಿ
ಇಂದು ದರ್ಶನ್ ಪ್ರಕರಣದ ವಿಚಾರಣೆ ನಡೆಸಿದ 57ನೇ ಸಿಸಿಎಚ್ ನ್ಯಾಯಾಲಯ ಎಲ್ಲಾ ಆರೋಪಿಗಳಿಗು ಸಮನ್ಸ್ ಜಾರಿ ಮಾಡಿದೆ. ಎಲ್ಲಾ 17 ಜನರ ಆರೋಪಿಗಳು ವಿಚಾರಣೆಗೆ ಹಾಜರಾಗಿರುವುದನ್ನು ಖಚಿತಪಡಿಸಿಕೊಂಡ ನ್ಯಾಯಾಲಯ ಆರೋಪಿಗಳ ಮೇಲೆ ದಾಖಲಾಗಿರುವ ಚಾರ್ಜ್ಸ್ಗಳ ವಿವರಣೆ ನೀಡಿದ್ದಾರೆ. ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 302 – ಕೊಲೆ, 364 – ಕಿಡ್ನಾಪ್ , ಹಾಗೂ 201 – ಸಾಕ್ಷಿನಾಶದ ಪ್ರಕರಣಗಳು ದಾಖಲಾಗಿದೆ. ಈ ಆರೋಪಗಳನ್ನು ಒಪ್ಪಿಕೊಳ್ಳುತ್ತೀರಾ ಎಂದು ಆರೋಪಿಗಳಿಗೆ ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ :ಮುನಿರತ್ನನ ಮತ್ತೊಂದು ಕರ್ಮಕಾಂಡ: ಅತ್ಯಾಚಾರವೆಸಗಿ, ಮೂತ್ರ ವಿಸರ್ಜನೆ ಮಾಡಿ ಕಿರುಕುಳ ನೀಡಿದ ರೌಡಿ ಶಾಸಕ..!
ನಂತರ ನ್ಯಾಯಲಯ ಮುಂದಿನ ವಿಚಾರಣೆಯನ್ನ ಜುಲೈ 10ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದು. ಮುಂದಿನ ವಿಚಾರಣೆಯಿಂದ ಟ್ರಯಲ್ ಆರಂಭಿಸೋದಾಗಿ ಸೂಚನೆ ನೀಡಿದೆ. ಪ್ರಕರಣದ ಆರೋಪಿ ದರ್ಶನ್ ವಿಚಾರಣೆ ಮುಗಿಸಿ ನ್ಯಾಯಾಲಯದಿಂದ ಹೊರಟ್ಟಿದ್ದಾರೆ.
ಪವಿತ್ರಾಗೆ ಮೊಬೈಲ್ ನಂಬರ್ ಕೊಟ್ಟ ದರ್ಶನ್..!
ರೇಣುಕಸ್ವಾಮಿ ಕೊಲೆ ಪ್ರಕರಣದ ನಂತರ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಆದರೆ ಇಂದು ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಪವಿತ್ರಾ ಗೌಡ ದರ್ಶನ್ ಜೊತೆ ಮಾತನಾಡಲು ಯತ್ನಿಸಿದ್ದಾರೆ, ಕೋರ್ಟ್ ಹಾಲ್ನಲ್ಲಿ ಪವಿತ್ರಾ, ದರ್ಶನ್ ಕೈ ಹಿಡಿದು ಎಳೆದಿದ್ದು. ಮೊಬೈಲ್ ನಂಬರ್ ಕೊಡುವಂತೆ ದರ್ಶನ್ ಬಳಿ ದುಂಬಾಲು ಬಿದ್ದದ್ದರು ಎಂದು ತಿಳಿದು ಬಂದಿದೆ. ಪವಿತ್ರಾ ಹಠಕ್ಕೆ ಬಗ್ಗಿದ ದರ್ಶನ್ ಕೊನೆಗೂ ತಮ್ಮ ಮೊಬೈನ್ ನಂಬರ್ನ್ನು ಪವಿತ್ರಾಗೆ ಕೊಟ್ಟಿದ್ದಾರೆ.