Tuesday, May 20, 2025

ಮುನಿರತ್ನನ ಮತ್ತೊಂದು ಕರ್ಮಕಾಂಡ: ಅತ್ಯಾಚಾರವೆಸಗಿ, ಮೂತ್ರ ವಿಸರ್ಜನೆ ಮಾಡಿ ಕಿರುಕುಳ ನೀಡಿದ ರೌಡಿ ಶಾಸಕ..!

ಬೆಂಗಳೂರು : ಏಡ್ಸಟ್ರ್ಯಾಪ್​ ಶಾಸಕ ಮುನಿರತ್ನನ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು. ಬಿಜೆಪಿ ಕಾರ್ಯಕರ್ತೆಯೊಬ್ಬರ ಮೇಲೆ ಆಪ್ತರಿಂದ ಅತ್ಯಚಾರ ಮಾಡಿಸಿ, ಮಹಿಳೆಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ. ಈ ಕುರಿತು ಬಿಜೆಪಿ ಕಾರ್ಯಕರ್ತೆ ವಿಡಿಯೋ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ್ದು. ಇದೀಗ ಮಹಿಳೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ :ಕಾಂಗ್ರೆಸ್​ ಸಮಾವೇಶಕ್ಕೆ 4 ಲಕ್ಷ ಜನರ ನಿರೀಕ್ಷೆ: ಬಳ್ಳಾರಿಯಲ್ಲಿ ರಾರಾಜಿಸುತ್ತಿವೆ ಬ್ಯಾನರ್​, ಕಟೌಟ್​ಗಳು

ರೌಡಿ ಶಾಸಕ, ಏಡ್ಸ್​ಟ್ರ್ಯಾಪ್​ ಶಾಸಕ ಎಂದೇ ಖ್ಯಾತಿಯಾಗಿರುವ ಆರ್​,ಆರ್​ ನಗರದ ಎಂಎಲ್​ಎ ಮುನಿರತ್ನ ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ರಾಜಕೀಯ ವಿರೋಧಿಗಳನ್ನು ಮುಗಿಸಲು ಏಡ್ಸ್​ಟ್ರ್ಯಾಪ್​ ರಚಿಸುತ್ತಿದ್ದ ಮುನಿರತ್ನ ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಏಡ್ಸ್​ ಇಂಜೆಕ್ಸನ್​ ನೀಡಿದ್ದ. ಇದರಿಂದ HIVಗೆ ಖಾಯಿಲೆಗೆ ತುತ್ತಾಗಿದ್ದ ಮಹಿಳೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದರಿಂದಾಗಿ ಮುನಿರತ್ನನ ವಿರುದ್ದ ಮಹಿಳೆ ಪೊಲೀಸ್​ ಠಾಣೆಗೆ ದೂರು ನೀಡಿದ್ದಳು.

ದೂರು ನೀಡಿದ್ದಕ್ಕೆ ಕೆರಳಿದ್ದ ಎಂಎಲ್​ಎ..!

ಶಾಸಕ ಮುನಿರತ್ನನ ನೀಚ ಕೃತ್ಯದಿಂದ ಬೇಸತ್ತಿದ್ದ ಮಹಿಳೆ ಹಲವಾರು ಬಾರಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಅಷ್ಟೇ ಅಲ್ಲದೇ ಆಗಿನ ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್ ಅವರಿಗೂ ದೂರು ನೀಡಿದ್ದರು. ಆದರೆ ಮಹಿಳೆಗೆ ಇದರಿಂದ ನ್ಯಾಯ ದೊರೆತಿರಲಿಲ್ಲ. ಆದರೆ ಮಹಿಳೆ ದೂರು ಕೊಟ್ಟಿರುವುದನ್ನು ತಿಳಿದು ಕೆರಳಿದ್ದ ಮುನಿರತ್ನ ಮಹಿಳೆಗೆ ಟಾರ್ಚರ್​ ಕೊಡಲು ಆರಂಭಿಸಿದ್ದ.

ಇದನ್ನೂ ಓದಿ :ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸಂಜನಾ ಗಲ್ರಾನಿ

ಮಹಿಳೆ ಮೇಲೆ ಲೈಂಗಿಕ ಕಿರುಕುಳ..!

ಮಹಿಳೆ ತನ್ನ ಮೇಲೆ ಆದ ದೌರ್ಜನ್ಯದ ಕುರಿತು ವಿಡಿಯೋ ಮಾಡಿದ್ದು. ಈ ವಿಡಿಯೋದಲ್ಲಿ ಶಾಸಕನ ನೀಚ ಕೃತ್ಯವನ್ನ ಮಹಿಳೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಹಿಳೆಯ ಮನೆಗೆ ಬಂದು ಆಕೆಯನ್ನು ಕರೆದೊಯ್ದಿರುವ ಶಾಸಕನ ಚೇಲಾಗಳು. ಮುನಿರತ್ನನ ಆದೇಶದ ಮೇರೆಗೆ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯ ಮುಖದ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾರೆ. ಇದನ್ನೂ ಓದಿ :ಕೋವಿಡ್​ ಮಹಾಮಾರಿ: ಟ್ರಾವಿಸ್​ ಹೆಡ್​ ಬಳಿಕ ಬಾಲಿವುಡ್​ ನಟಿ ಶಿಲ್ಪ ಶಿರೋಧ್ಕರ್‌ಗೆ ಕೋವಿಡ್ ಪಾಸಿಟಿವ್

ಇದರಿಂದ ಬೇಸತ್ತಿರುವ ಮಹಿಳಾ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನಿಸಿದ್ದು. ಇದೀಗ ಮಹಿಳೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES