Tuesday, May 20, 2025

ಪಹಲ್ಗಾಂ ದಾಳಿಗೆ ಮೋದಿನೇ ಕಾರಣ: ಮಲ್ಲಿಕಾರ್ಜುನ್​ ಖರ್ಗೆ

ಬಳ್ಳಾರಿ : ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್​ ಸಾಧನ ಸಮಾವೇಶದಲ್ಲಿ ಮತ್ತೊಮ್ಮೆ ಪಹಲ್ಗಾಮ್​ ದಾಳಿಗೆ ಮೋದಿ ಕಾರಣ ಎಂದು ಹೇಳಿದ್ದು. ಪಹಲ್ಗಾಮ್​ ದಾಳಿಕೆ ಕೇಂದ್ರ ಸರ್ಕಾರದ ವೈಪಲ್ಯವೇ ಕಾರಣ ಎಂದು ಹೇಳಿದರು.

ಕರ್ನಾಟಕ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದ ಹಿನ್ನಲೆ ಬಳ್ಳಾರಿಯಲ್ಲಿ ಕಾಂಗ್ರೆಸ್​ ಸಾಧನ ಸಮಾವೇಶ ಹಮ್ಮಿಕೊಳ್ಳಲಾಗಿದ್ದು. ಈ ಸಮಾವೇಶದಲ್ಲಿ ಮಾತನಾಡಿದ ಮಲ್ಲಿಕಾರ್ಜುನ್​ ಖರ್ಗೆ ಮೋದಿ ಮೇಲೆ ವಾಗ್ದಾಳಿ ನಡೆಸಿದ್ದಾರೆ ‘ಪಹಲ್ಗಾಂ ದಾಳಿ ಬಗ್ಗೆ ಮಾತನಾಡಿದ ಖರ್ಗೆ, ಪಹಲ್ಗಾಮ್​ನಲ್ಲಿ 26 ಜನರ ಹತ್ಯೆಯಾಯಿತು. ಇದಕ್ಕೆ ಕಾರಣ ಮೋದಿ ಸರ್ಕಾರ ಅಲ್ಲಿ ಭದ್ರತೆ ನೀಡದಿರುವುದೆ ಕಾರಣ. ಮೋದಿ ಅವರು ಏಪ್ರೀಲ್​ 17ರಂದು ಕಾಶ್ಮೀರಕ್ಕೆ ಹೋಗುವವರಿದ್ದರು. ಅದಕ್ಕೆ ಅವರು ತಮ್ಮ ಪ್ರವಾಸ ರದ್ದುಗೊಳಿಸಿದರು. ಈಗಿದ್ದಾಗ ಮೋದಿ ಯಾಕೆ ಅಲ್ಲಿದ್ದ ಪ್ರವಾಸಿಗರ ಸುರಕ್ಷತೆ ಬಗ್ಗೆ ಮಾಹಿತಿ ಕೊಡಲಿಲ್ಲ. ಒಂದು ವೇಳೆ ಮೋದಿ ಮಾಹಿತಿ ನೀಡಿದ್ದರೆ 26 ಜನರು ಬದುಕುಳಿಯುತ್ತಿದ್ದರು ಎಂದು ಹೇಳಿದರು.

ಇದನ್ನೂ ಓದಿ :15 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಇಬ್ಬರು ಅಪ್ರಾಪ್ತರ ಬಂಧನ

ಪಾಕಿಸ್ತಾನದ ಬಗ್ಗೆ ಮಾತನಾಡಿದ ಖರ್ಗೆ “ಪಾಕಿಸ್ತಾನಕ್ಕೆ ನಮ್ಮ ದಾಳಿ ಮಾಡೋ ಶಕ್ತಿ ಇಲ್ಲ, ಆದರೆ ಅವರು ಚೀನಾ ಸಹಾಯ ಪಡೆದು ನಮ್ಮ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ದೇಶದ ಜೊತೆ ನಾವು ನಿಂತುಕೊಂಡೆವೂ. ಕಾಂಗ್ರೆಸ್​ ಪಕ್ಷ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದೆ. ರಾಜೀವ್​ ಗಾಂಧಿ, ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದಾರೆ. ಈಗಿದ್ದಾಗ ಬಿಜೆಪಿಯವರು ಕಾಂಗ್ರೆಸ್​ ಮೇಲೆ ಗೂಬೆ ಕೂರಿಸುತ್ತಿದ್ದಾರೆ.

ಕಾಂಗ್ರೆಸ್​ನವರ ಮೇಲೆ ಬಿಜೆಪಿಯವರು ಸ್ವತಂತ್ರ್ಯ ಸಂಸ್ಥೆಗಳಾದ ಈಡಿ, ಸಿಬಿಐ ಸಂಸ್ಥೆಗಳನ್ನು ಬಳಸಿಕೊಂಡು ದಾಳಿ ನಡೆಸುತ್ತಿದೆ. ಬಿಜೆಪಿಯವರು ದೇಶದಲ್ಲಿ ದುರಾಡಳಿತ ನಡೆಸುತ್ತಿದೆ. ಇದ್ಯಾವುದಕ್ಕೂ ಕಾಂಗ್ರೆಸ್​ ಹೆದರುವುದಿಲ್ಲ. ನಮ್ಮ ಪಕ್ಷದ ನಾಯಕರು ಸರ್ವಪಕ್ಷ ನಿಯೋಗದಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ. ದೇಶ ಅಂದರೆ ಸರ್ವರು ಇರಬೇಕು, ಒಂದು ಪಕ್ಷ ಜನರ ಭಾವನೆಗಳ ಜೊತೆ ಆಟವಾಡಬಾರದು ಎಂದು ಖರ್ಗೆ ಹೇಳಿದರು.

ಇದನ್ನೂ ಓದಿ:ಜನ ಸಾಯ್ತಿದ್ದಾರೆ, ಕಾಂಗ್ರೆಸ್​ ಅವರು ಪಂಚೆ ಎತ್ಕೊಂಡು ಸಮಾವೇಶಕ್ಕೆ ಹೋಗಿದ್ದಾರೆ: ಆರ್.ಅಶೋಕ್​

ಮುಂದುವರಿದು ಮಾತನಾಡಿದ ಖರ್ಗೆ ” ನಾವೆಲ್ಲಾ ಇಲ್ಲಿ ದೇಶದ ಬಗ್ಗೆ ಮಾತನಾಡುತ್ತಿದ್ದರೆ, ಮೋದಿ ಮಾತ್ರ ಚುನಾವಣ ರ್ಯಾಲಿಯಲ್ಲಿ ಬ್ಯುಸಿಯಾಗಿದ್ದರು. ಎರಡು ಸರ್ವಪಕ್ಷ ಸಭೆ ಕರೆದು ಅವರು ಸಭೆಗೆ ಬರಲಿಲ್ಲ. ದೇಶದ ಮೇಲೆ ಅಷ್ಟೋಂದು ಪ್ರೀತಿ ಇದ್ದರೆ ಯಾಕೆ ನೀವು ಈ ಸಭೆಗೆ ಬರಲಿಲ್ಲ. ಒಂದು ವೇಳೆ ನಾವು ಆ ಸಭೆಗೆ ಹೋಗಿಲ್ಲ ಅಂದಿದ್ದರೆ ನಮ್ಮನ್ನು ದೇಶದ್ರೋಹಿಗಳು ಅಂತ ಕರೆಯುತ್ತಿದ್ದರು. ನೀವು ಹೀಗೆ ಮಾಡ್ತಾ ಹೋದರೆ ಮುಂದಿನ ದಿನಗಳಲ್ಲಿ ದೇಶದ್ಯಂತ ದಂಗೆ ಏಳಬೇಕಾಗುತ್ತದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES