ಮೈಸೂರು : ಸಹಕಾರ ಸಚಿವ ಕೆ.ಎನ್ ರಾಜಣ್ಣ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದು. ಈಗಾಗಲೇ 75 ವರ್ಷವಾಗಿದೆ, ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಯುವಕರಿಗೆ ಅವಕಾಶ ಸಿಗಬೇಕು ಎಂದು ಹೇಳಿದರು.
ಮೈಸೂರಿನ ಹುಣಸೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕೆ.ಎನ್ ರಾಜಣ್ಣ “75 ವರ್ಷ ಆಯ್ತು, ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ. ಯುವಕರಿಗೆ ಅವಕಾಶಗಳು ಸಿಗಬೇಕು ಆ ದೃಷ್ಟಿಯಿಂದ ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದರು. ಇದನ್ನೂ ಓದಿ :ಮುನಿರತ್ನನ ಮತ್ತೊಂದು ಕರ್ಮಕಾಂಡ: ಅತ್ಯಾಚಾರವೆಸಗಿ, ಮೂತ್ರ ವಿಸರ್ಜನೆ ಮಾಡಿ ಕಿರುಕುಳ ನೀಡಿದ ರೌಡಿ ಶಾಸಕ..!
ಇನ್ನು ತಮ್ಮ ಸಹಕಾರ ಇಲಾಖೆಯ ಬಗ್ಗೆ ಮಾತನಾಡಿದ ಕೆ,ಎನ್ ರಾಜಣ್ಣ ” ಪಟ್ಟಭದ್ರರ ಹಿಡಿತದಿಂದ ಸಹಕಾರ ಕ್ಷೇತ್ರವನ್ನು ಮುಕ್ತಗೊಳಿಸಲು ಕ್ರಮ ತೆಗೆದುಕೊಂಡಿರುವೇ. ನಮ್ಮ ರಾಜ್ಯಕ್ಕೆ ಸಂಬಂದಿಸಿದಂತೆ ಸಹಕಾರ ಕ್ಷೇತ್ರದ ಕಾಯ್ದೆಗೆ ತಿದ್ದುಪಡಿಗಾಗಿ ಕೇಂದ್ರಕ್ಕೆ ಕಳುಹಿಸುವ ಅವಶ್ಯವಿಲ್ಲ ಈ ಬಗ್ಗೆ ಚರ್ಚಿಸಿ ಕ್ರಮ ವಹಿಸುತ್ತೇವೆ. ಜನರ ನಿರೀಕ್ಷೆಗೆ ತಕ್ಕಂತೆ ಎರಡೂ ಸದನಗಳ ಒಪ್ಪಿಗೆ ಪಡೆದು ತಿದ್ದುಪಡಿ ತಂದು ರಾಜ್ಯಪಾಲರ ಅಂಕಿತಕ್ಕೆ ಕಡತ ಕಳುಹಿಸಿದ್ದರೂ ಕೇಂದ್ರಕ್ಕೆ ಕಳುಹಿಸುವಂತೆ ಸೂಚಿಸಿದ್ದಾರೆ.
ಆದರೆ ಈ ತಿದ್ದುಪಡಿ ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದರಿಂದ ಕೇಂದ್ರಕ್ಕೆ ಕಳುಹಿಸುವ ಅವಶ್ಯವಿಲ್ಲ.
ಈ ಬಗ್ಗೆ ಚರ್ಚಿಸಿ ಕ್ರಮವಹಿಸಲಾಗುವುದು. ಎಂಡಿಸಿಸಿ ಸೇರಿದಂತೆ ಕೆಲ ಡೈರಿ ಚುನಾವಣೆಗಳನ್ನು ಮುಂದೂಡಲಾಗಿತ್ತು. ಅಲ್ಲದೆ ಮತಪಟ್ಟಿ ಸೇರಿದಂತೆ ಕೆಲ ತಾಂತ್ರಿಕ ಕಾರಣದಿಂದಾಗಿ ಚುನಾವಣೆ ಮುಂದೂಡಲಾಗಿದೆ. ಅದನ್ನ ಹೊರತು ಬೇರೆ ಕಾರಣವಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ವಹಿವಾಟು, ಮಹಾಸಭೆ ಸೇರಿದಂತೆ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೇ ವಿನಃ, ಚುನಾವಣೆಯಲ್ಲಿ ಮತ ಹಾಕಲು ಸಹಕಾರಸಂಸ್ಥೆ ಸದಸ್ಯತ್ವ ಪಡೆಯುವುದಲ್ಲ. ಇದನ್ನೂ ಓದಿ:ಕಾಂಗ್ರೆಸ್ ಸಮಾವೇಶಕ್ಕೆ 4 ಲಕ್ಷ ಜನರ ನಿರೀಕ್ಷೆ: ಬಳ್ಳಾರಿಯಲ್ಲಿ ರಾರಾಜಿಸುತ್ತಿವೆ ಬ್ಯಾನರ್, ಕಟೌಟ್ಗಳು
ಇದರಿಂದ ಆ ಸಂಘಗಳಿಗೆ ಹೊರೆಯಾಗಲಿದೆ. ಎಲ್ಲ ಸದಸ್ಯರು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕೆಂಬುದು ಸರಕಾರದ ಉದ್ದೇಶ. ಮುಂದೆ ಎಲ್ಲ ಚುನಾವಣೆಗಳನ್ನು ನಡೆಸಲಾಗುವು ಎಂದು ಕೆ.ಎನ್ ರಾಜಣ್ಣ ಹೇಳಿದರು.