Saturday, August 23, 2025
Google search engine
HomeUncategorizedಅನೈತಿಕ ಸಂಬಂಧ: ಗಂಡನನ್ನು ಕೊಲೆ ಮಾಡಿ ಬಾವಿಗೆ ಎಸೆದಿದ್ದ ಪತ್ನಿ, ಪ್ರಿಯಕರ ಅಂದರ್​

ಅನೈತಿಕ ಸಂಬಂಧ: ಗಂಡನನ್ನು ಕೊಲೆ ಮಾಡಿ ಬಾವಿಗೆ ಎಸೆದಿದ್ದ ಪತ್ನಿ, ಪ್ರಿಯಕರ ಅಂದರ್​

ಗದಗ : ಬಾವಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಜಿಲ್ಲೆಯ ರೋಣ ತಾಲೂಕಿನ ಮುಗಳಿ ಗ್ರಾಮ ಹೊರವಲಯದ ಜಮೀನಿನಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು 30 ವರ್ಷದ ಶಂಕ್ರಪ್ಪ ಅಲಿಯಾಸ್​ ಮುತ್ತುಕೊಳ್ಳಿ ಎಂದು ಗುರುತಿಸಿದ್ದು. ಹೆಂಡತಿ ಮತ್ತು ಆಕೆಯ ಪ್ರಿಯಕರನೆ ಕೊಲೆ ಮಾಡಿ ಬಾವಿಗೆ ಎಸೆದಿರುವ ಆರೋಪ ಕೇಳಿ ಬಂದಿದೆ.

ಡ್ರೈವರ್​ ಆಗಿ ಕೆಲಸ ಮಾಡುತ್ತಿದ್ದ ಶಂಕ್ರಪ್ಪ ಕುರಹಟ್ಟಿ ಗ್ರಾಮದ ವಿದ್ಯಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಮುದ್ದಾದ ಎರಡು ಮಕ್ಕಳು ಇದ್ದವು. ಆದರೆ ವಿದ್ಯಾಳಿಗೆ ಡ್ರೈವರ್​ ಶಿವಕುಮಾರ್​ ಎಂಬಾತನ ಜೊತೆ ಪ್ರೀತಿಯಾಗಿ ಆತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಷಯ ಇತ್ತೀಚೆಗೆ ವಿದ್ಯಾಳ ಪತಿಗೆ ತಿಳಿದಿತ್ತು. ಇದನ್ನೂ ಓದಿ :ಜಿಟಿ-ಜಿಟಿ ಮಳೆಯಲ್ಲಿ ನವಜಾತ ಶಿಶುವನ್ನು ರಸ್ತೆಯಲ್ಲಿ ಬಿಟ್ಟು ಹೋದ ಪಾಪಿ ತಾಯಿ

ಇದರಿಂದಾಗಿ ಹೆದರಿದ್ದ ಶಿವಕುಮಾರ್​ ಮತ್ತು ವಿದ್ಯಾ, ಶಂಕ್ರಪ್ಪನನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಕೊಲೆ ಮಾಡಿದ ನಂತರ ಶವದ ಕೈ-ಕಾಲುಗಳನ್ನು ಕಟ್ಟಿ. ನಂತರ ಶವವನ್ನು ನಾಲ್ಕೈದು ಹಾಸಿಗೆಯಲ್ಲಿ ಸುತ್ತಿ. ರೋಣಾದಿಂದ ಸುಮಾರು 17 ಕಿಮೀ ದೂರದಲ್ಲಿರುವ ಮುಗಳಿ ಗ್ರಾಮದ ಸಮೀಪವಿರುವ ಜಮೀನಿನ ಬಾವಿಯಲ್ಲಿ ಶವವನ್ನು ಎಸೆದಿದ್ದಾರೆ. ಇದನ್ನೂ ಓದಿ:ಸಿಂಗಾಪುರ-ಹಾಂಕಾಂಗ್​ನಲ್ಲಿ ಕೋವಿಡ್ ಹೆಚ್ಚಳ: ಭಾರತದಲ್ಲೂ 257 ಪ್ರಕರಣಗಳು ಪತ್ತೆ

ಈ ಕಳೆದ ನಾಲ್ಕೈದು ದಿನಗಳ ಹಿಂದೆ ಘಟನೆ ನಡೆದಿದ್ದು, ಇಂದು ಬಾವಿಯಲ್ಲಿ ಶವ ಪತ್ತೆಯಾಗಿದೆ. ಘಟನೆ ಬಗ್ಗೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಿದ್ದು. ಆರೋಪಿ ವಿದ್ಯಾ ಮತ್ತು ಶಿವಕುಮಾರ್​ನನ್ನು ವಶಕ್ಕೆ ಪಡೆದು, ತನಿಖೆ ಆರಂಭಿಸಿದ್ದಾರೆ, ಘಟನೆ ಸಂಬಂಧ ರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments