ಉತ್ತರ ಪ್ರದೇಶ: ರೈಲ್ವೆ ಹಳಿ ಮೇಲೆ ಮರದ ಕಟ್ಟಿಗೆಗಳನ್ನು ಇಟ್ಟು ರೈಲು ಹಳಿ ತಪ್ಪಿಸಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದ್ದು. ರಾಜಧಾನಿ ಎಕ್ಸ್‌ಪ್ರೆಸ್ ಮತ್ತು ಕಠ್ಗೋಡಮ್ ಎಕ್ಸ್ಪ್ರೆಸ್ಗಳನ್ನು ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್ನಿಸಿದ್ದಾರೆ.
ಆದರೆ ರೈಲು ಹಳಿ ಮೇಲೆ ಮರದ ದಿಮ್ಮಿ ಇರುವುದನ್ನು ಗಮಿನಿಸಿದ ಲೋಕೋ ಪೈಲೆಟ್ ಸಮಯ ಪ್ರಜ್ಞೆಯಿಂದ ರೈಲನ್ನು ಕೂಡಲೇ ನಿಲ್ಲಿಸಿದ್ದು ಹೀಗಾಗಿ ಸಂಭವಿಸಬೇಕಿದ್ದ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ. ಹರ್ದೋಯ್-ಲಕ್ನೋ ರೈಲು ಮಾರ್ಗದಲ್ಲಿ ದಲೇಲ್‌ನಗರ ಮತ್ತು ಉಮರ್ತಾಲಿ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ :ಅಭಿಷೇಕ್ ಶರ್ಮಾ ಜೊತೆ ಅನುಚಿತ ವರ್ತನೆ; IPL ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು
ಸೋಮವಾರ ಸಂಜೆ 5.45 ರ ಸುಮಾರಿಗೆ 20504 ನವದೆಹಲಿ-ದಿಬ್ರುಗಢ ರಾಜಧಾನಿ ಎಕ್ಸ್‌ಪ್ರೆಸ್ ಲಕ್ನೋ ಕಡೆಗೆ ಹೋಗುತ್ತಿದ್ದಾಗ ಮೊದಲ ಪ್ರಯತ್ನ ಮಾಡಲಾಯಿತು. ದುಷ್ಕರ್ಮಿಗಳು ಮರದ ತುಂಡನ್ನು ಕಬ್ಬಿಣದ ಅರ್ಥಿಂಗ್ ತಂತಿಗೆ ಬಿಗಿಯಾಗಿ ಜೋಡಿಸಿ, ಹಳಿತಪ್ಪಿಸಲು ಅದನ್ನು ಕೆಳ ಹಳಿಯಲ್ಲಿ ಇಟ್ಟಿದ್ದರು. ಆದರೆ, ರಾಜಧಾನಿ ಎಕ್ಸ್‌ಪ್ರೆಸ್‌ನ ಚಾಲಕ ಹಳಿಯಲ್ಲಿ ಅಡಚಣೆಯನ್ನು ಗಮನಿಸಿ ತುರ್ತು ಬ್ರೇಕ್‌ಗಳನ್ನು ಹಾಕಿದ್ದರಿಂದ ರೈಲು ನಿಂತಿತು. ನಂತರ ಮರದ ಬ್ಲಾಕ್ ಮತ್ತು ಅರ್ಥಿಂಗ್ ವೈರ್ ತೆಗೆದು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ರೈಲು ಸುಮಾರು ಹತ್ತು ನಿಮಿಷಗಳ ಕಾಲ ವಿಳಂಬವಾಗಿ ಪ್ರಯಾಣ ಪುನರಾರಂಭವಾಯಿತು.
ಇದನ್ನೂ ಓದಿ:ದರ್ಶನ್ ಕೊಲೆ ಪ್ರಕರಣದ ವಿಚಾರಣೆ ಮುಂದೂಡಿಕೆ: ದರ್ಶನ್ ಬಳಿ ಮೊಬೈಲ್ ನಂಬರ್ ಪಡೆದ ಪವಿತ್ರಾ
ಅದೇ ಮಾರ್ಗದಲ್ಲಿ ಮತ್ತೊಂದು ವಿಫಲ ಯತ್ನ..!
ರಾಜಧಾನಿ ಎಕ್ಸ್‌ಪ್ರೆಸ್ ಹಾದುಹೋದ ಕೂಡಲೇ, ಅದೇ ಮಾರ್ಗದಲ್ಲಿ ಹೋಗುತ್ತಿದ್ದ 15044 ಕಠ್ಗೋಡಮ್-ಲಕ್ನೋ ಎಕ್ಸ್‌ಪ್ರೆಸ್ ಅನ್ನು ಹಳಿತಪ್ಪಿಸಲು ಅದೇ ವಿಧಾನವನ್ನು ಬಳಸಲಾಯಿತು. ಈ ರೈಲಿನ ಚಾಲಕ ಕೂಡ ಅಡಚಣೆಯನ್ನು ಗಮನಿಸಿ ಸಮಯಕ್ಕೆ ಸರಿಯಾಗಿ ರೈಲನ್ನು ನಿಲ್ಲಿಸಿದ್ದಾರೆ. ಇನ್ನು ಘಟನೆ ಬಗ್ಗೆ ಲೋಕೋ ಪೈಲೆಟ್ಗಳು ಸ್ಟೇಷನ್ ಮಾಸ್ಟರ್ಗಳಿಗೆ ಮಾಹಿತಿ ನೀಡಿದ್ದು. ರೈಲ್ವೇ ಪೊಲೀಸರು ಮತ್ತಯ ರೈಲ್ವೇ ರಕ್ಷಣಾ ಪಡೆ. ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.