ಬೆಂಗಳೂರು : ಬೆಳಿಗ್ಗೆಯಿಂದ ಕೆಲ ಸಮಯ ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಗಿದ್ದು. ಇನ್ನು ನಾಲ್ಕು ಗಂಟೆಗಳ ಕಾಲ ನಗರದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಬಿಬಿಎಂಪಿ ಕಮಿಷನರ್ ಕೂಡ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.
ಮಧ್ಯಹ್ನಾದ ವೇಳೆಗೆ ರಾಜಧಾನಿಗೆ ವರುಣರಾಯ ಮತ್ತೆ ಆಗಮಿಸಿದ್ದು. ಮೆಜೆಸ್ಟಿಕ್, ಕೆ ಆರ್ ಮಾರುಕಟ್ಟೆ, ಜಯನಗರ, ವಿಜಯನಗರ, ಚಂದ್ರಲೇಔಟ್, ರಾಜಾಜಿನಗರ, ಆರ್ ಟಿ ನಗರ, ಹೆಬ್ಬಾಳ, ಕೋರಮಂಗಲ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ನಾಗರಬಾವಿ, ಯಶವಂತಪುರ, ಪೀಣ್ಯ, ಬೊಮ್ಮನ ಹಳ್ಳಿ, ನಾಯಂಡಹಳ್ಳಿ, ಕುಮಾರಸ್ವಾಮಿ ಲೇಔಟ್, ಆರ್ ಆರ್ ನಗರ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ.
ಇದನ್ನೂ ಓದಿ :ಮಳೆ ಅವಾಂತರ: ಇಂದು ಸಂಜೆ ಸಿಎಂ, ಡಿಸಿಎಂ ಸಿಟಿ ರೌಂಡ್ಸ್
ಕಳೆದ ರಾತ್ರಿ ಬಿದ್ದ ಮಳೆಯಿಂದ ರಾಜಧಾನಿ ಇನ್ನು ಸುಧಾರಿಸಿಕೊಂಡಿಲ್ಲ. ಇದರ ನಡುವೆ ಮತ್ತೆ ಮಳೆ ಆರಂಭವಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂದು ಸಂಜೆ ಸಿಎಂ ಮತ್ತು ಡಿಸಿಎಂ ಸಿಟಿ ರೌಂಡ್ಸ್ ಕೈಗೊಂಡಿದ್ದು. ಮಳೆ ಮುಂದುವರಿದರೆ ಸಿಟಿ ರೌಂಡ್ಸ್ ಕ್ಯಾನ್ಸಲ್ ಆಗುವ ಸಾಧ್ಯತೆ ಇದೆ.