ಮಂಗಳೂರು : ಧರ್ಮಸ್ಥಳ ಮೂಲದ ಯುವತಿಯೊಬ್ಬಳು ಪಂಜಾಬ್ನಲ್ಲಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು. ಯುವತಿ ಆಕಾಂಕ್ಷ ತನ್ನ ಪ್ರಾಧ್ಯಪಕನೊಂದಿಗಿನ ಪ್ರೇಮ ವೈಪಲ್ಯಕ್ಕೆ ಸಾವನ್ನಪ್ಪಿದ್ದಾಳೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಇದನ್ನೂ ಓದಿ :“ಮುದ್ದು ಮುದ್ದು ರಾಕ್ಷಸಿ” ಎಂದು ಪತ್ನಿ ಜೊತೆ ಸಖತ್ ಸ್ಟೆಪ್ಸ್ ಹಾಕಿದ ನಟ ದರ್ಶನ್
ಧರ್ಮಸ್ಥಳದ ಮೂಲದ ಆಕಾಂಕ್ಷ ಎಸ್.ನಾಯರ್ ಪಂಜಾಬ್ನ ಎಲ್ಪಿಯು ಯೂನಿವರ್ಸಿಟಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ವಿಭಾಗದಲ್ಲಿ ಪದವಿ ಪಡೆದು. ಕಳೆದ 6 ತಿಂಗಳಿಂದ ದೆಹಲಿಯ ಸ್ಪೈಸ್ ಜೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆದರೆ ಇತ್ತೀಚೆಗೆ ಕೆಲಸಕ್ಕೆ ವಿದೇಶಕ್ಕೆ ತೆರಳಲು ತಯಾರಿ ನಡೆಸಿದ್ದ ಆಕಾಂಕ್ಷ ಕೆಲವು ಶೈಕ್ಷಣಿಕ ದಾಖಲೆಗಳನ್ನು ತರಲು ಯೂನಿವರ್ಸಿಟಿಗೆ ತೆರಳಿದ್ದಳು. ಆದರೆ ಈ ವೇಳೆ ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಳು.
ಪ್ರೊಫೆಸರ್ ಜೊತೆ ಪ್ರೇಮ ವೈಪಲ್ಯ..!
ಯುವತಿ ಆಕಾಂಕ್ಷ ತನ್ನ ಕಾಲೇಜಿನ ಪ್ರಾಧ್ಯಪಕ ಬಿಜಿಲ್ ಮ್ಯಾಥ್ಯೂ ಎಂಬಾತನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದು ಬಂದಿದ್ದು. ಎರಡು ಮಕ್ಕಳ ತಂದೆಯಾದ ಮ್ಯಾಥ್ಯೂ ಆಕಾಂಕ್ಷಳ ಪ್ರೇಮವನ್ನು ನಿರಾಕರಿಸಿದ್ದನು. ಕಾಲೇಜಿನಿಂದ ಸರ್ಟಿಫಿಕೇಟ್ ತರಲು ಹೋಗುವ ಮುನ್ನ ಮ್ಯಾಥ್ಯೂ ಮನೆಗೆ ಹೋಗಿದ್ದ ಆಕಾಂಕ್ಷ ತನ್ನನ್ನು ಮದುವೆ ಆಗುವಂತೆ ಮ್ಯಾಥ್ಯೂ ಜೊತೆ ಜಗಳವಾಡಿದ್ದಳು.
ಇದನ್ನೂ ಓದಿ:ಅಮೆರಿಕಾದ ಆಸ್ಪತ್ರೆ ಮುಂಭಾಗ ಬಾಂಬ್ ಸ್ಪೋಟ: ಓರ್ವ ಸಾ*ವು, ನಾಲ್ವರಿಗೆ ಗಾಯ
ಆದರೆ ಮ್ಯಾಥ್ಯೂ ಮದುವೆಗೆ ನಿರಾಕರಿಸಿದಾಗ ಯುವತಿ ಕಾಲೇಜಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಇನ್ನು ಪ್ರಾಧ್ಯಪಕ ಮ್ಯಾಥ್ಯೂ ವಿರುದ್ದ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಆಕಾಂಕ್ಷ ಸಾವಿನ ಕುರಿತು ಜಲಂಧರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.