ರಾಮನಗರ : ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ರಾಮನಗರಕ್ಕೆ ತಲೆನೋವಾಗಿ ಪರಿಣಮಿಸಿದ್ದು. ವೃಷಭಾವತಿ ನದಿ ರಾಮನಗರಕ್ಕೆ ರಾಶಿ ರಾಶಿ ಕಸವನ್ನು ಹೊತ್ತು ತಂದಿದೆ. ಇದರಿಂದಾಗಿ ಲೋಡ್ಗಟ್ಟಲೆ ಕಸ ಸಂಗ್ರಹವಾಗಿದೆ.
ಬೆಂಗಳೂರಿಗೆ ಒಂದು ಕಾಲದಲ್ಲಿ ಜೀವ ನದಿಯಾಗಿದ್ದ ವೃಷಭಾವತಿ ನದಿ ಈಗ ಕೊಳಚೆ ಮೋರಿಯಾಗಿ ಪರಿಣಮಿಸಿದೆ. ಆದರೂ ನದಿ ತನ್ನ ಹರಿವಿನ ಪಥವನ್ನು ಮರೆತಿಲ್ಲ. ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ವೃಷಭವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು. ಬೆಂಗಳೂರಿನ ಕಸವನ್ನೇಲ್ಲಾ ರಾಮನಗರಕ್ಕೆ ಹೊತ್ತುತಂದಿದೆ. ಇದನ್ನೂ ಓದಿ:ಮತ್ತೆ ಮಳೆ ಆರಂಭ: ಮುಂದಿನ 4 ಗಂಟೆಗಳಲ್ಲಿ ಭಾರಿ ಮಳೆ ಎಚ್ಚರಿಕೆ
ರಾಮನಗರದ, ಬಿಡದಿ ಹೋಬಳಿಯ ಚಿಕ್ಕಕುಂಟನಹಳ್ಳಿ ಗ್ರಾಮದಲ್ಲಿ ವೃಷಭವತಿ ನದಿ ಹೊತ್ತು ತಂದಿರುವ ರಾಶಿ ರಾಶಿ ಕಸ ಸಂಗ್ರಹವಾಗಿದ್ದು. ಗ್ರಾಮದ ಸೇತುವೆ ಬಳಿ ಲೋಡ್ಗಟ್ಟಲೇ ಕಸ ಸಂಗ್ರಹವಾಗಿದೆ. ಕಸ ಸಂಗ್ರಹವಾದ ಹಿನ್ನಲೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಕೆಲ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇದರಿಂದ ಬೇಸತ್ತಿರುವ ಗ್ರಾಮಸ್ಥರು ನದಿಯನ್ನ ಸ್ವಚ್ಚಗೊಳಿಸುವಂತೆ ಮನವಿ ಮಾಡಿದ್ದು. ಕಸ ತೆರವು ಮಾಡುವಂತೆ ಆಗ್ರಹಿಸಿದ್ದಾರೆ.