ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಾಂಪತ್ಯಕ್ಕೆ ಇಂದಿಗೆ 22 ವರ್ಷಗಳಾಗಿವೆ. ಇದೇ ಖುಷಿಯಲ್ಲಿ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಸಾಮಾಜಿಕ ಜಾಲತಾಣದಲ್ಲಿ ಪೋಟೊವೊಂದನ್ನು ಹಂಚಿಕೊಂಡಿದ್ದಾರೆ.
ನಟ ದರ್ಶನ್ 2003ರಲ್ಲಿ ಮೇ 19ರಂದು ಧರ್ಮಸ್ಥಳದಲ್ಲಿ ವಿಜಯಲಕ್ಷ್ಮಿಯೊಂದಿಗೆ ದಾಂಪತ್ಯ ಜೀವಕ್ಕೆ ಕಾಲಿಟ್ಟಿದ್ದರು. ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದ ಈ ಜೋಡಿ ಇದೀಗ 22ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇದನ್ನೂ ಓದಿ :ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಉತ್ತರ ಪ್ರದೇಶದ ಉದ್ಯಮಿ ಬಂಧನ
ಸದ್ಯ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಟೊವೊಂದನ್ನು ಹಂಚಿಕೊಂಡಿದ್ದು. ಪೋಟೊ ಕೆಳಗೆ ‘ಶಾಶ್ವತವಾಗಿ’ ಎಂದು ಬರೆದುಕೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ಈ ಜೋಡಿಗೆ ಫ್ಯಾನ್ಸ್ಗಳು ಶುಭಾಷಯ ಕೋರುತ್ತಿದ್ದಾರೆ. ಇದನ್ನೂ ಓದಿ :ಮುಂಜಾಗ್ರತೆ ತಗೋಬೇಕಿತ್ತು, ಡಿಸಿಎಂ ಡಿಕೆಶಿ ನೋಡಿಕೊಳ್ತಾರೆ: ಪರಮೇಶ್ವರ್
ಇನ್ನು ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಪಡೆದು ಹೊರಬಂದಿದ್ದು. ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಟ ದರ್ಶನ್ ‘ಡೆವಿಲ್’ ಸಿನಿಮಾದ ಚಿತ್ರೀಕರಣವು ಭರದಿಂದ ನಡೆಯುತ್ತಿದೆ. ದರ್ಶನ್ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ‘ತಾರಕ್’ ಡೈರೆಕ್ಟರ್ ಮಿಲನಾ ಪ್ರಕಾಶ್ `ಡೆವಿಲ್’ಗೆ ನಿರ್ದೇಶನ ಮಾಡುತ್ತಿದ್ದಾರೆ.