ರಾಮನಗರ : ಮಾಜಿ ಸಚಿವ ಸಿಎಂ ಇಬ್ರಾಹಿಂ ಆಪರೇಷನ್ ಸಿಂಧೂರ್ದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು. ಕದನ ವಿರಾಮ ಘೋಷಿಸಿದ ಪ್ರಧಾನಿ ಮೋದಿ ಮೇಲೆ ವಾಗ್ದಾಳಿ ನಡೆಸಿದ್ದಾರೆ. ” ಆ ಬಡ್ಡೆತದು ಹೇಳ್ತು ಅಂತ, ಈ ಬಡ್ಡೇತದು ಕೇಳಿ ಯುದ್ದ ವಿರಾಮ ನಿಲ್ಸಿದ್ದಾರೆ ಎಂದು ಮೋದಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಅಪರೇಷನ್ ಸಿಂಧೂರ ಬಗ್ಗೆ ಕಾಂಗ್ರೆಸ್ ನಾಯಕರು ಅನುಮಾನ ವ್ಯಕ್ತಪಡಿಸುತ್ತಿರುವ ವಿಚಾರವಾಗಿ ರಾಮನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ಇಬ್ರಾಹಿಂ ‘ಅನುಮಾನ ಕೇವಲ ಕಾಂಗ್ರೆಸ್ಗೆ ಅಷ್ಟೆ ಇಲ್ಲ. ಇಡೀ ದೇಶಕ್ಕೆ ಅನುಮಾನ ಇದೆ. 26 ಜನರನ್ನ ಕೊಂದು ವಾಪಸ್ ಹೋಗಿದ್ದಾರೆ ಅಂದರೆ ಭದ್ರತೆ ಎಲ್ಲಿತ್ತು. ಪುಲ್ವಾಮ ದಾಳಿ ಆದಾಗ ಅಷ್ಟು ಮದ್ದು ಬಂತಲ್ಲ ಅದನ್ನ ಯಾಕೆ ಹಿಡಿಯಲಿಲ್ಲ. ಸೈನಿಕರು ಇರೋದ್ರಿಂದ ಈ ದೇಶ ಉಳಿದಿದೆ’. ಇದನ್ನೂ ಓದಿ :ಅಮೆರಿಕಾದ ಆಸ್ಪತ್ರೆ ಮುಂಭಾಗ ಬಾಂಬ್ ಸ್ಪೋಟ: ಓರ್ವ ಸಾ*ವು, ನಾಲ್ವರಿಗೆ ಗಾಯ
ಆದರೆ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೇಂದ್ರ ಸರ್ಕಾರಕ್ಕೆ ಎಲ್ಲರೂ ಪೂರ್ಣವಾಗಿ ಬೆಂಬಲ ಕೊಟ್ಟಿದ್ರು. ಆದರೆ ಟ್ರಂಪ್ ಹೇಳ್ದಾ ಅಂತ ಯುದ್ದ ನಿಲ್ಸಿಬಿಟ್ರು. ಟ್ರಂಪ್ ಏನ್ ನಮ್ಮ ಚಿಕ್ಕಪ್ಪ, ದೊಡ್ಡಪ್ಪನಾ..? ನಮ್ಮ ವಿಷಯದ ಬಗ್ಗೆ ಮಾತನಾಡಲು ಆ ಬಡ್ಡೆತ್ತದ್ದು ಯಾರು, ಆ ಬಡ್ಡೆತದ್ದು ಹೇಳ್ತು ಅಂತ, ಈ ಬಡ್ಡೆತದ್ದು ಯುದ್ದ ನಿಲ್ಸದೆ, ಇದಕ್ಕೆ ಏನ್ ಕಾರಣ ಎಂದು ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಮುಂದುವರಿದು ಮಾಥತನಾಡಿದ ಇಬ್ರಾಹಿಂ “ಇಂದಿರಾಗಾಂಧಿ ಬಾಂಗ್ಲಾದೇಶದ 93 ಸಾವಿರ ಜನ ಸೈನಿಕರನ್ನ ಹಿಡಿದಿದ್ರು. ವಾಜಪೇಯಿ ಯಾವುದೇ ಮೂರನೇ ಶಕ್ತಿ ಪ್ರವೇಶಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆದರೆ ಈಗ ಅಚ್ಚೇ ದಿನ ಆಯೇಗಿ ಅಂತ ಟ್ರಂಪ್ ಹತ್ರ ಹೇಳಿಸಿಕೊಳ್ಳೊ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ದ ನಿಲ್ಲಿಸಿದ ಮೇಲೆ ಟೆರರಿಸ್ಟ್ ಸಿಕ್ಕಿದ್ರಾ.? ಟೆರರಿಸ್ಟ್ ಎಲ್ಲಿ ಅಂತ ಪಾಕಿಸ್ತಾನದ ಬಳಿ ಕೇಳಿದ್ರಾ..? ಎಂದು ಪ್ರಶ್ನಿಸಿದರು.
ಇದನ್ನು ಓದಿ :ತರಬೇತಿ ನೀಡುವ ನೆಪದಲ್ಲಿ ಮಹಿಳಾ ಗೃಹರಕ್ಷಕ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ
ಮೋದಿ ಕುರಿತು ಮಾತನಾಡಿದ ಇಬ್ರಾಹಿಂ “ಘಟನೆ ಆದಾಗ ಮೋದಿ ಸೀದಾ ಬಿಹಾರ ಚುನಾವಣೆಗೆ ಹೋದರು. ಆದ್ರೆ ರಾಹುಲ್ ಗಾಂಧಿ ಸತ್ತವರ ಮನೆಗೆ ಹೋದ್ರು. ಇವತ್ತಿನವರೆಗೂ ಸತ್ತವರ ಮನೆಗೆ ಹೋಗಿ ಮೋದಿ ಒಂದು ಮಾತು ಹೇಳಲಿಲ್ಲ. ದೇಶವನ್ನು ಯಾರ ಕೈನಲ್ಲಿ ಕೊಟ್ಟಿದ್ದೇವೆ ಎಂದು ಚಿಂತನೆ ಮಾಡಬೇಕಿದೆ. 24 ಗಂಟೆಯಲ್ಲಿ ಪಾಕಿಸ್ತಾನವನ್ನು ಒದ್ದು ಒಳಗೆ ಹಾಕಬಹುದು. ನಿಂಬೆ ಹಣ್ಣು ರಸ ಹಿಂಡಿದಂಗೆ ಹಿಂಡಬಹುದು. ಆದರೆ ಈಗ ಏನನ್ನು ಮಾಡಿಲ್ಲ. ಇದನ್ನೂ ಓದಿ :ಹಳೆ ವೈಶಮ್ಯ: ಗಾಂಜಾ ಮಾರದಂತೆ ಬುದ್ದಿ ಹೇಳಿದ್ದಕ್ಕೆ ಕೊ*ಲೆ
ಮೋದಿ ನವಾಜ್ ಶರೀಫ್ ಜೊತೆ ಹೋಗಿ ಬಿರಿಯಾನಿ ತಿಂದು ಬಂದಿದ್ರು. ಪಾಕಿಸ್ತಾನಕ್ಕೆ ಬನ್ನಿ ಅಂತ ಇವರನ್ನ ಯಾರು ಕರೆದಿದ್ರು. ಇವರ ವರ್ತನೆಯನ್ನ ನೋಡಿದ್ರೆ ಸರ್ವಜ್ಞ ಹೇಳಿದ್ದು ನೆನಪಾಗುತ್ತೆ. ಟ್ರಂಪ್ ಹೇಳಿದ ಎರಡು ಗಂಟೆಲೀ ಯುದ್ದ ನಿಲ್ಸಿದ್ದಾರೆ ನಮ್ಮದು ಶಕ್ರಿಯುತ ರಾಷ್ಟ್ರ ಎಂದು ಮೋದಿ ವಿರುದ್ದ ಇಬ್ರಾಹಿಂ ವಿರುದ್ದ ವಾಗ್ದಾಳಿ ನಡೆಸಿದರು.