Saturday, August 23, 2025
Google search engine
HomeUncategorizedತಾಂತ್ರಿಕ ದೋಷ; ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ

ತಾಂತ್ರಿಕ ದೋಷ; ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ

ಅಮರಾವತಿ: ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲವಾಗಿದ್ದು. ಇಂದು ಬೆಳಿಗ್ಗೆ 5:59ಕ್ಕೆ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಉಡಾವಣೆಯಾದ EOS-09 ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.

ಇಸ್ರೋದ 101ನೇ ರಾಕೆಟ್ ಉಡಾವಣೆ ಇದಾಗಿದ್ದು, ಇಂದು ಬೆಳಗ್ಗೆ 5:59ರ ಸುಮಾರಿಗೆ ಶ್ರೀಹರಿಕೋಟಾದ  ಸತೀಶ್ ಧವನ್ ಉಡಾವಣಾ ಕೇಂದ್ರದಿಂದ EOS-09 ರೆಡಾರ್ ಇಮೇಜಿಂಗ್ ಉಪಗ್ರಹ ನಭಕ್ಕೆ ಚಿಮ್ಮಿತ್ತು. 1,696 ಕಿಲೋಗ್ರಾಂ ತೂಕದ EOS-09 ರೆಡಾರ್ ಇಮೇಜಿಂಗ್ ಉಪಗ್ರಹವು ಭೂಮಿಯ ಮೇಲ್ಮೈಯಿಂದ 500 ಕಿಲೋ ಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಳ್ಳಬೇಕಿತ್ತು. ಆದರೆ 3ನೇ ಹಂತದಲ್ಲಿ  ಸಂಪರ್ಕ ಕಳೆದುಕೊಂಡ ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಇದನ್ನೂ ಓದಿ :ಅನಾಥ ಮಗುವನ್ನು ಸಾಕಿ ಬೆಳೆಸಿದ್ದಕ್ಕೆ ಅದೇ ಮಗುವಿನ ಕೈಯಲ್ಲಿ ಕೊಲೆಯಾದ ತಾಯಿ

ಇನ್ನೂ ಈ ಕುರಿತು ಇಸ್ರೋ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು.ಈ ಕುರಿತು ಇಸ್ರೋ ಅಧ್ಯಕ್ಷ ವಿ.ನಾರಾಯಣ ಮಾಹಿತಿ ನೀಡಿದ್ದಾರೆ, ರಾಕೆಟ್ ಉಡಾವಣೆಯ ನಾಲ್ಕು ಹಂತಗಳ ಪೈಕಿ, ಮೂರನೇ ಹಂತದಲ್ಲಿ ಒತ್ತಡ ಕುಸಿತಗೊಂಡಿದ್ದು, ಕಕ್ಷೆ ಸೇರುವಲ್ಲಿ ವಿಫಲವಾಗಿದೆ ಎಂದಿದ್ದಾರೆ.

ಇದನ್ನೂ ಓದಿ :ವರದಕ್ಷಿಣೆ ಕಿರುಕುಳ ಆರೋಪ: ಪತ್ನಿಯ ಕೊ*ಲೆ ಮಾಡಿ, ದೇಹವನ್ನು ತುಂಡು ಮಾಡಿ ಕಾಲುವೆಗೆ ಎಸೆದ ಪಾಪಿ ಪತಿ

ಬೆಂಗಳೂರಿನಲ್ಲಿರುವ  ಇಸ್ರೋದ ಯುಆರ್ ರಾವ್ ಉಪಗ್ರಹ ಕೇಂದ್ರವು ಗೂಢಚಾರ ಉಪಗ್ರವನ್ನು ನಿರ್ಮಿಸಿದೆ. ಸಿ-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರೇಡಾರ್ ಅನ್ನು ಉಪಗ್ರಹ ಹೊಂದಿದ್ದು, ಇದು ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ಮತ್ತು ಕಡಿಮೆ ಬೆಳಕಿನಲ್ಲೂ ಭೂಮಿಯ ಮೇಲ್ಮೈಯ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments