ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಭಾರತ ನಡೆಸಿದ ಕಾರ್ಯಚರಣೆಯನ್ನ ತಿರಸ್ಕರಿಸಿದ್ದ ಪಾಕಿಸ್ತಾನದ ಮರ್ಯಾದೆಯನ್ನ ಅದೇ ದೇಶದ ಪತ್ರಪರ್ತನೊಬ್ಬ ಹರಾಜು ಹಾಕಿದ್ದು. ‘ಭಾರತ ಪಾಕಿಸ್ತಾನದ ಮೇಲೆ ಎಲ್ಲಿ ಬೇಕಾದರು ದಾಳಿ ಮಾಡುವ ಸಾಮರ್ಥ್ಯವಿದೆ. ಈ ದಾಳಿಯಿಂದ ಅಮೇರಿಕಾ ನಮ್ಮನ್ನು ರಕ್ಷಿಸಿದೆ ಎಂದು ಹೇಳಿಕೊಂಡಿದ್ದಾರೆ.
ಭಾರತ ಮತ್ತು ಪಾಕ್ ನಡುವಿನ ಸಂಘರ್ಷದಲ್ಲಿ ಭಾರತದ ದಾಳಿಯನ್ನ ತಿರಸ್ಕರಿಸಿದ್ದ ಪಾಕ್, ನಮಗೆ ಏನು ಹಾನಿಯಾಗಿಲ್ಲ ಎಂದು ಬಿಲ್ಡಪ್ ಕೊಟ್ಟುಕೊಂಡು ಬಂದಿತ್ತು. ಆದರೆ ಇದನ್ನು ಪಾಕಿಸ್ತಾನದ ಪರ್ತಕರ್ತ ಮೊಯೀದ್ ಪಿರ್ಜಾದ್ ಎಂಬಾತ ಅಲ್ಲೆಗಳೆದಿದ್ದು. ‘ಪಾಕಿಸ್ತಾನದ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ. ಭಾರತ ಪಾಕಿಸ್ತಾನದಲ್ಲಿನ ನೆಲೆಗಳನ್ನು ನಿಖರದವಾಗಿ ಹೊಡೆದಿದೆ. ಇವುಗಳನ್ನು ತಡೆಯಲು ಪಾಕ್ಗೆ ಸಾಧ್ಯವಾಗಿಲ್ಲ. ಬ್ರಹ್ಮೋಸ್ ಕ್ಷಿಪಣಿ ಬಳಸಿದ ಭಾರತ ನಿಖರವಾಗಿ ದಾಲಿ ನಡೆಸಿದೆ ಎಂದು ಹೇಳಿದರು. ಇದನ್ನೂ ಓದಿ :ಕನ್ನಡಿಗರಿಗೆ ಅಪಮಾನ ಮಾಡಿದ್ದ ಹೋಟೆಲ್ ಸೀಜ್: ಮ್ಯಾನೇಜರ್ ಬಂಧನ
The reality is slowly dawning upon the Pakistanis. Pakistani journalist Moeed Pirzada: “Pakistan couldn’t hit anything inside India. India hit 24 Pakistani sites with pinpoint accuracy. Two more days and PAF would’ve surrendered. Pakistan begged for a ceasefire, not India. pic.twitter.com/OCSobJcZKJ
— Imtiaz Mahmood (@ImtiazMadmood) May 17, 2025
ಇನ್ನು ಪಾಕಿಸ್ತಾನದ ಮೇಲೆ ದಾಳಿ ನಡೆಸಿರುವ ಭಾರತ ಹಾನಿಯ ಕುರಿತು ಉಪಗ್ರಹ ಚಿತ್ರಗಳನ್ನ ತೋರಿಸಿದೆ. ಆದರೆ ಪಾಕಿಸ್ತಾನ ಇಂತಹ ಯಾವುದೇ ಚಿತ್ರಗಳನ್ನ ಪ್ರಸ್ತುತಪಡಿಸಿಲ್ಲ. ಭಾರತವು F-16 ವಿಮಾನಗಳಿಗೆ ಹೆಸರುವಾಸಿಯಾದ ಭೋಲಾರಿ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಅಷ್ಟೇ ಅಲ್ಲದೇ ನೂರ್ ಖಾನ್ ವಾಯುನೆಲೆ ಮತ್ತು ರಹೀಮ್ ಯಾರ್ ಖಾನ್ ವಾಯುನೆಲೆಯ ಮೇಲೆ ಭಾರತ ದಾಳಿ ನಡೆಸಿದೆ.
ಆದರೆ ಪಾಕಿಸ್ತಾನದ ಭಾರತದ ಉದಮ್ಪುರದ ವಾಯುನೆಲೆ ಮೇಲೆ ದಾಳಿ ಮಾಡಿದ್ದೇವೆ ಎಂದು ಹೇಳಿಕೊಂಡಿದೆ. ಆದರೆ ಇದು ಸತ್ಯಕ್ಕೆ ದೂರವಾದ ಮಾತು. ಇದನ್ನು ದೃಡೀಕರಿಸುವಂತೆ ಯಾವುದೇ ಸಾಕ್ಷವನ್ನ ಪಾಕಿಸ್ತಾನದ ಪ್ರಸ್ತುತಪಡಿಸಿಲ್ಲ. ಪಾಕಿಸ್ತಾನದ ಯಾವುದೇ ಕ್ಷಿಪಣಿಗಳು ಭಾರತದ ಮೇಲೆ ಪರಿಣಾಮ ಬೀರಿಲ್ಲ. ಇಂತಹ ವಿಷಯಗಳನ್ನ ಸಾರ್ವಜನಿಕವಾಗಿ ಹೇಳಿದರೆ ಸೈಬರ್ ಅಪರಾಧ ಎಂದು ಆರೋಪ ಹೊರಿಸುತ್ತಾರೆ ಎಂದು ತಮ್ಮ ದೇಶದ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ :ತಾಂತ್ರಿಕ ದೋಷ; ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ
ಪಾಕ್ ರಕ್ಷಿಸಿದ ಅಮೆರಿಕಾ..!
ಕದನ ವಿರಾಮದ ಬಗ್ಗೆ ಮಾತನಾಡಿದ ಫಿರ್ಜಾದ್ “ಪಾಕಿಸ್ತಾನಿ ಸರ್ಕಾರ ತನ್ನ ದೇಶದಲ್ಲಿ ಅಣುಬಾಂಬ್ ಬೆದರಿಕೆ ಹಾಕಿದ್ದಕ್ಕೆ ಭಾರತ ಕದನ ವಿರಾಮ ಮಾಡಿಕೊಂಡಿದೆ ಎಂದು ಹೇಳುತ್ತಿದೆ. ಆದರೆ ಪಾಕಿಸ್ತಾನವನ್ನು ರಕ್ಷಿಸಲು ಅಮೆರಿಕಾ ಕದನ ವಿರಾಮ ಮಾಡಿಕೊಳ್ಳಲು ಸಹಾಯ ಮಾಡಿದೆ. ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಮನಸ್ಥಿತಿಯಲ್ಲಿತ್ತು. ಒಂದು ವೇಳೆ ಈ ದಾಳಿ ನಡೆದಿದ್ದರೆ ಪಾಕಿಸ್ತಾನದ ಯಾವುದೇ ರನ್ವೇಗಳು ಉಳಿಯುತ್ತಿರಲಿಲ್ಲ. ಇದನ್ನೂ ಓದಿ :ಹಾಲು ಮಾರಿ ಕ್ರಿಕೆಟ್ ಕಿಟ್ ಖರೀದಿ; ಈಗ ತನ್ನದೇ ಸ್ವಂತ ಬ್ರ್ಯಾಂಡ್ ‘ಹಿಟ್ಮ್ಯಾನ್’
ಭಾರತದ ದಾಳಿ ಪಾಕಿಸ್ತಾನಕ್ಕೆ ದೊಡ್ಡ ಬಿಕ್ಕಟ್ಟಾಗಿತ್ತು ಮತ್ತು ಅಮೆರಿಕ ಅದನ್ನು ಪಾರು ಮಾಡಿದೆ. ಪಾಕಿಸ್ತಾನ ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ. ಪಾಕಿಸ್ತಾನ ಧೀರ್ಘಕಾಲದವರೆಗೆ ಪರಮಾಣು ಕಾರ್ಡ್ ಬಳಸಲು ಸಾಧ್ಯವಾಗಲ್ಲ. ಮುಂದೆ ಅಮೇರಿಕಾ ಕೂಡ ಸಹಾಯಕ್ಕೆ ಬರಲ್ಲ ಎಂದು ಫಿರ್ಜಾದ್ ತಮ್ಮ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.