ರಾಯಚೂರು: ಗಾಂಜಾ ಮಾರುತಿದ್ದ ಯುವಕನಿಗೆ ಬುದ್ಧಿ ಹೇಳಿದ ವಿಚಾರವನ್ನೇ ಮನಸ್ಸಿನಲ್ಲಿಟ್ಟುಕೊಂಡು, ಬುದ್ದಿಹೇಳಿದ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ನಗರದ ಜಾಕಿರ್ ಹುಸೇನ್ ಸರ್ಕಲ್ ನಲ್ಲಿ ಇಂದು ಬೆಳಗಿನ ಜಾವ 4:30ರ ಸುಮಾರಿಗೆ ಇಡ್ಲಿ ತಿನ್ನಲು ಬಂದಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಕೊಲೆಯಾದ ಯುವಕನನ್ನು ಸಾದಿಕ್ (27) ಎಂದು ಗುರುತಿಸಲಾಗಿದೆ. ಇದನ್ನೂ ಒದಿ:ತರಬೇತಿ ನೀಡುವ ನೆಪದಲ್ಲಿ ಮಹಿಳಾ ಗೃಹರಕ್ಷಕ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ
ಅನೇಕ ದಿನಗಳ ಹಿಂದೆ ಕರೀಂ ಮತ್ತು ಸಾಧಿಕ್ ನಡುವೆ ಜಗಳವಾಗಿದೆ. ಕೊಲೆ ಆರೋಪಿ ಕರೀಂ ಗಾಂಜಾ ಮಾರುತಿದ್ದ ಎಂಬ ವಿಚಾರಕ್ಕೆ ಸಾಧಿಕ್ ಗಾಂಜಾ ಮಾರಾಟ ಮಾಡದಂತೆ ಬುದ್ದಿ ಹೇಳಿದ್ದ. ಗಾಂಜಾ ಮಾರಾಟದಿಂದ ಬಡಾವಣೆಯ ಯುವಕರು ವಿದ್ಯಾರ್ಥಿಗಳು ಹಾಳಾಗುತ್ತಿದ್ದಾರೆ ಹಾಗಾಗಿ ಗಾಂಜಾ ಮಾರಾಟ ಮಾಡುವುದು ಬೇಡ ಎಂದಿದ್ದ. ಇದೇ ವಿಚಾರಕ್ಕೆ ಎರಡು ಮೂರು ಬಾರಿ ಜಗಳಗಳು ಕೂಡ ಆಗಿತ್ತು ಇದೇ ಒಂದು ವಿಚಾರ ಕೊಲೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಇಂದು (ಮೇ.18) ಬೆಳಗ್ಗೆ ನಗರದ ಜಾಕಿರ್ ಹುಸೇನ್ ವೃತ್ತದಲ್ಲಿ ಇಡ್ಲಿ ತಿನ್ನಲು ಬಂದಿದ್ದ ಸಾಧಿಕ್ನನ್ನು ಕರೀಮ್ ಕಾಲು ಕೆರೆದು ಜಗಳ ತಗೆದುಕೊಂಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಕರೀಂ ತನ್ನ ಬಳಿ ಇದ್ದ ಚಾಕುವಿನಿಂದ ಸಾದಿಕ್ಗೆ ಇರಿದಿದ್ದಾನೆ. ಚಾಕು ಇರಿತದಿಂದ ತೀವ್ರ ಅಸ್ವಸ್ಥರಾಗಿದ್ದ ಸಾಧಿಕ್ನನ್ನು ಕೂಡಲೇ ರಿಮ್ಸ್ ಆಸ್ಪತ್ರೆಗೆ ದಾಖಲಿಸಿತಾದರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ :ಬಹುಕಾಲದ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಮಂತ್ ಬ್ರೋ ಗೌಡ
ಘಟನೆ ಸಂಬಂಧ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಕೊಲೆ ಆರೋಪಿ ಕರೀಂನನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.