ಬೆಂಗಳೂರು: ಕನ್ನಡಿಗರನ್ನು ಅಶ್ಲೀಶ ಭಾಷೆ ಬಳಿಸಿ ಅವಮಾನಿಸಿದ ಆರೋಪದ ಮೇಲೆ ನಗರದ ಕೋರಮಂಗಲದ ಜಿ,ಎಸ್ ಸೂಟ್ ಹೋಟೆಲ್ನ್ನು ಸೀಜ್ ಮಾಡಲಾಗಿದ್ದು. ಹೋಟೆಲ್ ಮ್ಯಾನೇಜರ್ನನ್ನು ಬಂಧಿಸಲಾಗಿದೆ.
ಕೋರಮಂಗಲದ ಜಿಎಸ್ ಸೂಟ್ ಹೋಟೆಲ್ನ ಹೊರಭಾಗದ ಎಲ್‌ಇಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅಪಮಾನಿಸಿ ಅಶ್ಲೀಲ ಪದಗಳನ್ನ ಬಳಿಸಿ ಅವಮಾನಿಸಲಾಗಿತ್ತು. ಅಲ್ಲಿದ್ದ ಸ್ಥಳೀಯರು ಇದನ್ನು ಗಮನಿಸಿ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಘಟನೆ ಸಂಬಂಧ ಕನ್ನಡ ಪರ ಸಂಘಟನೆಗಳು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ :ತಾಂತ್ರಿಕ ದೋಷ; ಇಸ್ರೋದ 101ನೇ ಉಪಗ್ರಹ ಉಡಾವಣೆ ವಿಫಲ
ಘಟನೆ ಬಳಿಕ ಎಚ್ಚೆತ್ತ ಮಡಿವಾಳ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದು, ಹೋಟೆಲ್ನ್ನು ಸೀಜ್ ಮಾಡಿದ್ದು. ಹೋಟೆಲ್ ಮ್ಯಾನೇಜರ್ ಸರ್ಫಜ್ನನ್ನು ಬಂಧಿಸಲಾಗಿದ್ದು. ಅಷ್ಟೇ ಅಲ್ಲದೇ ಹೋಟೆಲ್ ಮಾಲೀಕ ಜಮ್ಶೆದ್ ಮೇಲೂ ಎಫ್ಐಆರ್ ದಾಖಲಿಸಲಾಗಿದ. ಸದ್ಯ ಹೋಟೆಲ್ ಮಾಲೀಕ ಕೇರಳದಲ್ಲಿದ್ದಾನೆ. ಬೋರ್ಡ್‌ನಲ್ಲಿ ಅಹವೇಳನಕಾರಿ ಪದವನ್ನ ಬರೆದಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.