Saturday, May 17, 2025

ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡುತ್ತಿದ್ದ ದೇಶದ್ರೋಹಿ ಯುಟ್ಯೂಬರ್ ಬಂಧನ

ಪಾಕಿಸ್ತಾನಕ್ಕೆ ಸೂಕ್ಷ್ಮ ಮಾಹಿತಿಯನ್ನ ರವಾನಿಸುತ್ತಿದ್ದ ಆರೋಪದ ಮೇಲೆ ಭಾರತೀಯ ಆರು ಪ್ರಜೆಗಳನ್ನ ಬಂಧಿಸಿದ್ದು. ಹರಿಯಾಣ ಮತ್ತು ಪಂಜಾಬ್​ನ 6 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ಮಹಿಳೆ ಯೂಟ್ಯೂಬರ್​ ಆಗಿದ್ದು. ಈಕೆಯನ್ನು ಜ್ಯೋತಿ ಮಲ್ಹೋತ್ರ ಎಂದು ಗುರುತಿಸಲಾಗಿದೆ.

ಭಾರತದ ಸೂಕ್ಷ್ಮ ಮಾಹಿತಿಯನ್ನ ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಜ್ಯೋತಿ ಮಲ್ಹೋತ್ರಾ ಎಂಬಾಕೆ  “ಟ್ರಾವೆಲ್ ವಿತ್ ಜೋ” ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು. ಈಕೆ 2023ರಲ್ಲಿ ಪಾಕಿಸ್ತಾನಿ ಏಜೆಂಟ್​ಗಳ ಮೂಲಕ ಪಾಕಿಸ್ತಾನದ ವೀಸಾ ಪಡೆದು, ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಳು. ಈ ಪ್ರವಾಸದ ಸಮಯದಲ್ಲಿ ಈಕೆ ನವದೆಹಲಿಯಲ್ಲಿದ್ದ ಪಾಕಿಸ್ತಾನದ ಹೈ ಕಮಿಷನ್​​ ಸಿಬ್ಬಂದಿ ಎಹ್ಸಾನ್​-ಉರ್​-ರೆಹಮಾನ್​ ಅಲಿಯಾಸ್​ ಡ್ಯಾನಿಶ್​ ಎಂಬಾತನ ಜೊತೆ ನಿಕಟ ಸಂಬಂಧ ಬೆಳೆಸಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ :ಮೇಧಾವಿ ತರ ಪೋಸ್​ ಕೊಡೊ ಸಂತೋಷ್​ ಲಾಡ್​ ಒಬ್ಬ ತಿಳಿಗೇಡಿ: ಪ್ರತಾಪ್​ ಸಿಂಹ ವಾಗ್ದಾಳಿ

ಸರ್ಕಾರದಿಂದ ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲ್ಪಟ್ಟ ಮತ್ತು ಮೇ 13, 2025 ರಂದು ಹೊರಹಾಕಲ್ಪಟ್ಟ ಡ್ಯಾನಿಶ್, ಜ್ಯೋತಿಯನ್ನು ಅನೇಕ ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಗಳಿಗ ಪರಿಚಯಿಸಿದನೆಂದು ಆರೋಪಿಸಲಾಗಿದೆ. ಇನ್ನೂ ಜ್ಯೋತಿ ವಾಟ್ಸಪ್​, ಟೆಲಿಗ್ರಾಮ್​ ಮತ್ತು ಸ್ನ್ಯಾಪ್​ಚಾಟ್​ಗಳ ಮೂಲಕ ಪಾಕಿಸ್ತಾನದ ಏಜೆಂಟ್​ಗಳ ಜೊತೆ ಸಂಪರ್ಕದಲ್ಲಿದ್ದಳು. ಶಕೀರ್​ ಅಲಿಯಾಸ್​ ರಾಣಾ ಶಹಬಾಜ್​ ಪ್ರಮುಖನಾಗಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಸರಿಗಮಪ ಸಿಂಗರ್​ ಪೃಥ್ವಿ ಭಟ್‌ ಅದ್ಧೂರಿ ರಿಸೆಪ್ಷನ್: ವಿಜಯ್​ ಪ್ರಕಾಶ್​ ಸೇರಿದಂತೆ ಹಲವರು ಭಾಗಿ

ಜ್ಯೋತಿ ಮಲ್ಹೋತ್ರಾ ಭಾರತದ ಸೂಕ್ಷ್ಮ ಸ್ಥಳಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು. ತನ್ನ ಸೋಷಿಯಲ್​ ಮಿಡಿಯಾದಲ್ಲಿ ಪಾಕಿಸ್ತಾನದ ಬಗ್ಗೆ ಸಕರಾತ್ಮಕ ಚಿತ್ರಣ ಬಿಂಬಿಸಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲದೇ ಪಾಕಿಸ್ತಾನದ ಏಜೆಂಟ್​ಗಳೊಂದಿಗೆ ಆತ್ಮೀಯತೆ ಸಾಧಿಸಿದ್ದ ಈಕೆ ಅವರೊಂದಿಗೆ ಇಂಡೋನೇಷಿಯಾದ ಬಾಲಿಗೂ ಹೋಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜ್ಯೋತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 152 ಮತ್ತು 1923 ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 3, 4 ಮತ್ತು 5 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು. ಪ್ರಕರಣವನ್ನು ಹಿಸಾರ್‌ನ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.

RELATED ARTICLES

Related Articles

TRENDING ARTICLES