Sunday, August 24, 2025
Google search engine
HomeUncategorizedತಿರುಪತಿ ತಿಮ್ಮಪ್ಪನಿಗೆ 3.63 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣ ನೀಡಿದ ಸಂಜೀವ್​ ಗೋಯೆಂಕಾ

ತಿರುಪತಿ ತಿಮ್ಮಪ್ಪನಿಗೆ 3.63 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣ ನೀಡಿದ ಸಂಜೀವ್​ ಗೋಯೆಂಕಾ

ತಿರುಪತಿ :ಲಕ್ನೋ ಐಪಿಎಲ್ ಟೀಂ ಮಾಲೀಕ ಸಂಜೀವ್ ಗೋಯೆಂಕಾ ತಿರುಪತಿಗೆ ಭೇಟಿ ನೀಡಿದ್ದು. ತಿಮ್ಮಪ್ಪನಿಗೆ ಸುಮಾರು 3.63 ಕೋಟಿ ಮೌಲ್ಯದ 5 ಕೆಜಿ ಚಿನ್ನಾಭರಣವನ್ನ ದೇಣಿಗೆಯಾಗಿ ನೀಡಿದ್ದಾರೆ. ಐಪಿಎಲ್​ ಪುನರ್​ ಆರಂಭವಾಗುವ ಒಂದು ದಿನದ ಮುನ್ನ ಸಂಜೀವ್​ ಗೋಯೆಂಕಾ ತಿರುಪತಿಗೆ ಭೇಟಿ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಉದ್ವಿಘ್ನತೆ ಕಾರಣದಿಂದ ಐಪಿಎಲ್​ ಪಂದ್ಯಾವಳಿಯನ್ನು ಕೆಲದಿನಗಳ ಕಾಲ ಮುಂದೂಡಲಾಗಿತ್ತು. ಇದೀಗ ಎರಡು ದೇಶಗಳ ನಡುವೆ ಕದನ ವಿರಾಮ ಜಾರಿಯಾದ ಕಾರಣ ಐಪಿಎಲ್​ ಇಂದಿನಿಂದ (ಮೇ,17) ಪುನರಾಂಭವಾಗುತ್ತಿದೆ. ಈ ನಡುವೆ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಇಂದು ಭಾರತದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ತಮ್ಮ ಕುಟುಂಬಸ್ಥರೊಂದಿಗೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ :ವಿಶ್ವಗುರುವನ್ನ ದೇಶ ದ್ರೋಹಿ ಎಂದು ಜೈಲಿಗೆ ಹಾಕಬೇಕು: ಎಂ. ಲಕ್ಷ್ಮಣ್​​

ಆರ್‌ಪಿ-ಸಂಜೀವ್ ಗೋಯೆಂಕಾ ಗ್ರೂಪ್ ಅಧ್ಯಕ್ಷ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಐಪಿಎಲ್ ತಂಡದ ಮಾಲೀಕರಾದ ಸಂಜೀವ್ ಗೋಯೆಂಕಾ ಮತ್ತು ಅವರ ಕುಟುಂಬವು ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದು. ದೇವರ ದರ್ಶನ ಮಾಡಿದ ಬಳಿಕ ಅವರು ವೆಂಕಟೇಶ್ವರ ಸ್ವಾಮಿಗೆ 3.63 ಕೋಟಿ ರೂ. ಬೆಲೆ ಬಾಳುವ ಸುಮಾರು 5 ಕೆಜಿ ತೂಕದ ಚಿನ್ನಾಭರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಸಂಜೀವ್ ಗೋಯೆಂಕಾ ನೀಡಿದ ಚಿನ್ನಾಭರಣದ ಸೆಟ್​ನಲ್ಲಿ ದೇವರ ಕೈಮುದ್ರೆಗಳು, ಚಿನ್ನಾಭರಣಗಳು ಸೇರಿವೆ. ಇವುಗಳನ್ನು ಸಂಕೀರ್ಣವಾಗಿ ವಿನ್ಯಾಸಗೊಳಿಸಲಾಗಿದೆ. ಈ ಆಭರಣಗಳು ಅಮೂಲ್ಯ ವಜ್ರಗಳು ಮತ್ತು ರತ್ನಗಳಿಂದ ಕೂಡಿದೆ. ಈ ಅಮೂಲ್ಯ ಕೊಡುಗೆಗಳನ್ನು ಪ್ರತಿವರ್ಷ ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಭಾರತದ ಅತ್ಯಂತ ಪೂಜ್ಯ ಯಾತ್ರಾ ಸ್ಥಳಗಳಲ್ಲಿ ಒಂದಾದ ತಿರುಮಲ ದೇವಾಲಯದ ಪ್ರಧಾನ ದೇವರು ವೆಂಕಟೇಶ್ವರನಿಗೆ ಅರ್ಪಿಸಲಾಯಿತು. ಇದನ್ನೂ ಓದಿ :ತಿರುಪತಿಗೆ ಭೇಟಿ ಕೊಟ್ಟ ಇಸ್ರೋ ಅಧ್ಯಕ್ಷ ವಿ. ನಾರಾಯಣ

ಈ ಆಭರಣಗಳ ಔಪಚಾರಿಕ ಹಸ್ತಾಂತರ ಸಮಾರಂಭವು ದೇವಾಲಯ ಸಂಕೀರ್ಣದೊಳಗಿನ ರಂಗನಾಯಕಕುಲ ಮಂಟಪದಲ್ಲಿ ನಡೆಯಿತು. ಅಲ್ಲಿ ಸಂಜೀವ್ ಗೋಯೆಂಕಾ ನೀಡಿದ ಚಿನ್ನವನ್ನು ಟಿಟಿಡಿ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಚಿ. ವೆಂಕಯ್ಯ ಚೌಧರಿ ಸ್ವೀಕರಿಸಿದರು. ಪ್ರತಿವರ್ಷ ಬೇರೆಲ್ಲ ದೇವಾಲಯಗಳಿಗೆ ಬರುವುದಕ್ಕಿಂತ ಹೆಚ್ಚಿನ ಚಿನ್ನಾಭರಣ ಮತ್ತು ಹಣದ ದೇಣಿಗೆ ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಹರಿದುಬರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments