Saturday, May 17, 2025

ಮುಂಬೈ ವಿಮಾನ ನಿಲ್ದಾಣದಲ್ಲಿ ಐಸಿಸ್ ಉಗ್ರರನ್ನು ಬಂಧಿಸಿದ NIA

ದೆಹಲಿ: ಪುಣೆಯ ಐಸಿಸ್​ ಮಾಡ್ಯೂಲ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಬಂಧಿತರನ್ನು ಅಬ್ದುಲ್ಲಾ ಫಯಾಜ್​ ಶೇಖ್​ ಮತ್ತು ತಲ್ಹಾ ಲಿಯಾಕತ್​ ಖಾನ್​ ಎಂದು ಗುರುತಿಸಲಾಗಿದೆ.

ಇಂಡೋನೇಷ್ಯಾದ ಜಕಾರ್ತದಿಂದ ಮುಂಬೈಗೆ ಬಂದಿದ್ದ ಆರೋಪಿಗಳನ್ನು ಎನ್​ಐಎ ಬಂಧಿಸಿದ್ದು. ಬಂಧಿತ ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಲಿಯಾಕತ್ ಖಾನ್ ಮಹಾರಾಷ್ಟ್ರ, ಗುಜರಾತ್ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಐಸಿಸ್ ಮೂಲಕ ಪ್ರಾಯೋಜಿತ ಪಿತೂರಿಯಲ್ಲಿ ಇಬ್ಬರೂ ತೊಡಗಿದ್ದರು. ತನಿಖೆಯಲ್ಲಿ ಈ ಬಂಧನವು ಪ್ರಮುಖ ಹಂತವೆಂದು ಪರಿಗಣಿಸಲಾಗಿದೆ. ಅವರನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇದನ್ನೂ ಓದಿ :ಕನ್ನಡಮ್ಮನಿಗೆ ಅಶ್ಲೀಲ ಭಾಷೆ ಬಳಸಿ ಅಪಮಾನ: ಹದ್ದು ಮೀರಿದ ಅನ್ಯಭಾಷಿಕರ ಪುಂಡಾಟ

ಅಬ್ದುಲ್ಲಾ ಫೈಯಾಜ್ ಶೇಖ್ ಅಲಿಯಾಸ್ ಡಯಾಪರ್‌ವಾಲಾ ಮತ್ತು ತಲ್ಹಾ ಖಾನ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಎನ್‌ಐಎ ಈ ಹಿಂದೆ ಘೋಷಿಸಿತ್ತು. ಬಂಧಿತ ಉಗ್ರರು ಈಗಾಗಲೇ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿದ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಬಂಧಿಸಲ್ಪಟ್ಟಿರುವ ಮತ್ತು ನ್ಯಾಯಾಂಗ ಬಂಧನದಲ್ಲಿರುವ ಎಂಟು ಇತರ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ ಪುಣೆ ಸ್ಲೀಪರ್ ಸೆಲ್ ಸದಸ್ಯರು ಸಹ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಎನ್​ಐಎ ತಿಳಿಸಿದೆ.

 

RELATED ARTICLES

Related Articles

TRENDING ARTICLES