Saturday, May 17, 2025

ಅನೈತಿಕ ಸಂಬಂಧ: ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡಿದ ಮಹಿಳೆಯ ಕೊ*ಲೆ

ಗದಗ : ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಹಣಕ್ಕಾಗಿ ಬ್ಲಾಕ್​ಮೇಲ್​ ಮಾಡಿದ್ದಕ್ಕೆ ಕೊಲೆ ಮಾಡಿರುವ ಘಟನ ಗದಗದಲ್ಲಿ ನಡೆದಿದ್ದು. ಕೊಲೆ ಮಾಡಿದ ಯುವಕನನ್ನು 30 ವರ್ಷದ ಸುನೀಲ್​ ಎನ್ನಲಾಗಿದ್ದು. ಕೊಲೆಯಾದ ದುರ್ದೈವಿಯನ್ನು 35 ವರ್ಷದ ಲಕ್ಷ್ಮೀ ಇಂಗಳಗಿ ಎಂದು ಗುರುತಿಸಲಾಗಿದೆ.

ಕಳೆದ 2025 ಏಪ್ರಿಲ್ 23 ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ,  ಸೂರಣಗಿ ಗ್ರಾಮದ ದೊಡ್ಡೂರ ರಸ್ತೆಯ ಬಯಲು ಬಸವೇಶ್ವರ ದೇವಸ್ಥಾನ ಬಳಿ 35ವರ್ಷದ ಮಹಿಳೆ ಅನಾಮಧೆಯ ಶವ ಪತ್ತೆಯಾಗಿತ್ತು. ಮಹಿಳೆ ಶವಪತ್ತೆಯಾದ ಸುದ್ದಿ ಗ್ರಾಮದಲ್ಲಿ ಹಬ್ಬುತ್ತಿದ್ದಂತೆ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. ಗಾಬರಿಯಾದ ಸೂರಣಗಿ ಗ್ರಾಮಸ್ಥರು ತಕ್ಷಣ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಲಕ್ಷ್ಮೇಶ್ವರ ಸಿಪಿಐ ನಾಗರಾಜ್ ಮಾಡಳ್ಳಿ ಮತ್ತು ತಂಡ ಪರಿಶೀಲನೆ ನಡೆಸಿದ್ದರು. ಇದನ್ನೂ ಓದಿ :ಬಿಜೆಪಿಯವರು ಕರೆಯದೆ ಅವರಪ್ಪನಾಣೆ ನಾನು ಬಿಜೆಪಿಗೆ ಹೋಗಲ್ಲ: ಯತ್ನಾಳ್​

ತನಿಖೆಯನ್ನ ಚುರುಕುಗೊಳಿಸಿದ್ದ ಪೊಲೀಸರಿಗೆ ಸಾವನ್ನಪ್ಪಿದ್ದ ಮಹಿಳೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ನೇಲೊಗಲ್ ಗ್ರಾಮದ ಲಕ್ಷ್ಮೀ ಇಂಗಳಗಿ ಎಂಬುದು ಗೊತ್ತಾಗಿತ್ತು. ಸಹೋದರಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಲಕ್ಷ್ಮೀ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಳು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು ಆರೋಪಿ ಹೆಡೆಮುರಿ ಕಟ್ಟಿದ್ದಾರೆ.

ಏನಿದು ಪ್ರಕರಣ..!

ಕೊಲೆಯಾದ ಲಕ್ಷ್ಮೀಗೆ ಮೂವರು ಮಕ್ಕಳಿದ್ದು. ಕೆಲ ವರ್ಷಗಳಿಂದ ಗಂಡನಿಂದ ದೂರವಾಗಿದ್ದಳು. ಬದುಕು ಸಾಗಿಸಲು ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಳು. ಆ ವೇಳೆಯಲ್ಲಿ ಹಾವೇರಿ ಜಿಲ್ಲೆಯ ಸುನೀಲ್ ಎನ್ನುವ ಹದಿಹರೆಯದ ಯುವಕ ಪರಿಚಯವಾಗಿದ್ದು, ಇಬ್ಬರು ನಡುವೆ ಲವ್ ಆಗಿದೆ. ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧ ಸಹ ಬೆಳೆದಿತ್ತು. ಆದರೆ 30 ವರ್ಷದ ಸುನೀಲ್ ಮದುವೆ ಮಾಡಲು ಅವರ ಕುಟುಂಬಸ್ಥರು ತಯಾರಿ ನಡೆಸಿದ್ದರು. ಇದನ್ನೂ ಓದಿ :ರಾಷ್ಟ್ರದ ಹಿತಾಸಕ್ತಿ ವಿಚಾರದಲ್ಲಿ ಜವಬ್ದಾರಿ ನೀಡಿರುವುದು ಗೌರವದ ಸಂಗತಿ: ಶಶಿ ತರೂರ್​

ಅದೇ ವೇಳೆ ಲಕ್ಷ್ಮೀ 5 ಲಕ್ಷ ಹಣ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಇಲ್ಲವಾದರೆ ನಮ್ಮ ಅನೈತಿಕ ಸಂಬಂಧ ವಿಷಯ ಬಹಿರಂಗ ಮಾಡುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡಲು ಆರಂಭ ಮಾಡಿದ್ದಾಳೆ. ಇನ್ನು
ಲಕ್ಷ್ಮೀಯ ಬ್ಲ್ಯಾಕ್​​ಮೇಲ್​ನಿಂದ ಕಂಗಾಲಾದ ಯುವಕ, ಸುನೀಲ್ ಗೆಳೆಯರಾದ ಸಿದ್ದಪ್ಪ, ನಟರಾಜ್, ರಮೇಶ ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ.

ಅದರಂತೆ ಏಪ್ರಿಲ್ 22 ರಂದು ಲಕ್ಷ್ಮೀಯನ್ನು ಕಾರಿನಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಕೇಬಲ್ ವೈಯರಿನಿಂದ ಕುತ್ತಿಗೆಗೆ ಬಿಗಿದು ಕೊಲೆ‌‌‌‌ ಮಾಡಿದ್ದಾರೆ. ನಂತರ ಮೃತ ದೇಹವನ್ನು ಸೂರಣಗಿ ಬಳಿ ಎಸೆದು ಪರಾರಿಯಾಗಿದ್ದಾರೆ. ಸದ್ಯ ಪೊಲೀಸರು ಚಾಣಾಕ್ಷಣದಿಂದ ಪ್ರಕರಣ ಭೇದಿಸಿ ಕೊಲೆಗಾರರನ್ನ ಹಡೆಮುರಿ ಕಟ್ಟುವಲ್ಲಿ ಲಕ್ಷ್ಮೇಶ್ವರದ ಪೊಲೀಸರು ಯಶಸ್ವಿಯಾಗಿದ್ದಾರೆ, ಆರೋಪಿಗಳ. ಇದನ್ನೂ ಓದಿ :ಕದನ ವಿರಾಮದ ನಡುವೆ ಐಪಿಎಲ್​ ಪುನರಾರಂಭ: ಸ್ಟೇಡಿಯಂ ಸುತ್ತಮುತ್ತ ನೋ ಪಾರ್ಕಿಂಗ್​

ಒಟ್ಟಿನಲ್ಲಿ ಮೂರು ಮಕ್ಕಳ ತಾಯಿ ಮದುವೆ ಆಗದ ಯವಕನನ್ನು ಹಣಕ್ಕಾಗಿ ಬ್ಲ್ಯಾಕ್​ ಮೇಲ್​ ಮಾಡಲು‌ ಹೋಗಿ ಹೆಣವಾಗಿದ್ದಾಳೆ. ಇನ್ನು ಮದುವೆ ಮಾಡಿಕೊಂಡು ಸುಂದರ ಜೀವನ ನಡೆಸಬೇಕಾದ ಯುವಕ, ಮಹಿಳೆ ಹಿಂದೆ ಬಿದ್ದು ಇದೀಗ ಜೈಲು ಸೇರಿದ್ದಾನೆ. ಸ್ನೇಹಿತನಿಗೆ ಸಹಾಯ ಮಾಡಲೂ ಹೋದ ಮೂವರು ಗೆಳೆಯರು ಸಹ ಜೈಲಿನಲ್ಲಿ ಮುದ್ದೆ ಮುರಿಯುವಂತಾಗಿದೆ.

RELATED ARTICLES

Related Articles

TRENDING ARTICLES